Advertisement
ನಾಟಿ ಆರಂಭದಲ್ಲಿ ಮಣ್ಣಿನ ಗುಣಮಟ್ಟ ಗಮನಿಸಬೇಕು. ಅದಕ್ಕೆ ತಕ್ಕುದಾದ ಬೀಜ/ಗಿಡ ನಾಟಿ ಮಾಡಬೇಕು. ಮಣ್ಣು ಪೌಷ್ಟಿಕ ಅಂಶ ಹೊಂದಿರದೇ ಇದ್ದಲ್ಲಿ, ಅಲ್ಲಿ ಗಿಡ ಬಳಿತುಕೊಳ್ಳಲಾರದು. ಫಸಲು ಸಿಗದು. ಹಾಗಾಗಿ ಆರಂಭದಲ್ಲಿಯೇ ಮಣ್ಣಿನ, ನಾಟಿಗೆ ಬಳಸುವ ಗಿಡ, ಬೀಜದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.
ನಾಟಿ ಮಾಡಿದ ಮೇಲೆ ಅದಕ್ಕೆ ತಕ್ಕಂತೆ ಗೊಬ್ಬರ, ನೀರು ಒದಗಿಸಬೇಕು. ತರಗೆಲೆ ಗೊಬ್ಬರ ಅಥವಾ ಹಟ್ಟಿ ಗೊಬ್ಬರ ಹೆಚ್ಚು ಸೂಕ್ತ. ಇದರಿಂದ ಮಣ್ಣಿನ ಗುಣಮಟ್ಟವೂ ಉಳಿದುಕೊಳ್ಳುತ್ತದೆ. ಗಿಡವೂ ಬೆಳೆಯುತ್ತದೆ. ಸಾವಯವ ತರಕಾರಿ ರುಚಿಯು ದೊರೆಯುತ್ತದೆ. ಈ ರೀತಿ ಹಟ್ಟಿ ಗೊಬ್ಬರ ಮೂರು ವಿಧದಲ್ಲಿಯೂ ಲಾಭವಿದೆ. ನೀರಿನ ಅತಿ ಉಪಯೋಗವು ಹಾಳು. ಹಾಗಾಗಿ ಜಡಿ ಮಳೆ ಕಡಿಮೆ ಆದ ಮೇಲೆ ನಾಟಿ ಪ್ರಕ್ರಿಯೆ ಆರಂಭಿಸಬೇಕು. ಮಳೆಗಾಲದ ನಡು ಹೊತ್ತಲ್ಲಿ, ಚಳಿಗಾಲದ ತನಕ ಫಸಲು ಕೊಯ್ದು ದಿನ ಬಳಕೆಗೆ ಬಳಸಬಹುದು. ಅದು ನಾವು ಬೆಳೆಯುವ ಬೆಳೆಗಳ ಮೇಲೆ ಆಧಾರಿತವಾಗಿದೆ. ಹಲವು ಅವಕಾಶ
ಅಡಿಕೆ ಒಣಗಲು ಹಾಕಿದ ಅಂಗಳದಲ್ಲಿ ಕೃಷಿ ಮಾಡುವುದು ಹೇಗಪ್ಪಾ ಎಂಬ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ಗೋಣಿ ಚೀಲ, ಇತರೆ ಪರಿಕರ ಬಳಸಿ, ಹದವಾದ ಮಣ್ಣು, ಗೊಬ್ಬರ ತುಂಬಿ ಬಗೆ-ಬಗೆಯ ತರಕಾರಿ ಕೃಷಿ ಬೆಳೆಯಬಹುದು. ಅಂತಹ ಕೃಷಿಯಲ್ಲಿ ಭರಪೂರ ಫಸಲು, ಆದಾಯ ಪಡೆದವರು ಇದ್ದಾರೆ.
Related Articles
Advertisement
ಇಂತಹ ಹಲವು ಪ್ರಯತ್ನಗಳು ಮಳೆಗಾಲದಲ್ಲಿ ದಿನ ನಿತ್ಯದ ಖರ್ಚು ಕಡಿಮೆ ಮಾಡಲು, ಅದರೊಂದಿಗೆ ಒಂದಷ್ಟು ಆದಾಯ ಗಳಿಸಲು ಇರುವ ಅವಕಾಶ ಕೂಡ ಆಗಿದೆ. ಬೇಸಗೆ ಕಾಲದಲ್ಲಿ ಸುಡು ಮಣ್ಣು ತಯಾರಿಸಿದ ಸ್ಥಳದಲ್ಲಿಯೂ ತರಕಾರಿ ನಾಟಿ ಉತ್ತಮ. ಮಣ್ಣು ಫಲವತ್ತಾಗಿ, ಹೆಚ್ಚಿನ ಇಳುವರಿ ಸಿಗಬಹುದು. ಕೆಲವರು ಮಳೆಗಾಲದ ಕೃಷಿಗೆಂದೇ ಅಂತಹ ಗೊಬ್ಬರ ತಯಾರಿ ಮಾಡುತ್ತಾರೆ. ಜತೆಗೆ ರೋಗ ಬಾರದಂತೆ ನಿಗಾ ವಹಿಸಬೇಕು. ಸೂಕ್ತ ಔಷಧ ಸಿಂಪಡಿಸಬೇಕು.
ಆರೈಕೆಗೆ ಬೇಕು ಆದ್ಯತೆಮನೆ ಅಂಗಳದ ತರಕಾರಿಗೆ ಎಕರೆಗಟ್ಟಲೆ ಜಾಗ ಬೇಕಿಲ್ಲ. ಗದ್ದೆಯೇ ಆಗಬೇಕು ಎಂದಿಲ್ಲ. ಕಣ್ಣಾಡಿಸುವಷ್ಟು ಖಾಲಿ ಜಾಗ ಇದ್ದರೆ ಸಾಕು. ವೈಜ್ಞಾನಿಕ ಪದ್ಧತಿ, ನಾಟಿ ವಿಧಾನ ನಿಯಮ ಅನುಸರಿಸಿಯೇ ತರಕಾರಿ ಮಾಡಬೇಕಿಲ್ಲ. ಒಂದಿಷ್ಟು ಜಾಗ ಕಂಡಲ್ಲಿ, ಬೀಜ ಬಿತ್ತಿದರೆ ಅದು
ಸೊಂಪಾಗಿ ಮೊಳಕೆಯೊಡೆಯುತ್ತದೆ. ಅಲ್ಲಿಂದ ಅನಂತರ ಆರೈಕೆ ಕಡೆ ಗಮನ ಹರಿಸಬೇಕು.