ಬೆಂಗಳೂರು: ಬೆಂಗಳೂರು ನಗರವನ್ನು ಇನ್ನಷ್ಟು ಹಸಿರುಗೊಳಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಹಸಿರು ಬೆಂಗಳೂರಿಗಾಗಿ ಈಗಿರುವ ಉದ್ಯಾನವನಗಳ ಅಭಿವೃದ್ಧಿ, ಲಾಲ್‌ಬಾಗ್ ಮಾದರಿಯ ನೂತನ ಉದ್ಯಾನವನ ನಿರ್ಮಾಣ, ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ನೆಡುವುದು, ಈಗಿರುವ ಮರಗಳ ಸೂಕ್ತ ಆರೈಕೆ, ಸ್ಯಾಂಕಿ ಕರೆ ಮಾದರಿಯಲ್ಲಿ ಕ್ಷೇತ್ರದ ಕೆರೆಗಳ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಜಯನಗರದ ಸಾವಯವ ಹೋಟೇಲ್‌ನಲ್ಲಿ ಭಾನುವಾರ ಪರಿಸರವಾದಿದೊಂದಿಗೆ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆಸಿದ ಅವರು ತಮ್ಮ ಕನಸಿನ ಯೋಜನೆಗಳನ್ನು ಹಂಚಿಕೊಂಡರು. ಬೆಂಗಳೂರಿನ ಪರಿಸರವನ್ನು ಕಾಪಾಡುವುದು ನಮ್ಮ ಪ್ರಥಮ ಆಧ್ಯತೆ ಆಗಿರಲಿದೆ. ಈಗಿನ ವಾಯು ಮಾಲಿನ್ಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಒತ್ತು ನೀಡಲಿದ್ದೇವೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹೀಗಾಗಿ ನಗರದ ಸೌಂದರ್ಯ ಹಾಗೂ ಮರಗಳನ್ನು ನೆಡುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಿದ್ದೇನೆ ಎಂದರು.
ಪರಿಸರವಾದಿಗಳ ಸಭೆಯಲ್ಲಿ ಚಿತ್ರ ನಿರ್ದೇಶಕ ಅಪೂರ್ವ ಕಾಸರವಳ್ಳಿ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ, ನೃತ್ಯ ಕಲಾದೆ ವಂದನಾ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಪರಿಸರವಾದಿ ಡಾ.ಆರ್.ಎಚ್.ಸಾಹುಕಾರ್, ರಾಮಕೃಷ್ಣ ಭಟ್, ಸಿ.ಯತಿರಾಜ್, ಸಮಾಜವಾದಿ ಚಿಂತಕ ಜಿ.ಸುಂದರ್, ಸಾವಯವ ಕೃಷಿಕರಾದ ಜಯರಾಂ ಭಾಗವಸಿದ್ದರು.
ನಂತರ ಬಿ.ಕೆ.ಹರಿಪ್ರಸಾದ್ ಅವರು ಬಸವನಗುಡಿಯ ಹನುಮಂತನಗರದಲ್ಲಿ ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಗಂಗಾಧರೇಶ್ವರ ಸನ್ನಿಧಿಯಲ್ಲಿ ಆರ್ಶಿರ್ವಾದ ಪಡೆದು ರ್ಯಾಲಿಗೆ ಚಾಲನೆ ನೀಡಲಾುತು. ಮರಾಠ ಹಾಸ್ಟೆಲ್‌ನಲ್ಲಿ ಕಮ್ಮ ನಾಯ್ದು ಸಮುದಾಯದ ನಾಯಕರೊಂದಿಗೆ ನಡೆದ ಸಭೆಯಲ್ಲಿ ಹರಿಪ್ರಸಾದ್ ಅವರು ಪಾಲ್ಗೊಂಡಿದ್ದರು. ಇದೇ ವೇಳೆ ಎನ್‌ಎಸ್‌ಯುಐ ಘಟಕದ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಮತಪ್ರಚಾರದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.