Advertisement

ಅಖಾಡದಲ್ಲಿ ಒಂದೇ ನಾಮದ ಹಲವು ವ್ಯಕ್ತಿಗಳು!

04:31 PM Apr 25, 2023 | Team Udayavani |

ಚಿಕ್ಕಬಳ್ಳಾಪುರ: ಕೆ.ಎಚ್‌.ಪುಟ್ಟಸ್ವಾಮಿಗೌಡ, ಕೆ.ಪುಟ್ಟಸ್ವಾಮಿಗೌಡ, ಪುಟ್ಟಸ್ವಾಮಿ, ಎಂ.ಕೃಷ್ಣಾರೆಡ್ಡಿ, ಕೃಷ್ಣರೆಡ್ಡಿ, ಕೆ.ಸುಧಾಕರ್‌, ಎನ್‌.ಸುಧಾಕರ್‌, ಕೆ. ಸುಧಾಕರ್‌, ಡಾ.ಎಂ.ಸಿ.ಸುಧಾಕರ್‌, ಡಾ.ಕೆ. ಸುಧಾಕರ್‌, ಎನ್‌.ಸುಧಾಕರ್‌. ಇವು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಂದೇ ನಾಮದ ಹಲವು ವ್ಯಕ್ತಿಗಳ ಹೆಸರುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾದಂತೆ ಗೆಲುವಿಗಾಗಿ ಸಾಕಷ್ಟು ತಂತ್ರಗಳನ್ನು ಹೆಣೆದಿದ್ದ ರಾಜಕೀಯ, ಎದುರಾಳಿ ಪಕ್ಷಗಳು ಪ್ರತಿಸ್ಪರ್ಧಿ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸುವ ದಿಸೆಯಲ್ಲಿ ರಾಜಕೀಯ ತಂತ್ರಗಾರಿಕೆ ನಡೆಸಿ ಹಲವು ಕ್ಷೇತ್ರಗಳಲ್ಲಿ ಎದುರಾಳಿ ಹೆಸರು ಹೋಲುವ ವ್ಯಕ್ತಿಗಳನ್ನು ಹುಡುಕಾಟ ನಡೆಸಿ ತಂದು ನಾಮಪತ್ರ ಸಲ್ಲಿಸಿದ್ದು, ಅವರು ಅಖಾಡದಲ್ಲಿ ಉಳಿಯುವ ಮೂಲಕ ಒಂದು ರೀತಿ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಕಾಯಕದಲ್ಲಿ ನಿರತರವಾಗಿದ್ದಾರೆ. ಮತಗಳ ವಿಭಜನೆ ಆಗಬೇಕೆಂಬ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಪ್ರತಿ ಬಾರಿ ಚುನಾವಣೆಯಲ್ಲಿ ಈ ರೀತಿಯ ತಂತ್ರಗಳನ್ನು ಹೂಡುವ ಮೂಲಕ ಪ್ರತಿಸ್ಪರ್ಧಿಗಳಿಗೆ ಮತದ ಪ್ರಮಾಣ ಕಡಿಮೆ ಮಾಡುವ ಕೆಲಸ ಮಾಡಿ ಸುಲಭವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ರೀತಿ ಮಾಡುತ್ತಿದ್ದು, ಇದೀಗ ಜಿಲ್ಲೆಯ ಚುನಾವಣಾ ಅಖಾಡದಲ್ಲಿ ಒಂದೇ ಹೆಸರಿನ ಹಲವು ವ್ಯಕ್ತಿಗಳು ಸ್ಪರ್ಧೆ ಮಾಡಿರುವುದು ಸಾಕಷ್ಟು ಚರ್ಚೆ ಹಾಗೂ ಕುತೂಹಲ ಮೂಡಿಸಿದೆ.

ವಿಶೇಷವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.. ಕೆ.ಸುಧಾಕರ್‌ ಹೆಸರನ್ನೇ ಹೋಲುವ ಎನ್‌. ಸುಧಾಕರ್‌, ಚಿಂತಾಮಣಿಯಲ್ಲಿ ಡಾ.ಎಂ.ಸಿ. ಸುಧಾಕರ್‌ ಹೆಸರು ಹೋಲುವ ಕೆ.ಸುಧಾಕರ್‌, ಅದೇ ರೀತಿ ಎಂ.ಕೃಷ್ಣಾರೆಡ್ಡಿ ಹೆಸರು ಹೋಲುವ ಕೃಷ್ಣಾರೆಡ್ಡಿ ಹೆಸರುಗಳ ವ್ಯಕ್ತಿಗಳು ನಾಮಪತ್ರ ಸಲ್ಲಿಸಿ ಅಖಾಡದಲ್ಲಿ ಉಳಿದುಕೊಂಡಿದ್ದಾರೆ.

ಗೌರಿಬಿದನೂರಲ್ಲಿ 4 ಮಂದಿ ಪುಟ್ಟಸ್ವಾಮಿಗೌಡರು: ಗೌರಿಬಿದನೂರು ಈ ಬಾರಿ ಪಕ್ಷೇತರರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಪಕ್ಷೇತರರ ಸಂಖ್ಯೆ ಹೆಚ್ಚಾಗಿರುವುದರ ಜತೆಗೆ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿರುವ ಕೆ.ಎಚ್‌.ಪುಟ್ಟಸ್ವಾಮಿಗೌಡರನ್ನು ಮಣಿಸಲು ಅಲ್ಲಿನ ಎದುರಾಳಿಗಳು ಪುಟ್ಟಸ್ವಾಮಿಗೌಡ ಎಂಬ ಮೂರು ಮಂದಿಯನ್ನು ಚುನಾವಣಾ ಕಣಕ್ಕಿಳಿಸಿದ್ದು, ಮತದಾರರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next