Advertisement
ನದಿಯಲ್ಲಿ ಬೋಟ್ ಮೂಲಕ ಸಂಚರಿಸುವುದು, ಜೆಟ್ ಸ್ಕೀ ಮೂಲಕ ಸಾಹಸ, ಕಯಾಕಿಂಗ್ ಸಹಿತ ವಿವಿಧ ಜಲ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿಣ್ಣರು ಹೆಚ್ಚಿನ ಸಂಖ್ಯೆಯಲ್ಲಿ ಕಯಾಕಿಂಗ್,ಬೋಟಿಂಗ್‌ನತ್ತ ಆಕ ರ್ಷಿತರಾಗುತ್ತಿದ್ದಾರೆ. ಮಂಗಳೂರಿನಿಂದ ಬರುವ ಪ್ರವಾಸಿಗರಿಗೆ, ಸ್ಥಳೀಯರಿಗೆ ಅತ್ಯುತ್ತಮ ಸಂಪರ್ಕ ರಸ್ತೆಯೂ ಇರುವು ದರಿಂದ ಕೂಳೂರು ತಣ್ಣಿರುಬಾವಿ ಬಳಿಯ ತಾತ್ಕಾಲಿಕ ಜೆಟ್ಟಿ ಮೂಲಕ ಈ ಜಲಕ್ರೀಡೆ ನಡೆಯುವ ಸ್ಥಳಕ್ಕೆ ತಲುಪಬಹುದು.
ನಿರ್ಲಕ್ಷÂಕ್ಕೆ ಒಳಗಾಗಿರುವ ನದಿ ತಾಣಗಳನ್ನು ಬಳಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉತ್ಸುಕವಾಗಿರುವ ಜಿಲ್ಲಾಡಳಿತ, ಫಲ್ಗುಣಿ, ನೇತ್ರಾವತಿ, ಶಾಂಭವಿ ನದಿಗಳಲ್ಲಿ ಜೆಟ್ಟಿ ನಿರ್ಮಿಸಲು ಚಿಂತಿಸಿದೆ. ಫಲ್ಗುಣಿ ನದಿಯಿಂದ ನೇತ್ರಾವತಿ ನದಿ ತಟದವರೆಗೆ 12 ಕಡೆಗಳಲ್ಲಿ ಜೆಟ್ಟಿ ನಿರ್ಮಿಸಿ ಪ್ರವಾಸಿ ಬೋಟ್‌ಗಳಿಗೆ ಬಂದುಹೋಗಲು ಅವಕಾಶ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದೆ. ನದಿಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಇದು ನದಿಗಳ ಬಳಕೆ, ಮಹತ್ವ, ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುವುದು ಜಿಲ್ಲಾಡಳಿತದ ವಿಶ್ವಾಸ.
Related Articles
ಕರಾವಳಿ ತೀರವನ್ನು ಪ್ರವಾಸೋ ದ್ಯಮಕ್ಕೆ ಬಳಸಿಕೊಳ್ಳುವುದರಲ್ಲಿ ಕೇರಳಕ್ಕೆ ಮೊದಲ ಸ್ಥಾನ. ಇದಕ್ಕೆ ತೀವ್ರವಾಗಿ ಪೈಪೋಟಿ ನೀಡುತ್ತಿದೆ ಕರ್ನಾಟಕದ ಕರಾವಳಿ. ಕಡಲು, ನದಿ ತೀರಗಳಲ್ಲಿ ನಡೆದ ಕರಾವಳಿ ಉತ್ಸವ, ಬೀಚ್ ಫೆಸ್ಟಿವಲ್, ಸರ್ಫಿಂಗ್ ಫೆಸ್ಟಿವಲ್, ಯಾಂಗ್ಲಿಂಗ್ ಫೆಸ್ಟಿವಲ್‌ಗಳು ಜನರನ್ನು ಸಮುದ್ರ, ನದಿ ತೀರಕ್ಕೆ ಕರೆ ತರುತ್ತಿವೆ. ರೋಯಿಂಗ್, ಕಯಾಕ್, ಸ್ಟ್ಯಾಂಡ್ ಅಪ್ ಪೆಡಲಿಂಗ್, ವಿಂಡ್ ಸರ್ಫಿಂಗ್, ಜೆಟ್ ಸ್ಕೀ, ಸ್ಪೀಡ್ ಬೋಟ್ ಸಹಿತ ವಿವಿಧ ಜಲಕ್ರೀಡೆಯತ್ತ ಜನರ ಗಮನ ಸೆಳೆಯಲು ಹಲವು ಜಲಸಾಹಸ ಕ್ರೀಡಾ ಆಯೋಜನೆಯ ಸಂಸ್ಥೆಗಳು, ವೈಯುಕ್ತಿಕವಾಗಿ ಆಸಕ್ತಿ ವುಳ್ಳವರು ಮುಂದಾಗಿದ್ದಾರೆ.
Advertisement
ಸ್ಕೂಬಾ ಡೈವಿಂಗ್‌ಗೆ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಾಹಸ ಕ್ರೀಡೆ ವೀಕ್ಷಣೆ, ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.
ಜಲಕ್ರೀಡೆಯ ಭಾಗವಾಗಿಸಲು ಚಿಂತನೆಇತ್ತೀಚೆಗೆ ನದಿ ಉತ್ಸವದ ಮೂರು ದಿನಗಳಲ್ಲೂ ಜನರ ಪಾಲ್ಗೊಳ್ಳುವಿಕೆ ಹೆಚ್ಚಿದ್ದ ಕಾರಣ ಜಿಲ್ಲಾಡಳಿತ ಇದನ್ನೇ ಸ್ಫೂರ್ತಿಯಾಗಿ ಬಳಸಿಕೊಂಡು ಕೇವಲ ವಾಣಿಜ್ಯ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿಲ್ಲ. ಬದಲಾಗಿ ಸಾಂಪ್ರದಾಯಿಕ ಪ್ರವಾಸೋದ್ಯಮದ ಜತೆ ಕೌಟುಂಬಿಕವಾಗಿ ಜನರು ಬಂದು ಹೋಗುವ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ. ಬಂಗ್ರಕೂಳೂರಿನ ಸುಮಾರು 23 ಎಕ್ರೆ ಸರಕಾರಿ ಪ್ರದೇಶವನ್ನು ಜಲಕ್ರೀಡೆಯ ಭಾಗವಾಗಿ ಭವಿಷ್ಯದಲ್ಲಿ ಬಳಸಿಕೊಳ್ಳಲು ಜಿಲ್ಲಾಡಳಿತ ಚಿಂತಿಸಿದೆ. ಸಣ್ಣ ಅನುದಾನದಲ್ಲಿ ಅಭಿವೃದ್ಧಿ
ಫಲ್ಗುಣಿ, ನೇತ್ರಾವತಿ ನದಿ ಕಿನಾರೆ, ಬೀಚ್‌ಗಳಾದ ತಣ್ಣೀರುಬಾವಿ, ಸಸಿಹಿತ್ಲು ಪ್ರದೇಶ ಸರ್ಫಿಂಗ್ ಕ್ರೀಡೆಗೆ ಉತ್ತಮ ಸ್ಥಳವೆಂದು ಜಿಲ್ಲಾಡಳಿತ ನಿರ್ಧರಿಸಿ, ಸಣ್ಣ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ದೊಡ್ಡ ಬಜೆಟ್‌ನ ಯೋಜನೆಗಳು ಬಹಳಷ್ಟು ವರ್ಷಗಳನ್ನು ತೆಗೆದುಕೊಳ್ಳು ವುದರಿಂದ ಈಗಿನ ಸೌಲಭ್ಯ ಮತ್ತಷ್ಟು ಉತ್ತಮ ಪಡಿಸಿ ಪ್ರವಾಸಿ ಸ್ಥಳಗಳನ್ನು ಗುರುತಿಸಿ, ಶೌಚಾಲಯ, ಬಟ್ಟೆ ಬದಲಿಸುವ ಕೋಣೆಗಳು, ಕುಳಿತುಕೊಳ್ಳಲು ಬೆಂಚುಗಳನ್ನು ಒದಗಿಸಲು ಯೋಚಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ
ಸ್ಥಳೀಯ ಮೀನುಗಾರರ ನೆರವಿನಲ್ಲಿ ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ಆಯೋಜಿಸಿ ಯಶಸ್ವಿ ಆಗಿದ್ದೇವೆ. ಜಲಕ್ರೀಡೆಗೆ ದ.ಕ.ದಷ್ಟು ನೈಸರ್ಗಿಕ ಪ್ರದೇಶ ಬೇರೆಲ್ಲೂ ಇರಲಾರದು. ಇದನ್ನೇ ಬಳಸಿಕೊಂಡು ಈಗಾಗಲೇ ಹಲವು ಜಲಸಾಹಸ ಕ್ರೀಡೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ದಿನ ನಿಗದಿಯಾಗಿತ್ತು. ಕಾರಣಾಂತರಗಳಿಂದ ಮುಂದೆ ಹೋಗಿವೆ. ಮತ್ತೆ ಇದನ್ನು ಮಾಡುತ್ತೇವೆ. ಕೂಳೂರು ನದಿ ಬಳಿ ಈಗಾಗಲೇ ಜಲಕ್ರೀಡೆ ನಡೆಸುವವರಿಗೆ ಪ್ರೋತ್ಸಾಹ ನೀಡಿದ್ದೇವೆ. ಪ್ರವಾಸೋದ್ಯಮವನ್ನು ಮೈಕ್ರೋ ವ್ಯವಸ್ಥೆಯಲ್ಲಿ ಬೆಳೆಸುತ್ತಾ ಹೋಗ ಬೇಕಿದೆ.
- ಶಶಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ