Advertisement
ಉತ್ತಮ ನಟನಾ ಕೌಶಲ ಮತ್ತು ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಇರುವವರು ವಿವಿಧ ಆಡಿಷನ್‌ಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬಹುದು. ಇದರಿಂದ ಕಲಿಕೆಯ ಜತೆ ಜತೆಗೆ ಯಾವುದೇ ತೊಂದರೆ ಆಗದಂತೆ ಹಣ ಸಂಪಾದಿಬಹುದು. ಮತ್ತು ತಮ್ಮ ಮುಂದಿನ ಭವಿಷ್ಯಕ್ಕೂ ಈಗಲೇ ಉತ್ತಮ ಯೋಜನೆ ರೂಪಿಸಿಕೊಳ್ಳಬಹುದು.
ಇಂದು ಹಲವಾರು ಸಿನೆಮಾಗಳು ಅಥವಾ ಉತ್ತನ್ನಗಳಿಗೆ ಜಾಹೀರಾತು ತಯಾರಿಸುವಾಗ ಅದಕ್ಕೆ ಆಡಿಶನ್ ನಡೆಯುತ್ತದೆ ಅದರಲ್ಲಿ ಪಾಲ್ಗೊಂಡು ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿಸಬಹುದು ಅದಕ್ಕೆ ಕೆಲವು ಕೌಶಲಗಳು ಅಗತ್ಯ. ಇಲ್ಲಿ ದೈಹಿಕ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ಇರುವುದರಿಂದ ಸದೃಢ ಮೈಕಟ್ಟನ್ನು ಹೊಂದಿರಬೇಕು.
Related Articles
Advertisement
ಜಾಹೀರಾತಿಗೆ ತಕ್ಕಂತೆ ನಿಮ್ಮ ವರ್ತನೆ, ಹಾವಭಾವ ಸಂದರ್ಶಕರನ್ನು ಆಕರ್ಷಿಸುವಂತಿರಲಿ.
ಯಾವುದೇ ಆಡಿಶನ್‌ಗೆ ಹೊಗುವ ಮುನ್ನ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಪಟಪಟನೆ ಮಾತನಾಡುವ ಕೌಶಲ, ಉತ್ತಮ ಧ್ವನಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಇರಬೇಕು.
ನಟನೆಯ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು ಮತ್ತು ಆಸಕ್ತಿ ಇರಬೇಕು. ನಟನೆಗೆ ಸಂಬಂಧಪಟ್ಟ ಯಾವುದಾರೂ ತರಬೇತಿ ಅಥವಾ ಕೊರ್ಸ್ ಮುಗಿಸಿದ್ದರೆ ಇನ್ನೂ ಹೆಚ್ಚು ಸಹಕಾರಿಯಾಗಿದೆ.
ಜನಪ್ರಿಯತೆಮಾಡೆಲಿಂಗ್ ಕ್ಷೇತ್ರದಲ್ಲಿ ನಟಿಸಿದರೆ ಜನಪ್ರಿಯವಾಗುತ್ತೀರಿ. ಸಮಾಜದಲ್ಲಿ ಎಲ್ಲಿ ಹೋದರೂ ಜನ ನಿಮ್ಮನ್ನು ಗುರುತಿಸುತ್ತಾರೆ. ಇದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮತ್ತು ನಿಮ್ಮ ಸುತ್ತಮುತ್ತ ಮಿತ್ರರು ಬಂಧುಗಳಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಭವಿಷ್ಯಕ್ಕೆ ಹೇಗೆ ಸಹಾಯಕಾರಿ?
ಇದರಿಂದ ಭವಿಷ್ಯದಲ್ಲಿ ಉತ್ತಮ ನಾಯಕ/ನಟಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಉತ್ತಮ ಸಂಭಾವನೆ ಗಳಿಸಲು ಇದು ಸಹಕಾರಿ. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣವಾಗುತ್ತದೆ. ಆಫರ್‌ಗಳು ನಿಮ್ಮ ಮುಂದಿರುವುದರಿಂದ ನಿಮಗೆ ಸೂಕ್ತವೆನಿಸಿದ್ದನ್ನು ಆರಿಸಿ ಭವಿಷ್ಯ ರೂಪಿಸಿಕೊಳ್ಳಬಹುದು ಉತ್ತಮ ಪ್ರದರ್ಶನ ನಿಮ್ಮದಾದರೆ ಪ್ರಶಸ್ತಿ ಕೂಡ ನಿಮ್ಮದಾಗಬಹುದಾಗಿದೆ. ಉತ್ತಮ ವೇದಿಕೆ ಉತ್ತಮ ಅವಕಾಶಗಳ ಸಾಲನ್ನು ನಿಮ್ಮ ಮುಂದಿರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. - ಶಿವಾನಂದ ಎಚ್.