Advertisement

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

09:02 PM Oct 23, 2021 | Team Udayavani |

ನವದೆಹಲಿ: “ಇತ್ತ ಎಡಪಂಥ ಅಲ್ಲದ, ಅತ್ತ ಬಲಪಂಥವೂ ಅಲ್ಲದ ತಟಸ್ಥ ಭಾವವೇ ಹಿಂದುತ್ವ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಹ-ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹೇಳಿದರು.

Advertisement

ಆರ್‌ಎಸ್‌ಎಸ್‌ ನಾಯಕ ರಾಮಮಾಧವ್‌ ಅವರು ಬರೆದಿರುವ “ದ ಹಿಂದುತ್ವ ಪ್ಯಾರಾಡಿಗಮ್‌: ಇಂಟೆಗ್ರಲ್‌ ಹ್ಯುಮಾನಿಸಂ ಆ್ಯಂಡ್‌ ದ ಕ್ವೆಸ್ಟ್‌ ಫಾರ್‌ ಎ ನಾನ್‌-ವೆಸ್ಟರ್ನ್ ವರ್ಲ್ಡ್ ವ್ಯೂ ” ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಹಿಂದೆ ಪ್ರಪಂಚ ಎಡಪಂಥೀಯ ಸಿದ್ಧಾಂತಗಳತ್ತ ಚಲಿಸಿತ್ತು. ಈಗ ಅದು ಬಲಪಂಥೀಯ ಸಿದ್ಧಾಂತಗಳತ್ತ ನಿಧಾನವಾಗಿ ಸಾಗುತ್ತಿದೆ. ಸದ್ಯಕ್ಕೆ ವಿಶ್ವವು, ಎಡ ಅಥವ ಬಲ ಸಿದ್ಧಾಂತಗಳ ನಡುವಿನ ಶೂನ್ಯ ಬಿಂದುವಿನಲ್ಲಿ ನಿಂತಿದೆ. ಹಿಂದುತ್ವವೂ ಪ್ರತಿಪಾದಿಸುವುದು ಇದನ್ನೇ” ಎಂದು ತಿಳಿಸಿದರು.

ಇದನ್ನೂ ಓದಿ:ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

“ನಾನು ಆರ್‌ಎಸ್‌ಎಸ್‌ನಿಂದ ಬಂದವನು. ನಮ್ಮಲ್ಲಿ ನಡೆಯುವ ಶಿಬಿರಗಳಲ್ಲಿ ನಾವೆಂದೂ ನಮ್ಮ ಸಿದ್ಧಾಂತವನ್ನು ಬ ಲಪಂಥೀಯ ಎಂದು ಬಣ್ಣಿಸಿಲ್ಲ. ನಮ್ಮಲ್ಲಿ ಎಡಪಂಥೀಯ ವಿಚಾರಗಳಿವೆ. ಜೊತೆಗೆ, ಬಲಪಂಥೀಯ ವಿಚಾರಧಾರೆಗಳೂ ಇವೆ” ಎಂದ ಅವರು, ಈ ವಿಚಾರಧಾರೆಗಳೆಲ್ಲವೂ ಮನುಷ್ಯನ ಅನುಭವಗಳಿಂದ ರೂಪುಗೊಂಡಿರುವಂಥವು. ಹಾಗಾಗಿ, ಈ ಎರಡೂ ವಿಚಾರಧಾರೆಗಳಲ್ಲಿ ಮತ್ತಷ್ಟು ವೈಚಾರಿಕತೆ ಸೇರಿಸಲು ಬೇಕಾದಷ್ಟು ಸ್ಥಳಾವಕಾಶವಿದೆ” ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next