ಮಂಗಳೂರು: ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಹೊರಡುವ ಕೆಲವು ವಿಶೇಷ ರೈಲುಗಳ ಸಂಚಾರವನ್ನು ಕೆಲವು ದಿನಗಳವರೆಗೆ ರದ್ದುಪಡಿಸಲಾಗಿದೆ.
ನಂ. 06628 ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್‌ಪಾಸ್ಟ್ ವಿಶೇಷ ರೈಲ್‌ನ ಸಂಚಾರವನ್ನು ಮೇ 8ರಿಂದ ಮೇ 31ರ ವರೆಗೆ ರದ್ದುಪಡಿಸಲಾಗಿದೆ. ನಂ. 06627 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವಿಶೇಷ ರೈಲ್‌ನ ಸಂಚಾರವನ್ನು ಮೇ 9ರಿಂದ ಜೂ.1ರ ವರೆಗೆ ರದ್ದು ಪಡಿಸಲಾಗಿದೆ.
ನಂ.06355 ಕೊಚ್ಚುವೇಲಿ – ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಚಲಿಸುವ ಅಂತ್ಯೋದಯ ವಿಶೇಷ ರೈಲ್ ಸಂಚಾರವನ್ನು ಮೇ 8ರಿಂದ ಮೇ 29 ವರೆಗೆ ಹಾಗೂ ನಂ. 06356 ಕೊಚ್ಚುವೇಲಿ-ಮಂಗಳೂರು ಜಂಕ್ಷನ್ ರೈಲ್‌ನ ಸಂಚಾರವನ್ನು ಮೇ 9ರಿಂದ ಮೇ 30ರ ವರೆಗೆ ರದ್ದುಪಡಿಸಲಾಗಿದೆ.
ನಂ. 06347 ತಿರುವನಂತಪುರಂ ಸೆಂಟ್ರಲ್ – ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೇ 8ರಿಂದ 31ರ ವರೆಗೆ ಹಾಗೂ ನಂ. 06348 ಮಂಗಳೂರು ಸೆಂಟ್ರಲ್- ತಿರುವನಂತಪುರ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಮೇ 9ರಿಂದ ಜೂ. 1ರ ವರೆಗೆ ರದ್ದುಗೊಳಿಸಲಾಗಿದೆ.
ನಂ.06605 ಮಂಗಳೂರು ಸೆಂಟ್ರಲ್-ನಾಗರಕೋವಿಲ್ ಎರ್ನಾಡ್ ಡೈಲಿ ವಿಶೇಷ ರೈಲ್‌ನ ಸಂಚಾರವನ್ನು ಮೇ 8ರಿಂದ ಮೇ 31ರ ವರೆಗೆ ಹಾಗೂ ನಂ. 06606 ನಾಗರಕೋವಿಲ್- ಮಂಗಳೂರು ಸೆಂಟ್ರಲ್ ರೈಲ್‌ನ ಸಂಚಾರವನ್ನು ಮೇ 9ರಿಂದ ಜೂ. 1ರವರೆಗೆ ರದ್ದುಗೊಳಿಸಲಾಗಿದೆ.
ನಂ.01223 ಲೋಕಮಾನ್ಯ ತಿಲಕ್ ಟರ್ಮಿನಸ್-ಎರ್ನಾಕುಳಂ ಜಂಕ್ಷನ್ ವಾರಕ್ಕೆ ಎರಡು ಬಾರಿ ಚಲಿಸುವ ಡುರಾಂಟೋ ವಾರಕ್ಕೆ ಎರಡು ಬಾರಿ ಚಲಿಸುವ ರೈಲ್‌ನ ಸಂಚಾರವನ್ನು ಮೇ 8ರಿಂದ ಮೇ 29ರ ವರೆಗೆ ಹಾಗೂ ನಂ. 01224 ಎರ್ನಾಕುಳಂ ಜಂಕ್ಷನ್-ಲೋಕಮಾನ್ಯ ತಿಲಕ್ ಟರ್ಮಿನಸ್ ವಿಶೇಷ ರೈಲ್‌ನ ಸಂಚಾರವನ್ನು ಮೇ 9ರಿಂದ ಜೂ. 30ರ ವರೆಗೆ ರದ್ದು ಪಡಿಸಲಾಗಿದೆ.