Advertisement
ಪಶ್ಚಿಮ ಬಂಗಾಲದ ಕಮಾರ್‌ಪಾರಾ, ರಾಣಾ ಘಾಟ್, ಜಾರ್ಖಂಡ್‌ನ ಲೋಹಾರ್‌ರ್ದಗಳಲ್ಲಿ ಬುಧ ವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಸ್ತಾವಿಸಿದ್ದಾರೆ. ಭಾರತದಲ್ಲಿ ಇರು ವುದಕ್ಕಿಂತ ಪ್ರಧಾನಿ ಮೋದಿ ವಿದೇಶ ಪ್ರವಾಸ ಗಳ ಲ್ಲಿಯೇ ಹೆಚ್ಚು ಸಮಯ ಕಳೆದಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಈ ವಾಗ್ಬಾಣ ಎಸೆದಿದ್ದಾರೆ.
Related Articles
ಜಾರ್ಖಂಡ್‌ನ ಲೋಹಾರ್ದಗ ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇವಿಎಂನಲ್ಲಿ ತಪ್ಪು ಹುಡುಕುವ ಮೂಲಕ ವಿಪಕ್ಷಗಳು ಈಗಾಗಲೇ ಸೋಲೊಪ್ಪಿ ಕೊಂಡಂತೆ ಆಗಿದೆ ಎಂದಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರು ವುದಕ್ಕೆ ವಿದ್ಯಾರ್ಥಿ ಸಲ್ಲದ ಕಾರಣ ನೀಡುವಂತೆ ವಿಪಕ್ಷಗಳು ಸೋಲಿನ ಭೀತಿಯಿಂದ ಇವಿಎಂ ವಿರುದ್ಧ ಮುಗಿಬಿದ್ದಿವೆ ಎಂದಿದ್ದಾರೆ.
Advertisement
ಇಂದು ರೋಡ್‌ಶೋ; ನಾಳೆ ನಾಮಪತ್ರವಾರಾಣಸಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಎ. 26ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕಿಂತ ಮೊದಲು ಅವರು ಗುರುವಾರ (ಎ. 25) ರೋಡ್‌ಶೋ ಮತ್ತು ಗಂಗಾ ಆರತಿ ನಡೆಸಲಿದ್ದಾರೆ. ರೋಡ್‌ಶೋನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ಕಾರ್ಯಾ ಧ್ಯಕ್ಷ ಉದ್ಧವ್ ಠಾಕ್ರೆ, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್, ಎಲ್‌ಜೆಪಿ ನಾಯಕ ರಾಂ ವಿಲಾಸ್ ಪಾಸ್ವಾನ್ ಸೇರಿದಂತೆ ಎನ್‌ಡಿಎಯ ಹಿರಿಯ ನಾಯಕರು ಭಾಗ ವ ಹಿಸಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಭಾಗವಹಿ ಸಲಿ ದ್ದಾರೆ. ಬನಾರಸ್ ಹಿಂದೂ ವಿವಿಯ ಮೈದಾನ ದಿಂದ ರೋಡ್‌ಶೋ ಆರಂಭವಾಗಲಿದೆ. ದಶಾಶ್ವಮೇಧ ಘಾಟ್‌ನಲ್ಲಿ ಸಂಜೆಯ ವೇಳೆಗೆ ಗಂಗಾ ಆರತಿ ನಡೆಸಲಿದ್ದಾರೆ. ಇದಕ್ಕಿಂತ ಮೊದಲು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ಬಳಿಕ ಐದು ವರ್ಷ ಗಳಲ್ಲಿಯೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕೆಲ ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಆದರೆ. 25, 26ರಂದು ಪ್ರಧಾನಿಯವರ ಕಾರ್ಯಕ್ರಮ ಪಟ್ಟಿಯಲ್ಲಿ ಸುದ್ದಿಗೋಷ್ಠಿ ವಿಚಾರ ಸೇರ್ಪಡೆಯಾಗಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ. ಪ್ರಿಯಾಂಕಾ ವಾದ್ರಾ ಸ್ಪರ್ಧೆ 50:50
ಕೊನೆಯ ಹಂತ (ಮೇ 19)ದಲ್ಲಿ ನಡೆಯಲಿರುವ ಚುನಾ ವಣೆಯಲ್ಲಿ ವಿಶೇಷವಾಗಿ ವಾರಾಣಸಿ ಕ್ಷೇತ್ರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವ ವಿಷಯ ಇನ್ನೂ ಅಸ್ಪಷ್ಟವಾಗಿಯೇ ಇದೆ. ಪಕ್ಷದ ಹಿರಿಯ ನಾಯಕರೊಬ್ಬರು “ಎನ್‌ಡಿಟಿವಿ’ಗೆ ನೀಡಿದ ಮಾಹಿತಿ ಪ್ರಕಾರ ಸ್ಪರ್ಧೆ ಮಾಡುವ ಮತ್ತು ಇಲ್ಲದೇ ಇರುವ ಸಾಧ್ಯತೆಗಳು ಎರಡೂ ಶೇ.50ರಷ್ಟು ಇದೆ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಸಲು ಎ. 22ರಿಂದ 26ರ ವರೆಗೆ ಅವಕಾಶ ಉಂಟು. ಪ್ರಧಾನಿ ನರೇಂದ್ರ ಮೋದಿ ಎ. 26ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕುಟುಂಬದ ಇತರ ಸದಸ್ಯರ ಪ್ರಕಾರ ಈ ಹಂತದಲ್ಲಿಯೇ ಅವರು ಸ್ಪರ್ಧೆ ಮಾಡುವುದು ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಒಪ್ಪಿದರೆ ಕಣಕ್ಕೆ ಇಳಿಯಲು ಸಿದ್ಧ ಎಂದಿದ್ದಾರೆ. ಜತೆಗೆ ಸೋಲು ಅಥವಾ ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ ಎನ್ನುವುದು ಆಪ್ತ ಮೂಲಗಳ ಹೇಳಿಕೆ. 2014ರ ಚುನಾವಣೆಯಲ್ಲಿ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್‌ನಿಂದ ಅಜಯ ರಾಯ್ ಸ್ಪರ್ಧಿಸಿದ್ದರು. ಪ್ರಧಾನಿಯವರಿಗೆ 5.8 ಲಕ್ಷ ಮತಗಳು, ಕೇಜ್ರಿವಾಲ್‌ಗೆ 2 ಲಕ್ಷ ಮತಗಳು ಬಂದಿದ್ದವು. ಮೋದಿ ಪ್ರಧಾನ ಪ್ರಚಾರ ಮಂತ್ರಿ
ಉತ್ತರ ಪ್ರದೇಶದ ಬಂಡಾ ಮತ್ತು ಫತೇಪುರ್‌ಗಳಲ್ಲಿ ಪ್ರಿಯಾಂಕಾ ವಾದ್ರಾ ಬುಧವಾರ ಪ್ರಚಾರ ನಡೆಸಿದ್ದಾರೆ. ಬಂಡಾದಲ್ಲಿ ಪ್ರಚಾರ ನಡೆಸಿದ ಅವರು ನರೇಂದ್ರ ಮೋದಿ ಪ್ರಧಾನ ಪ್ರಚಾರ ಮಂತ್ರಿ ಎಂದು ಟೀಕಿಸಿದ್ದಾರೆ. ಬಂಡಾಗೆ ಗುರುವಾರ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ರಸ್ತೆಗೆ ಚಿಮುಕಿಸಿ ಪೋಲು ಮಾಡಲಾಗುತ್ತದೆ. ಬುಂದೇಲ್‌ಖಂಡ್ ವಲಯ ನೀರಿಗೆ ಹಾಹಾಕಾರ ನಡೆಸುತ್ತಿರುವಾಗ ಬಿಜೆಪಿ ಈ ಅಂಶವನ್ನೇಕೆ ಮರೆತಿದೆ ಎಂದು ಪ್ರಶ್ನಿಸಿದ್ದಾರೆ. ಫತೇಪುರದಲ್ಲಿ ಮಾತ ನಾಡಿದ ಅವರು ಋಣಾತ್ಮಕ ಮತ್ತು ವಿಭಜನೀಯ ಶಕ್ತಿಗಳನ್ನು ರಾಜಕೀಯದಿಂದ ದೂರ ಇರಿಸಬೇಕು ಎಂದು ಕರೆ ನೀಡಿದ್ದಾರೆ. ಸ್ಟಿಕ್ಕರ್ ದೀದಿ: ಪಿಎಂ ಲೇವಡಿ
ಕೇಂದ್ರ ಸರಕಾರ ಜಾರಿಗೊಳಿಸಿದ ಯೋಜನೆಗಳನ್ನು ತೃಣಮೂಲ ಕಾಂಗ್ರೆಸ್ ಸರಕಾರದ ಯೋಜನೆಗಳು ಎಂದು ಪಶ್ಚಿಮ ಬಂಗಾಲದಲ್ಲಿ ಜಾರಿ ಮಾಡು ತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ “ಸ್ಟಿಕ್ಕರ್ ದೀದಿ’ ಎಂದು ಟೀಕಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಮತಾ ಬ್ಯಾನರ್ಜಿ ಅಭಿವೃದ್ಧಿಗೆ ತೊಡರುಗಾಲು ಎಂದು ಹೇಳಿ ಸ್ಪೀಡ್ ಬ್ರೇಕರ್ ಎಂದಿದ್ದರು ಪ್ರಧಾನಿ. ಪಶ್ಚಿಮ ಬಂಗಾಲದ ರಾಣಾಘಾಟ್‌ನಲ್ಲಿ ಮಾತನಾಡಿದ ಅವರು, ಜನರ ಆಶೋತ್ತರ ಗಳನ್ನು ಟಿಎಂಸಿ ಈಡೇರಿಸಲಿದೆ ಎಂದು ಎಡಪಕ್ಷಗಳ ನೇತೃತ್ವದ ಸರಕಾರವನ್ನು ಸೋಲಿಸಿ ದರು. ಆದರೆ ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ನೇತೃತ್ವದ ಸರಕಾರ ಜನರಲ್ಲಿ ಹೆಚ್ಚಿನ ನೋವನ್ನು ತರಿಸಿತು ಎಂದಿದ್ದಾರೆ. ಕೈಗಿಂತ ಹೆಚ್ಚು ಕ್ಷೇತ‹ಗಳಲ್ಲಿ ಬಿಜೆಪಿ ಸ್ಪರ್ಧೆ
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು 44 ಕ್ಷೇತ್ರಕ್ಕೆ ಸೀಮಿತಗೊಳಿಸಿದ ಬಿಜೆಪಿ ಈ ಬಾರಿ ಇನ್ನೂ ಒಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯೇ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಈಗಾಗಲೇ 437 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ಈಗಾಗಲೇ 423 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶದ ಕೆಲವೇ ಸೀಟುಗಳಲ್ಲಿ ಅಭ್ಯರ್ಥಿ ಗಳನ್ನು ಘೋಷಿಸುವುದು ಬಾಕಿ ಇದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣ ಕ್ಕಿಳಿಸಿದರೂ, ಬಿಜೆಪಿಯನ್ನು ಈ ವಿಚಾರದಲ್ಲಿ ಕಾಂಗ್ರೆಸ್ ಮೀರಿಸಲಾಗದು. 2014ರಲ್ಲಿ 464 ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿದಿತ್ತು. ಆದರೆ ಗೆದ್ದಿದ್ದು ಕೇವಲ 44 ಸೀಟ್‌ಗಳು. 2009ರಲ್ಲಿ ಬಿಜೆಪಿ 433 ಮತ್ತು ಕಾಂಗ್ರೆಸ್ 444, 2004ರಲ್ಲಿ ಬಿಎಪಿ 364 ಹಾಗೂ ಕಾಂಗ್ರೆಸ್ 414 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕೆಲಸ ಮಾಡದಿದ್ದರೆ ಮನೆಗೆ!
ಪಂಜಾಬ್‌ನಲ್ಲಿ ಮುಂಬರುವ ಲೋಕಸಭೆ ಚುನವಾಣೆಯಲ್ಲಿ ಕೆಲಸ ಮಾಡದೇ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾದರೆ, ಅಂತಹ ಸಚಿವರಿಗೆ ಮುಂದಿನ ಬಾರಿ ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ತಾಕೀತು ಮಾಡಿದೆ. ಪಂಜಾಬ್‌ನಲ್ಲಿ ಈ ಬಾರಿ ಎಲ್ಲ 13 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಮತ ಒದಗಿಸುವಲ್ಲಿ ವಿಫಲವಾದರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಪಂಜಾಬ್‌ನಲ್ಲಿ 18 ಸಚಿವರಿದ್ದು, 117 ವಿಧಾನಸಭೆ ಕ್ಷೇತ್ರಗಳ ಪೈಕಿ 78 ಕಾಂಗ್ರೆಸ್ ಶಾಸಕರಿದ್ದಾರೆ. ಎಲ್ಲ ಸಚಿವರೂ ಶ್ರಮಿಸಿದರೆ 13 ಕ್ಷೇತ್ರಗಳನ್ನೂ ತಮ್ಮದಾಗಿಸಿಕೊಳ್ಳಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. 15 ಮಂದಿಗೆ ಮಾತ್ರ ರಕ್ಷಣೆ: ರಾಹುಲ್
ಪ್ರಧಾನಿ ನರೇಂದ್ರ ಮೋದಿ ಆಯ್ದ ಹದಿನೈದು ಮಂದಿಯನ್ನು ಮಾತ್ರ ರಕ್ಷಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ್‌ಖೇರಿಯಲ್ಲಿ ಬುಧವಾರ ಪ್ರಚಾರ ನಡೆಸಿದ ಅವರು, ಆಯ್ದ ವ್ಯಕ್ತಿಗಳ ಸಾಲ ಮನ್ನಾ ಮಾಡುವ ಪ್ರಧಾನಿ ರೈತರು ಮತ್ತು ಬಡವರ ಕೂಗಿನ ಬಗ್ಗೆ ಲಕ್ಷ್ಯವೇ ನೀಡುವುದಿಲ್ಲ ಎಂದು ದೂರಿದ್ದಾರೆ. ಲಖೀಂಪುರ್‌ಖೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿಯವರು ಹದಿನಾಲ್ಕು ದಿನಗಳಲ್ಲಿ ಕಬ್ಬು ಬೆಳೆಗಾರರಿಗೆ ಬಾಕಿ ಮಾಡಬೇಕಾಗಿರುವ ಮೊತ್ತವನ್ನು ಶೀಘ್ರದಲ್ಲಿಯೇ ನೀಡುವ ವಾಗ್ಧಾನ ಮಾಡಿ ದ್ದರು. 2014ರಲ್ಲಿ ಒಳ್ಳೆಯ ದಿನ ಬರುತ್ತದೆ ಎಂದು ಹೇಳಿದ್ದರು ಎಂದು ಟೀಕಿಸಿದರು. ಶೀಘ್ರ ಕ್ರಮ: ಆಯೋಗ ಸುಳಿವು
ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಚುನಾವಣಾ ಪ್ರಚಾರದ ವೇಳೆ ಸೇನಾಪಡೆಗಳ ವಿಚಾರ ವಿಶೇಷವಾಗಿ ಬಾಲಕೋಟ್ ದಾಳಿ ಬಗ್ಗೆ ಪ್ರಸ್ತಾಪ ಮಾಡಿರುವುದರ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವ ವರೆಗೆ ಕಾಯುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಎನ್‌ಡಿಟಿವಿ’ ವರದಿ ಮಾಡಿದೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಚಾನೆಲ್ ಹೇಳಿಕೊಂಡಿದೆ. ಎ. 9ರಂದು ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದರು. ಕೇಂದ್ರದಲ್ಲಿ ಬರಲಿದೆ ಯುಪಿಎ-3
ಕೇಂದ್ರದಲ್ಲಿ “ಯುಪಿಎ-3′ ಸರಕಾರ ರಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯೋ ನ್ಮುಖವಾಗಿದೆ ಎಂದು ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಕೇಂದ್ರದಲ್ಲಿ ಸರಕಾರ ರಚಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಮಹತ್ವದ ಪಾತ್ರ ವಹಿಸುತ್ತದಾದ್ದರಿಂದ ಇಲ್ಲಿ ಕಾಂಗ್ರೆಸ್ ಉತ್ತಮ ಸ್ಥಾನ ಪಡೆದು ಕೇಂದ್ರದಲ್ಲಿ ಪುನಃ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. “2009ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆ ಮಾಡಿತ್ತು. ಈ ಬಾರಿ ಅದಕ್ಕಿಂತ ಉತ್ತಮ ಸಾಧನೆಯನ್ನು ಕಾಂಗ್ರೆಸ್ ಮಾಡಲಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಚ್ಚರಿಯ ಫಲಿತಾಂಶ ನೀಡುತ್ತದೆ ಎಂದಿದ್ದಾರೆ. ಇಂದು ಮರು ಮತದಾನ
ಆಗ್ರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜತೋವಾ ಗ್ರಾಮದಲ್ಲಿ ಗುರುವಾರ (ಎ. 25) ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ. ಮತಗಟ್ಟೆ ಅಧಿಕಾರಿ ಪ್ರಮಾದವಶಾತ್ ಚಲಾವಣೆ ಮಾಡಿದ ಮತಗಳನ್ನೆಲ್ಲ “ಕ್ಲಿಯರ್’ ಬಟನ್ ಒತ್ತಿ ಅಳಿಸಿ ಹಾಕಿದ್ದರು. ಇದರಿಂದಾಗಿ ದಾಖಲಾಗಿದ್ದ 140 ಮತಗಳು ಅಳಿಸಿಹೋಗಿದ್ದವು. ಮತಗಟ್ಟೆ ಅಧಿಕಾರಿ ಚುನಾವಣಾ ಆಯೋಗ ನೀಡಿದ ಸೂಚನೆಯ ಅನ್ವಯ ಇವಿಎಂ ಅನ್ನು ನಿರ್ವಹಿಸದೇ ಇದ್ದರಿಂದ ಹೀಗಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ವಿಚಾರ ಬರುತ್ತಿದ್ದಂತೆ ಎ. 18ರಂದು ಮತದಾನ ರದ್ದು ಮಾಡಲಾಗಿತ್ತು. ಪ್ರಜ್ಞಾ ಉಮೇದುವಾರಿಕೆ ರದ್ದು ಸಾಧ್ಯವಿಲ್ಲ
ಭೋಪಾಲದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಉಮೇದ್ವಾರಿಕೆಯನ್ನು ಕೋರ್ಟ್ ರದ್ದು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಚುನಾವಣಾ ಆಯೋಗವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ಕೋರ್ಟ್ ಹೇಳಿದೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಅವರ ವಿರುದ್ಧ ಆರೋಪಗಳು ಇರುವುದರಿಂದ ಉಮೇದ್ವಾರಿಕೆಯನ್ನು ರದ್ದುಗೊಳಿಸಬೇಕು ಎಂದು ಸ್ಫೋಟದಲ್ಲಿ ಅಸುನೀಗಿದ ನಿಸಾರ್ ಬಿಲಾಲ್ ಎಂಬವರ ಪುತ್ರ ಸಯ್ಯದ್ ಅಹ್ಮದ್ ಮೇಲ್ಮನವಿ ಸಲ್ಲಿಸಿದ್ದರು. ಅದಕ್ಕೆ ಮಂಗಳವಾರ ಉತ್ತರ ನೀಡಿದ್ದ ಎನ್‌ಐಎ ಪ್ರಜ್ಞಾ ಸಿಂಗ್ ವಿರುದ್ಧ ಪ್ರಕರಣ ಮುಂದುವರಿಸಲು ಯಾವುದೇ ಆಧಾರ ಇಲ್ಲ ಎಂದು ಕೋರ್ಟ್‌ಗೆ ತಿಳಿಸಿತ್ತು. ಅದನ್ನು ಪರಿಶೀಲಿಸಿದ ನ್ಯಾಯಾಧೀಶ ವಿ.ಎಸ್.ಪದಾಲ್ಕರ್ “ಸದ್ಯ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು ಈ ಕೋರ್ಟ್‌ಗೆ ಅಧಿಕಾರವಿಲ್ಲ. ಅದು ಚುನಾವಣಾ ಅಧಿಕಾರಿಗಳಿಗೆ ಸಂಬಂಧಿಸಿದ ಕೆಲಸ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಲಾಗದು’ ಎಂದು ಹೇಳಿದ್ದಾರೆ. “ದಲಿತರ ಪರ ಇರದ್ದಕ್ಕೆ ರಾಷ್ಟ್ರಪತಿ’
“ರಾಮನಾಥ್ ಕೋವಿಂದ್ ದಲಿತರಾಗಿದ್ದರೂ, ದಲಿತರ ಪರ ದನಿ ಎತ್ತದೇ ಇದ್ದಿದ್ದಕ್ಕೆ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಆದರೆ, ತಾವು ದಲಿತರ ಸಮಸ್ಯೆಗಳನ್ನು ಪಕ್ಷದಲ್ಲಿ ಚರ್ಚೆ ಮಾಡಿದ್ದಕ್ಕೆ ನನಗೆ ಟಿಕೆಟ್ ನೀಡದೆ ಮೂಲೆಗುಂಪು ಮಾಡಲು ಪ್ರಯತ್ನಿಸಲಾಯಿತು” ಎಂದು ವಾಯವ್ಯ ದಿಲ್ಲಿಯ ಹಾಲಿ ಸಂಸದ ಉದಿತ್ ರಾಜ್ ಆಪಾದಿಸಿದ್ದಾರೆ. ಬುಧವಾರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದರು. ಜತೆಗೆ ಟ್ವೀಟ್ ಮಾಡಿರುವ ಅವರು, ದಲಿತರ ಪ್ರತಿಭಟನೆಗಳನ್ನು ಬೆಂಬಲಿಸಿದ್ದಕ್ಕೆ ಟಿಕೆಟ್ ನಿರಾಕರಿಸಿತು. ದೇಶದ 2ನೇ ಅತ್ಯುತ್ತಮ ಸಂಸದ ಎಂಬ ಹೆಸರು ಮಾಡಿದ್ದರೂ ನನ್ನನ್ನು ನಿರ್ಲಕ್ಷಿಸಲಾಯಿತು ಎಂದು ಅವರು ಹೇಳಿದ್ದಾರೆ. ಮೋದಿ ಚಿತ್ರ ಬಿಡುಗಡೆ ತಡೆಗೆ ಸಮರ್ಥನೆ
ಪ್ರಸಕ್ತ ಲೋಕಸಭಾ ಚುನಾವಣೆಯ ನಂತರ “ಪಿ.ಎಂ. ನರೇಂದ್ರ ಮೋದಿ’ ಚಿತ್ರವನ್ನು ಬಿಡುಗಡೆ ಮಾಡುವ ತನ್ನ ನಿರ್ಧಾರಕ್ಕೆ ತಾನು ಬದ್ಧವಾಗಿರುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಈ ಕುರಿತಂತೆ ಸಲ್ಲಿಸಲಾಗಿರುವ ತನ್ನ ವರದಿಯಲ್ಲಿ ಆಯೋಗ ಈ ರೀತಿಯ ಸ್ಪಷ್ಟನೆ ನೀಡಿದೆ. ಚಿತ್ರ ಬಿಡುಗಡೆಗೆ ತಡೆಯೊಡ್ಡಿದ್ದ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದಕ್ಕೆ ಸ್ಪಂದಿಸಿದ್ದ ಸುಪ್ರೀಂ ಕೋರ್ಟ್, ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. “ಇಡೀ ಚಿತ್ರವು ಪ್ರಧಾನಿ ಮೋದಿಯವರ ಜೀವನಾಧಾರಿತ ಎನ್ನುವುದಕ್ಕಿಂತ ಹೆಚ್ಚಾಗಿ ಸಂತನೊಬ್ಬರ ಗುಣಗಾನ ಮಾಡಿದಂತಿದೆ. ಈ ಚಿತ್ರವನ್ನು ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ, ಆಡಳಿತಾರೂಢ ಬಿಜೆಪಿಯ ಪ್ರಭಾವಕ್ಕೆ ಮತದಾರರು ಒಳಗಾಗುವ ಸಾಧ್ಯತೆಗಳಿವೆ’ ಎಂದು ಆಯೋಗ ತಿಳಿಸಿರುವುದಾಗಿ “ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಪ್ರಮಾಣಕ್ಕೆ ಬನ್ನಿ: ಮೋದಿಗೆ ಆಹ್ವಾನ
ಲೋಕಸಭೆ ಚುನಾವಣೆಯ ಜತೆಗೆ ಒಡಿಶಾದಲ್ಲಿ ವಿಧಾನಸಭೆ ಚುನಾ ವಣೆಯೂ ನಡೆಯುತ್ತಿದ್ದು, ಬಿಜು ಜನತಾದಳ ಮರಳಿ ಅಧಿಕಾರಕ್ಕೇರಲಿದೆ ಎಂದು ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ. ಅಲ್ಲದೆ ಮೇ 23ರಂದು ಪ್ರಕಟವಾಗುವ ಫಲಿತಾಂಶದಲ್ಲಿ ನಾವು ಜಯಭೇರಿ ಬಾರಿಸಲಿದ್ದು, ಅನಂತರ ನಡೆಯುವ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡುತ್ತಿದ್ದೇನೆ ಎಂದಿದ್ದಾರೆ. ಬಾಲಸೋರ್‌ನಲ್ಲಿ ಮಾತನಾಡಿದ ಅವರು, ಬಿಜೆಡಿ ಸರಕಾರ ಉರುಳಿದ ಅನಂತರ ತಾನು ಒಡಿಶಾಗೆ ಭೇಟಿ ಮಾಡುತ್ತೇನೆ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಮೊದಲ ಮೂರು ಹಂತಗಳಲ್ಲೇ ನಮಗೆ ಅಗತ್ಯವಿರುವ ಮತಗಳನ್ನು ಪಡೆದಿದ್ದೇವೆ. ಮುಂದಿನ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಬೇಕು ಎಂದು ನಾನು ವಿನೀತನಾಗಿ ಅವರನ್ನು ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ.