Advertisement

ಅಳಿವಿನಂಚಿನಲ್ಲಿವೆ  ಹಲವು ಪ್ರಾಣಿಗಳು

09:25 AM Apr 23, 2019 | keerthan |

ಕಾಡು ಮೇಡುಗಳಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಜೀವಿಸುತ್ತಿದ್ದ ಮನುಷ್ಯ ಅವುಗಳಿಂದ ದೂರವಾಗಿ ತನ್ನ ಸಮುದಾಯದೊಂದಿಗೆ ಬದುಕು ಕಟ್ಟಿಕೊಂಡ ಮೇಲೆ ಪ್ರಕೃತಿಯಿಂದ ದೂರವಾಗಿ ಕಾಂಕ್ರೀಟ್‌ ಕಾಡಿನ ವ್ಯಾಮೋಹ ಬೆಳೆಸಿಕೊಂಡ. ಕಾಡು ಪ್ರಾಣಿಗಳ ಜತೆಯೇ ಆದಿ ಮಾನವನ ಜೀವನ ಪ್ರಾರಂಭವಾದುದರಿಂದ ಅದರ ಬಗ್ಗೆ ಅವನಲ್ಲಿ ಯಾವ ಭಯ ಇರಲಿಲ್ಲ. ಪ್ರಾರಂಭದಲ್ಲಿ ಕೆಲವೊಂದು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದುದ್ದು ಬಿಟ್ಟರೆ ಅವುಗಳಿಗೆ ಹೆಚ್ಚಿನ ತೊಂದರೆ ನೀಡಲಿಲ್ಲ. ಯಾವಾಗ ಮನುಷ್ಯ ಸ್ವಾರ್ಥ ಬದುಕಿನ ಚಿಂತನೆ ನಡೆ ಸುತ್ತ ಹೋದನೋ ಅಂದಿನಿಂದ ಪ್ರಾಣಿಗಳ ಅಳಿವು ಆರಂಭವಾಯಿತು. ಬೇಟೆ ಮನುಷ್ಯರ ಅಗತ್ಯಕ್ಕಿಂತ ಹೆಚ್ಚಾಗಿ ಆಸಕ್ತಿಯಾಯಿತು. ಕಾಡಿನಲ್ಲಿದ್ದ ಮರಗಳು ನಾಶವಾಗತೊಡಗುತ್ತ ಹೋದಂತೆ ಪ್ರಾಣಿ, ಪಕ್ಷಿಗಳ ಸಂತತಿ ಇಳಿಮುಖವಾಗತೊಡಗಿತು. ಒಂದು ಕಾಲದಲ್ಲಿ ಹೇರಳವಾಗಿದ್ದ ಪ್ರಾಣಿಗಳು ಇಂದು ಕೇವಲ ಬೆರಳೆಣಿಕೆಯಲ್ಲಿವೆ. ಇದು ನಿಜಕ್ಕೂ ಚಿಂತಾಜನಕ ವಿಷಯ. ಭಾರತದಲ್ಲಿ ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ವಿವರ ಇಲ್ಲಿವೆ.

Advertisement

ಖಡ್ಗಮೃಗ


ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್‌ವೆಷನ್‌ ಆಫ್ ನೇಚರ್‌ ಭಾರತದ ಖಡ್ಗಮೃಗಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಗುರುತಿಸಿದೆ. ಹಿಮಾಲಯದಲ್ಲಿ ಅತಿ ಹೆಚ್ಚು ಕಂಡು ಬರುತ್ತಿದ್ದ ಈ ಪ್ರಾಣಿಗಳ ಸಂಖ್ಯೆ ಕುಸಿಯಲು ಪ್ರಾಕೃತಿಕ ವಿಕೋಪಗಳು ಬಹುಮಟ್ಟಿಗೆ ಕಾರಣ. ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಖಡ್ಗಮೃಗಗಳ ಮೀಸಲು ಕೇಂದ್ರವಿದೆ.

ಏಷ್ಯಾಟಿಕ್‌ ಸಿಂಹಗಳು
ಏಷ್ಯಾಟಿಕ್‌ ಸಿಂಹಗಳು ಪ್ರಸ್ತು ತ ಕಾಣ ಸಿಗುವುದು ಭಾರತದಲ್ಲಿ ಮಾತ್ರ ಎಂಬ ಕಳವಳಕಾರಿ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿದೆ. ಗುಜರಾತ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಣ ಸಿಗುತ್ತಿದ್ದ ಈ ಪ್ರಾಣಿಗಳ ಪ್ರಸ್ತುತ ಸಂಖ್ಯೆ 200ರ ಆಸುಪಾಸಿನ ಲ್ಲಿದೆ. ಸಾಸನ್‌ಗಿರ್‌ ವನ್ಯಧಾಮ ಕೇಂದ್ರದಲ್ಲಿ ಏಷ್ಯಾಟಿಕ್‌ ಸಿಂಹಗಳ ಸಂರಕ್ಷಣೆ ಕೇಂದ್ರವಿದೆ.

ಕೃಷ್ಣಮೃಗ
ಹುಲ್ಲುಗಾವಲಿನಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಕೃಷ್ಣಮೃಗಗಳು ಮನುಷ್ಯರ ದುರಾಸೆಗೆ ಬಲಿಯಾಗಿ ಅಳಿ ವಿ ನಂಚಿ ನ ಲ್ಲಿದೆ. ಕೃಷಿ ಮತ್ತು ಈ ಪ್ರಾಣಿ ನಡುವಿರುವ ಸಂಬಂಧವೂ ಇದರ ವಂಶ ನಾಶಕ್ಕೆ ಒಂದು ಕಾರಣವಾಗಿದೆ.

ಹಿಮಚಿರತೆ
ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಕಂಡು ಬರುವ ಹಿಮಚಿರತೆಯ ಸಂಖ್ಯೆ ಒಟ್ಟು 6 ಸಾವಿರ. ಈ ಸಂಖ್ಯೆಯೂ ದಿನೇ ದಿನೇ ಕುಸಿಯುತ್ತಿದೆ. 20 ವರ್ಷಗಳಲ್ಲಿ ಹಿಮಚಿರಗಳ ಸಂಖ್ಯೆ ಶೇ. 20ರಷ್ಟು ಕುಸಿತಗೊಂಡಿದೆ.

Advertisement


ಅವನತಿಯತ್ತ ಹಲವು ಜೀವ ಪ್ರಭೇದ 

ನಗರಗಳ ಮೇಲಿನ ಮಾನವನ ವ್ಯಾಮೋಹದಿಂದಾಗಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಅವನತಿಯಂಚಿನಲ್ಲಿದೆ. ಸಸ್ತನಿ , ಸರೀಸೃಪ , ಉಭಯಚರ, ಕೀಟ, ಮೀನು ಸಹಿತ ಲೆಕ್ಕಕ್ಕೆ ಸಿಗ ದಷ್ಟು ಪ್ರಭೇದಗಳು ಕಣ್ಮರೆಯಾಗುತ್ತಿದೆ.
·  ಐದು ಜಾತಿಯ ಪ್ರಭೇದಗಳಲ್ಲಿ ವರ್ಷದಲ್ಲಿ ನಾವು ಒಂದನ್ನು ಕಳೆದುಕೊಳ್ಳುತ್ತಿದ್ದೇವೆ.
·  ಒಟ್ಟು 1,000 ದಿಂದ 10,000 ಸಾವಿರ ಪ್ರಭೇದಗಳನ್ನು ವಾರ್ಷಿಕವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಸಂಶೋಧನೆಗಳು ತಿಳಿಸಿವೆ.
·  ಕಳೆದ 28 ವರ್ಷಗಳಲ್ಲಿ ಕೀಟಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದ್ದು, ಇದ ರಿಂದ ಶೇ. 60ರಷ್ಟು ಪಕ್ಷಿಗಳಿಗೆ ಸಿಗುವ ಆಹಾರದ ಪ್ರಮಾಣ ಕಡಿಮೆಯಾಗಿದೆ.
·  ಆವಾಸ ಸ್ಥಾನಗಳ ನಾಶ, ಶೋಷಣೆ ಮತ್ತು ಹವ ಮಾನ ಬದಲಾವಣೆಯಿಂದ ವಿಶ್ವದ ಕಾಡು ಪ್ರಾಣಿ ಗಳು ಪ್ರಸ್ತುತ ಅರ್ಧ ದಷ್ಟು ಕಡಿಮೆಯಾಗಿದೆ.
·  ವಿಶ್ವದಾದ್ಯಂತ ವಾರ್ಷಿಕವಾಗಿ ಮೀನುಗಾರಿಕೆ ಮತ್ತು ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿರುವ 6,50,000ಕ್ಕೂ ಹೆಚ್ಚು ಪ್ರಭೇದಗಳು ನಾಶಗೊಂಡಿವೆೆ.
·  20 ವರ್ಷಗಳಲ್ಲಿ ಡಾಲ್ಫಿನ್‌ಗಳ ಪ್ರಮಾಣ ಶೇ.65, ಪಿನ್ನಿ ಪೆಡ್‌(ಸಮುದ್ರ ಸಿಂಹಗಳು) ಮತ್ತು ಹಲ್ಲಿನ ತಿಮಿಂಗಿಲಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದೆ.
·  ವಿಶ್ವದ ಪಕ್ಷಿ ಪ್ರಭೇದಗಳಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ. ವಾರ್ಷಿಕವಾಗಿ 8 ಪ್ರಭೇದಗಳಲ್ಲಿ 1 ಪ್ರಭೇದ ಅಳಿವಿನಂಚಿನಲ್ಲಿದೆ.
·  ಹುಲಿ, ಚಿರತೆ ಮತ್ತು ಬೆಕ್ಕುಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಶಕಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂಬು ದನ್ನು ಸಂಶೋಧನೆಗಳು ಸ್ಪಷ್ಟಪಡಿಸಿದೆ.
·  ಬೆಕ್ಕು, ಖಡ್ಗಮೃಗ ಮತ್ತು ಇತರ ಪ್ರಾಣಿಗಳ ಚರ್ಮ ಮತ್ತು ದೇಹದ ಭಾಗಗಳನ್ನು ಬಳಸಿಕೊಳ್ಳುತ್ತಿರುವ ಚೀನಾ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
·  ಹಲ್ಲಿಗಳ ಜನನದ ಪ್ರಮಾಣ ಹವಮಾನ ಬದಲಾವಣೆಯಿಂದಾಗಿ ಕಡಿಮೆಯಾಗತ್ತಿದ್ದು, ಇತ್ತೀ ಚಿನ ಅಧ್ಯಯನಗಳ ಪ್ರಕಾರ ಶೇ. 40ರಷ್ಟು ಹಲ್ಲಿ ಗಳು ನಾಶವಾಗಿವೆ. 2080ರ ಹೊತ್ತಿಗೆ ಈ ಜಾತಿಯೇ ನಿರ್ನಾಮಗೊಳ್ಳುತ್ತದೆ ಎನ್ನಲಾಗಿದೆ.
·  ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೆರಿಕಾದ ಕಾಡೆಮ್ಮೆಗಳ ಪ್ರಮಾಣ ಕ್ಷಿಣಿಸುತ್ತಿದೆ.

  ಶಿವ ಸ್ಥಾವರಮಠ,
ಪ್ರೀತಿ ಭಟ್‌ ಗುಣವಂತೆ, ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next