ಹುಬ್ಬಳ್ಳಿ: ರಾಷ್ಟ್ರಧ್ವಜ, ಚರಕ ದೇಶಪ್ರೇಮದ ಸಂಕೇತವಾಗಿದೆ. ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿಯೊಂದೇ ಕೇಂದ್ರದ ತಪ್ಪು ಅಲ್ಲ. ಬದಲಾಗಿ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳ ಜೇಬು ತುಂಬಲು ಅನೇಕ ಕಾಯ್ದೆ, ತಿದ್ದುಪಡಿ ತಂದಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಷ ಮಧ್ಯಮ ವರ್ಗದವರ ಜೇಬಿನಿಂದ ಹಣ ಕಸಿದು ಕೆಲವರ ಜೇಬು ತುಂಬಿಸುತ್ತಿದೆ. ನೋಟುಗಳ ಅಮಾನ್ಯ, ಜಿಎಸ್ ಟಿ, ಮೂರು ಕೃಷಿ ಕಾಯ್ದೆ ಜಾರಿಯೇ ಸಾಕ್ಷಿ. ಕೇಂದ್ರ ಸರಕಾರಕ್ಕೆ ಬೇಕಿರುವುದು ಕೆಲವರ ಹಿತವೇ ಹೊರತು ಜನಸಾಮಾನ್ಯರ ಹಿತವಲ್ಲ ಎಂದು ಆರೋಪಿಸಿದರು.
ಈ ವೇಳೆ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜ ನಿರ್ಮಾಣ ಕೇಂದ್ರದಲ್ಲಿ ರಾಷ್ಟ್ರಧ್ವಜ ಇಸ್ತ್ರಿ ಮಾಡಿ ರಾಷ್ಟ್ರಧ್ವಜಕ್ಕೆ ಅಶೋಕ ಚಕ್ರ ಮೂಡಿಸಿದರು. ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಇದನ್ನೂ ಓದಿ: ಗುತ್ತಿಗಾರು: ಸ್ಕೂಟಿ – ಕಾರು ಢಿಕ್ಕಿ; ಸವಾರನಿಗೆ ಗಾಯ
ಈ ವೇಳೆ ನಾಯಕರಾದ ಕೆ.ಸಿ ವೇಣುಗೋಪಾಲ, ಡಿ.ಕೆ.ಶಿವಕುಮಾರ್, ಸಲೀಂ ಅಹ್ಮದ್ ಇನ್ನಿತರರು ಇದ್ದರು.