Advertisement
ಮಹಾನಗರ: ಮಹಾನಗರ ಪಾಲಿಕೆಗೆ ಒಂದು ವರ್ಷದ ಬಳಿಕ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳ ಆಡಳಿತಕ್ಕೆ ಚಾಲನೆ ಸಿಕ್ಕಂತಾಗಿದೆ.ಬೆಂಗಳೂರಿನ ಬಳಿಕ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ನಗರ ಮಂಗಳೂರು. ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಗೊಳ್ಳುತ್ತಿರುವ ನಗರದಲ್ಲಿ ನಿಧಾನಗತಿಯಲ್ಲಿರುವ ಹಾಗೂ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ವೇಗ ದೊರಕೀತೆಂಬ ನಿರೀಕ್ಷೆ ನಾಗರಿಕರದ್ದು.
Related Articles
Advertisement
ಜನಪ್ರತಿನಿಧಿಗಳ ಆಡಳಿತವಿಲ್ಲದೆ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನಮ್ಮ ಸಮಸ್ಯೆ, ಸವಾಲುಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವೇಗ ಕುಂಠಿತಗೊಂಡಿದೆ. ಕೆಲವೆಡೆ ಕಾಮಗಾರಿಗಳು ನಡೆದಿಲ್ಲ. ಹೊಸ ಯೋಜನೆಗಳು ಬರುವಲ್ಲಿ , ಬೇಡಿಕೆ ಮಂಡಿಸುವ ಕಾರ್ಯ ಆದ್ಯತೆಯ ನೆಲೆಯಲ್ಲಿ ನಡೆದಿಲ್ಲ ಎಂಬ ಟೀಕೆ ಸಾರ್ವಜನಿಕರದ್ದು,
ನಗರ ಸ್ಥಳೀಯಾಡಳಿತದಿಂದ ಹಿಡಿದು ಕೇಂದ್ರ ಸರಕಾರದವರೆಗೆ ಒಂದೇ ಪಕ್ಷದ ಆಡಳಿತ ವ್ಯವಸ್ಥೆಯಿದ್ದು, ಹೊಸ ಯೋಜನೆಗಳ ಅನುಷ್ಠಾನ, ಅನುದಾನಗಳ ಮಂಜೂರಾತಿ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಗಿಸಲು ಒಂದು ಒಳ್ಳೆಯ ಅವಕಾಶವೂ ಹೌದು.
ಕೊಟ್ಟ ಭರವಸೆ ಈಡೇರಿಸಲು ಸಕಾಲಪಾಲಿಕೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕುಡಿಯುವ ನೀರು, ತ್ಯಾಜ್ಯ, ಒಳಚರಂಡಿ,ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಮೂಲ ಅವಶ್ಯಕತೆಗಳನ್ನು ಪೂರೈಸಲು ಆರ್ಥಿಕ ಸಂಪನ್ಮೂಲದ ಕೊರತೆ ಇದೆ. ಆಸ್ತಿ ತೆರಿಗೆ, ಕಟ್ಟಡ ತೆರಿಗೆ, ನೀರಿನ ಬಿಲ್ ಸಹಿತ ಆದಾಯ ಮೂಲಗಳ ಪರಿಣಾಮಕಾರಿ ಸಂಗ್ರಹದಲ್ಲಿ ಹಿನ್ನಡೆಯಾಗಿರುವುದನ್ನು ಪಾಲಿಕೆಯ ಅಂಕಿ-ಅಂಶಗಳೇ ಹೇಳುತ್ತಿವೆ. ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿ ನಗರದ ಸಮಗ್ರ ಅಭಿವೃದ್ಧಿಯತ್ತ ಮುಂದಡಿಯಿಡಬೇಕಾಗಿರುವುದು ಪ್ರಮುಖ ಸವಾಲು. ಪಾಲಿಕೆಗೆ ಈ ಬಾರಿ ಆಯ್ಕೆಯಾಗಿರುವ ಸದಸ್ಯರಲ್ಲಿ ಸುಮಾರು 40 ಸದಸ್ಯರು ಹೊಸಬರು, ಪಾಲಿಕೆ ಪರಿಷತ್ ಅಧಿವೇಶನ ಅವರಿಗೆ ಹೊಸತು. ಅವರು ಪರಿಣಾಮಕಾರಿಯಾಗಿ ಪಾಲ್ಗೊಳ್ಳುವಂತಾಗಲು ಹಿರಿಯ ಸದಸ್ಯರ ಮಾರ್ಗದರ್ಶನ ಅವರಿಗೆ ಬೇಕು. ಹಿರಿಯ ಸದಸ್ಯರ ಸಹಕಾರದೊಂದಿಗೆ ಹೊಸಬರನ್ನೂ ಜತೆಗೆ ಕೊಂಡೊಯ್ಯುವ ಹೊಣೆಯೂ ನೂತನ ಮೇಯರ್ ಅವರ ಮೇಲಿದೆ. ಪಾಲಿಕೆಯ ಇತಿಹಾಸದಲ್ಲೇ 60 ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಪಡೆದು ಭಾರೀ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಚುನಾ ವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನಗರದ ಜನತೆಗೆ ಭರಪೂರ ಭರ ವಸೆ ಗಳನ್ನು ನೀಡಿದೆ. ಇದನ್ನು ಈಡೇರಿಸುವ ಜವಾಬ್ದಾರಿಯೂ ಮೇಯರ್ ಅವರ ಮೇಲಿದೆ. “ಹೊಸ ಮೇಯರ್-ಹಲವು ಸವಾಲು’
ಜನರ ನಿರೀಕ್ಷೆಗೆ ಸುದಿನ ವೇದಿಕೆ ನಗರಕ್ಕೆ ಹೊಸ ಮೇಯರ್ ಮತ್ತು ಉಪಮೇಯರ್ ಬಂದಿದ್ದಾರೆ. ನಗರದ ಜ್ವಲಂತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಪಾಲಿಕೆ ಆಡಳಿತ ಕಾರ್ಯ ನಿರ್ವಹಿಸಬೇಕೆಂಬುದೇ ಸುದಿನದ ಆಶಯ. ಹೊಸ ಪರಿಷತ್ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ “ಹೊಸ ಮೇಯರ್-ಹಲವು ಸವಾಲು’ ಎನ್ನುವ ಸರಣಿ ಪ್ರಾರಂಭಿಸುತ್ತಿದ್ದೇವೆ. ನಾಗರಿಕರೂ ನಗರದ ಅಭಿವೃದ್ಧಿ ಕುರಿತಂತೆ ಸೂಕ್ತವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ಬರೆದು ಹೆಸರು, ಫೋಟೋದೊಂದಿಗೆ ವಾಟ್ಸಾಪ್ ಮಾಡಬಹುದು.
9900567000 ಕೇಶವ ಕುಂದರ್