Advertisement

ಬೋಲ್ಡ್‌ ಲುಕ್‌ನಲ್ಲಿ ಮಾನ್ವಿತಾ 

06:03 AM Jan 06, 2019 | |

ಮಾನ್ವಿತಾ ಸಖತ್‌ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಹೊಸ ಫೋಟೋಶೂಟ್‌ನಲ್ಲಿ. ಹೌದು, ಮಾನ್ವಿತಾ ಹೊಸ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಸಖತ್‌ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಕೆಂಡಸಂಪಿಗೆ’ ಚಿತ್ರದ ಮೂಲಕ ಬೆಳಕಿಗೆ ಬಂದ ಮಾನ್ವಿತಾ ಆ ನಂತರ “ಟಗರು’ ಚಿತ್ರದ ಪುನರ್ವಸು ಪಾತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡರು.

Advertisement

ಈಗ ಮಾನ್ವಿತಾ “ದಾರಿ ತಪ್ಪಿದ ಮಗ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾ ಸಖತ್‌ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಲ್‌ “ದಾರಿ ತಪ್ಪಿದ ಮಗ’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಧೀರೇನ್‌ ಈ ಚಿತ್ರದ ಮೂಲಕ ನಾಯಕರಾಗಿ ಲಾಂಚ್‌ ಆಗುತ್ತಿದ್ದಾರೆ. ಸದ್ಯ ಮಾನ್ವಿತಾ ಈ ಚಿತ್ರಕ್ಕಾಗಿ ಅಣಿಯಾಗಿದ್ದು, ಜನವರಿ 15ರಿಂದ ಚಿತ್ರೀಕರಣ ಆರಂಭವಾಗಲಿದೆ. ಹೊಸ ವರ್ಷದಲ್ಲಿ ಮಾನ್ವಿತಾ ನಟಿಸಿರುವ ಮೂರು ಚಿತ್ರಗಳು ಬಿಡುಗಡೆಯಾಗಲಿವೆ.

“ರಿಲ್ಯಾಕ್ಸ್‌ ಸತ್ಯ’, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಸಿನಿಮಾ ಹಾಗೂ “ದಾರಿ ತಪ್ಪಿದ ಮಗ’ ಚಿತ್ರಗಳು ಈ ವರ್ಷ ತೆರೆಕಾಣಲಿವೆ. ಜೊತೆಗೆ ಮರಾಠಿ ಸಿನಿಮಾವೊಂದರಲ್ಲೂ ಮಾನ್ವಿತಾ ನಟಿಸುತ್ತಿದ್ದು, ಆ ಚಿತ್ರ ಕೂಡಾ ಈ ವರ್ಷವೇ ತೆರೆಕಾಣುವ ಸಾಧ್ಯತೆ ಇದೆ. ಇನ್ನು, ಹೊಸ ವರ್ಷದಲ್ಲಿ ಮಾನ್ವಿತಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರಿದ್ದು, ಸ್ಕ್ರಿಪ್ಟ್ ಬರೆಯಲು ಮುಂದಾಗಿದ್ದಾರಂತೆ. ಸದ್ಯ ಮಾನ್ವಿತಾ ಅವರ ಗ್ಲಾಮರಸ್‌ ಫೋಟೋಸ್‌ ಮೂಲಕ ಮಿಂಚುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next