Advertisement
ದುರಸ್ತಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸದಿರುವುದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ತಾಲೂಕಿನಲ್ಲಿ 135 ಶುದ್ಧೀಕರಣ ಘಟಕಗಳಿವೆ. ಇದರಲ್ಲಿ 93 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 38 ಘಟಕಗಳು ದುರಸ್ತಿಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲ್ಕೈದು ವರ್ಷ ಕಳೆದರೂ ರಿಪೇರಿ ಮಾಡಿಲ್ಲ. ಜಾನೇಕಲ್‌ನಲ್ಲಿನ ಘಟಕ ಪದೆ ಪದೆ ಕೈಕೊಡುತ್ತಲೇ ಇವೆ.
Related Articles
Advertisement
ಶುದ್ಧೀಕರಣ ಯಂತ್ರದಲ್ಲಿ 26 ಬಿಡಿಭಾಗದ ಸಲಕರಣೆಗಳಿರುತ್ತವೆ. ಇವು ಕಳಪೆಯಾಗಿದ್ದು, ನೀರನ್ನು ಸರಿಯಾಗಿ ಶುದ್ಧೀಕರಿಸುವುದಿಲ್ಲ. ಪದೆ ಪದೆ ಯಂತ್ರಗಳು ದುರಸ್ತಿಗೆ ಬರುತ್ತಿವೆ. ಇನ್ನು ಕೆಲವಡೆ ನೀರಿನ ಕೊರತೆ, ನಿರ್ವಹಣೆ ಕೊರತೆಯಿಂದ ಯಂತ್ರಗಳು ಕೆಟ್ಟಿವೆ. ಅಲ್ಲದೆ ಏಜೆನ್ಸಿಗಳು ಕೂಡಲೇ ದುರಸ್ತಿಗೂ ಮುಂದಾಗುವುದಿಲ್ಲ. ಪಟ್ಟಣದಲ್ಲಿ ಅನೇಕ ವಾರ್ಡ್‌ಗಳಲ್ಲಿ ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸಿದ್ದರೂ, ಕಳಪೆ ಯಂತ್ರ ಮತ್ತು ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ.
ಫ್ಲೋರೈಡ್ ಸಮಸ್ಯೆ: ಇನ್ನೂ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಫ್ಲೋರೈಡ್, ಅರ್ಸೆನಿಕ್ ಅಂಶವಿರುವ ನೀರಿನ್ನೇ ಬಳಸುತ್ತಿದ್ದಾರೆ. ಕೆಲವಡೆ ಕೆರೆ, ಬಾವಿ ಮತ್ತು ಕಾಲುವೆ ನೀರನ್ನು ಶುದ್ಧೀಕರಿಸದೆ ಸೇವನೆ ಮಾಡುತ್ತಿರುವುದರಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಾನೇಕಲ್ ಗ್ರಾಮದಲ್ಲಿ ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಮೊಣಕಾಲು ನೋವು, ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುತ್ತಿವೆ. ಪೋತ್ನಾಲ್, ಕೊಕ್ಲೃಕಲ್, ಚಾಗಬಾವಿ, ಬೊಮ್ಮನಾಳ, ಸಂಗಾಪುರ ಕಪಗಲ್, ಚೀಕಲಪರ್ವಿ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ಶುದ್ಧ ನೀರಿಗೆ ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಾರಿ ಕೊರೊನಾ ವೈರಸ್ ಭೀತಿಯಲ್ಲಿರುವುದರಿಂದ ಸ್ಥಿತಿ ಇನ್ನೂ ಗಂಭೀರ ಎನ್ನವಂತಿದೆ.
ಖಾಸಗಿ ಶುದ್ಧೀಕರಣ ಘಟಕಗಳಿಂದ ಅಧಿಕ ಹಣ ನೀಡಿ ನೀರು ಖರೀದಿ ಮಾಡಿ ಕುಡಿಯಬೇಕಾಗುತ್ತದೆ. ಇನ್ನಾದರೂ ಅಧಿಕಾರಿಗಳು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿಬಂದಿವೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ತಾಲೂಕಿನಾದ್ಯಂತ 135 ಆರ್‌ಒ ಪ್ಲಾಂಟ್‌ಗಳಿದ್ದು, ಕೇವಲ 38 ದುರಸ್ತಿಯಾಗಿವೆ. ಈಗಾಗಲೇ ಇವುಗಳ ರಿಪೇರಿಗೆ ಸಂಬಂಧಿಸಿದ ಏಜೆನ್ಸಿಗೆ ಸೂಚಿಸಿದ್ದೇನೆ. ಜಂಗಮರಹಳ್ಳಿಯಲ್ಲಿ ಶುದ್ಧೀಕರಣ ದುರಸ್ತಿ ಮಾಡಿಸಲಾಗಿದೆ. ಶಾಖಾಪುರದಲ್ಲಿ ಕೆರೆಗೆ ನೀರು ತುಂಬಿಸಲಾಗಿದೆ. ಹೀಗೆ ಒಂದೊಂದಾಗಿ ದುರಸ್ತಿ ಮಾಡಿಸಲಾಗುತ್ತಿದ್ದು, ಸಮಯಾವಕಾಶ ಬೇಕಿದೆ.ಶಶಿಕಾಂತ್ ವಂದಾಳಿ,
ಗ್ರಾಮೀಣ ನೀರು ಸರಬರಾಜು ಇಲಾಖೆ,
ಮಾನ್ವಿ ಕಳೆದ 15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷಿಸಲಾಗಿತ್ತು. ಆದರೆ ಕಳೆದ ವರ್ಷದಿಂದ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಳೆದ ತಿಂಗಳು ಐದು ಬೋರ್‌ವೆಲ್ ಕೊರೆಯಿಸಿ, ಟ್ಯಾಂಕ್ ನಿರ್ಮಾಣ ಮಾಡಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದೆಯೂ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಲ್ಲಿ ಬೋರ್ ವೆಲ್ ಕೊರೆಸಲಾಗುವುದು. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ರಾಜಾಮಹೇಂದ್ರ ನಾಯಕ,
ಪುರಸಭೆ ಸದಸ್ಯರು. ರವಿ ಶರ್ಮಾ