Advertisement

ಮಹಾತ್ಮರ ಆದರ್ಶ ಪಾಲನೆ ಆಗಲಿ

12:18 PM Jan 15, 2020 | Naveen |

ಮಾನ್ವಿ: ಶಿವಯೋಗಿ ಸಿದ್ದರಾಮೇಶ್ವರ ಕರ್ಮಯೋಗದ ಮೂಲಕ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾಪುರುಷರು. ಇವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಕಾಯಕ ನಿಷ್ಠೆಗೆ ಹೆಸರಾದ ಬಸವಾದಿ ಶರಣರು ತಮ್ಮ ವಚನ ಭಂಡಾರದ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗಕ್ಕೆ ಸಿದ್ದರಾಮೇಶ್ವರರು ಉತ್ತಮ ನಿದರ್ಶನರಾಗಿದ್ದಾರೆ ಎಂದು ಹೇಳಿದರು.

ಸಿದ್ದರಾಮೇಶ್ವರರು ಸಮಾಜದ ಮೇಲು-ಕೀಳು, ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದರು, ಸದಾ ಶ್ರಮಜೀವಿಯಾಗಿದ್ದ ಅವರು ಕಾಯಕವೇ ಜೀವನ. ದುಡಿಮೆ ಇಲ್ಲದ ಊಟ ಉಣ್ಣಬಾರದು ಎಂದಿದ್ದಾರೆ. ಶಿವರೂಪದ ಮಲ್ಲಯ್ಯನನ್ನು ಹುಡುಕಿಕೊಂಡು ಶ್ರೀಶೈಲಕ್ಕೆ ಹೋಗಿ ಮಲ್ಲಯ್ಯನ ದರ್ಶನ ಪಡೆಯುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರು.

ಇಂತಹ ಮಹಾನ್‌ ಶರಣರು ಸೊನ್ನಲಿಗೆ ಎಂಬ ಗ್ರಾಮದಲ್ಲಿ ದಾಸೋಹ, ನಿತ್ಯ ಪೂಜೆ ಮಾಡಿಕೊಂಡು ಬರುತ್ತಿದ್ದರು. ಕಾಯಕಯೋಗಿಯಾಗಿದ್ದ ಅವರು, ತಮ್ಮ ಅಪಾರ ಶಿಷ್ಯರೊಂದಿಗೆ ದೇವಾಲಯ, ಬಾವಿ, ಕೆರೆ ನಿರ್ಮಾಣ ಮಾಡುತ್ತಿದ್ದರು. ಅಲ್ಲದೆ ಅನೇಕ ವಚನಗಳನ್ನು ಇವರು ಬರೆದಿದ್ದು, ಕಪಿಲಸಿದ್ದ ಮಲ್ಲಿಕಾರ್ಜುನ ವಚನಾಂಕಿತದಲ್ಲಿ ದೊರೆತಿವೆ. ಭೋವಿ ಸಮಾಜ ಸಹ ಕಾಯಕ ತತ್ವ ಅಳವಡಿಸಿಕೊಂಡಿದೆ. ಸಮಾಜವು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

Advertisement

ತಾಲೂಕು ಪಂಚಾಯಿತಿ ಅಧ್ಯಕ್ಷ ಚೆನ್ನಬಸವ ಬೆಟ್ಟದೂರು, ರಂಗಪ್ಪ ಮೇದಾ, ಮಾತನಾಡಿದರು. ಪುರಸಭೆ ಸದಸ್ಯರಾದ ಲಕ್ಷ್ಮೀ  ಹನುಮಂತ ಭೋವಿ, ಶರಣಪ್ಪ ಮೇದಾ, ಶಿವರಾಜ ನಾಯಕ, ಇಬ್ರಾಹಿಂ ಖುರೇಷಿ, ಪಿಎಸ್‌ಐ ರಂಗಪ್ಪ ದೊಡ್ಮನಿ, ಪುರಸಭೆ ಮುಖ್ಯಾ ಧಿಕಾರಿ ವಿಜಯಲಕ್ಷ್ಮೀ , ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ನರಸಿಂಹ ನೀರಮಾನ್ವಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next