Advertisement

ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ

05:24 PM Jan 24, 2020 | Naveen |

ಮಾನ್ವಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಶ್ಚಂದ್ರ ಬೋಸ್‌ರ ಧೈರ್ಯ, ಸಾಹಸ ಮನೋಭಾವ, ಹೋರಾಟವನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ದೇಶಪ್ರೇಮ ಬೆಳೆಸಬೇಕಿದೆ ಎಂದು ಪತ್ರಕರ್ತ ತಾಯಪ್ಪ ಬಿ.ಹೊಸೂರು ಹೇಳಿದರು.

Advertisement

ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ರ
124ನೇ ಜಯಂತಿ ಆಚರಣೆ ಅಂಗವಾಗಿ ವಿದ್ಯಾರ್ಥಿಗಳ ತಾಯಂದಿರಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳ ಸ್ಪರ್ಧೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ವೇಳೆ ಸುಭಾಶ್ಚಂದ್ರ ಬೋಸ್‌ರು, ನೀವು ನನಗೆ ರಕ್ತ ಕೂಡಿ, ನಾನು
ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಕ್ರಾಂತಿಯ ಕಹಳೆ ಮೊಳಗಿಸಿದ್ದರು. ದೇಶಕ್ಕೆ
ಅನೇಕ ನೇತಾರರು ಇರಬಹುದು ಆದರೆ ಸ್ವಾತಂತ್ರ್ಯದ ವೀರ ಸೇನಾನಿ ನೇತಾರ ನೇತಾಜಿ ಒಬ್ಬರೇ. ರಕ್ತ ಹರಿಸಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು ಅಹಿಂಸಾ ಪ್ರತಿಪಾದನೆಯಿಂದ ಯಾವ ಲಾಭವೂ ಇಲ್ಲ ಎಂಬ ಆಲೋಚನೆ ಅವರದ್ಧಾಗಿತ್ತು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶರಣಬಸವ ನೀರಮಾನ್ವಿ ಮಾತನಾಡಿ, ಪ್ರತಿವರ್ಷ
ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಜಯಂತಿ ನಿಮಿತ್ತ ಭಾವಚಿತ್ರ ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ ತಾಯಿಯಿಂದ ಮಗುವಿಗೆ ಕೈ ತುತ್ತು ತಿನ್ನಸುವುದು ಹಾಗೂ ತಾಯಂದಿರಿಗೆ ವಿವಿಧ ಸ್ಪರ್ಧೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ವೈಶಿಷ್ಟ್ಯ ಪೂರ್ಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಡಾ| ಪ್ರಜ್ಞಾ
ಹರಿಪ್ರಸಾದ, ಗೀತಾ ಡಾ| ವಿವೇಕಾನಂದ ಮಾತನಾಡಿದರು. ತಾಯಂದಿರಿಗಾಗಿ
ಅಂತ್ಯಾಕ್ಷರಿ, ಮ್ಯೂಜಿಕಲ್‌ ಚೇರ್‌, ಲೆಮನ್‌ ಸ್ಪೂನ್‌, ಇನ್‌ ಔಟ್‌ ಸೇರಿದಂತೆ ವಿವಿಧ ಆಟೋಟಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Advertisement

ಸಂಸ್ಥೆ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಪತ್ರಕರ್ತ ಹನುಮಂತಪ್ಪ ಕೊಟೆ°ಕಲ್‌,
ಮುಖ್ಯೋಪಾಧ್ಯಾಯಿನಿ ಅನಿಸ್‌ ಫಾತಿಮಾ, ಶಿಕ್ಷಕರಾದ ಬಸವರಾಜ, ಶಿಲ್ಪಾ, ರಹೆಮಾನ್‌ ಸೇರಿದಂತೆ ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next