ಮಾನ್ವಿ: ತಾಲೂಕಿನ ಎಲ್ಲ ಗ್ರಾಮಗಳ ರಸ್ತೆ ಹಾಗೂ ಮೂಲಭೂತಗಳ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸರ್ವಾಂಗಿಣ ಪ್ರಗತಿಗೆ ಶ್ರಮಿಸುವುದಾಗಿ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ಪೋತ್ನಾಳ ಜಿಪಂ ವ್ಯಾಪ್ತಿಯಲ್ಲಿ 2019-20ನೇ ಸಾಲಿನ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಒಟ್ಟು 6.86 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಮಗಳ ಸಂಪರ್ಕ ರಸ್ತೆಗಳ ಡಾಂಬರೀಕರಣ ಮತ್ತು ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಪಿಡಿಒ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ 2019-20ನೇ ಸಾಲಿನ ಎಚ್ ಕೆಆರ್‌ಡಿಬಿ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ ಪೋತ್ನಾಳ ಗ್ರಾಮದಿಂದ ಜೀನೂರುಕ್ಯಾಂಪ್ ವರೆಗೆ ರಸ್ತೆ ಡಾಂಬಂರೀಕರಣ ಮತ್ತು 2 ಕೋಟಿ ರೂ. ವೆಚ್ಚದ ಪೋತ್ನಾಳ ಮುಖ್ಯರಸ್ತೆಯಿಂದ ರಂಗದಾಳ ರಸ್ತೆ ಡಾಬಂರೀಕರಣ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಪೋತ್ನಾಳದಿಂದ ಉದ್ಬಾಳ ಗ್ರಾಮದ ಸಂಪರ್ಕ ರಸ್ತೆ ಡಾಂಬರೀಕರಣ ಹಾಗೂ 36 ಲಕ್ಷ ರೂ. ವೆಚ್ಚದ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಸೇರಿದಂತೆ ಒಟ್ಟು 6.86 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಗಳಿಗೆ ಮತ್ತು ಗುತ್ತೇದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಜೆಡಿಎಸ್ ರಾಜ್ಯ ಯುವ ಮುಖಂಡರಾದ ರಾಜಾರಾಮಚಂದ್ರ ನಾಯಕ, ನಾಗರಾಜ ಭೋಗಾವತಿ,ವಕೀಲ ವೆಂಕಟನರಸಿಂಹಗೌಡ ಸದಾಪುರ, ಎಂ.ಡಿ.ಇಸ್ಮಾಯಿಲ್, ಡಾ| ಈರಣ್ಣ ಮರ್ಲಟ್ಟಿ, ಜೆಡಿಎಸ್ ನಗರ ಘಟಕಾಧ್ಯಕ್ಷ ಕಲೀಲ್ ಖರೇಶಿ, ಶ್ರೀಧರಸ್ವಾಮಿ, ಗೋಪಾಲ ನಾಯಕ, ಮಲ್ಲಯ್ಯ ದೋಣಿ ಪೋತ್ನಾಳ, ಬಸವರಾಜ ಉರಲಗಡ್ಡಿ, ದೇವೇಗೌಡ ಉದ್ಬಾಳ, ಅಮರೇಗೌಡ ಕರಾಬದಿನ್ನಿ, ರಾಚಪ್ಪ ಪೋತ್ನಾಳ, ಲೋಕೋಪಯೋಗಿ ಇಲಾಖೆ ಎಇಇ ಜಿತೇಂದ್ರ ಅಂಗಡಿ, ಜೆಇ ಗಜಾನನ, ಕ್ಯಾಶೋಟೆಕ್ ಅಧಿಕಾರಿ ವೆಂಕಟೇಶ ಹಜಾರ ಇದ್ದರು.