Advertisement
ಹಾಸ್ಟೆಲ್ ಮೇಲ್ವಿಚಾರಕ ವಿದ್ಯಾರ್ಥಿಗಳಿಗೆ ಸಿಗದಂತೆ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ದೂರವಾಣಿಗೂ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
Related Articles
Advertisement
ಶೌಚಾಲಯಕ್ಕೆ ಬೀಗ: ಇನ್ನು ಹಾಸ್ಟೆಲ್‌ನಲ್ಲಿರುವ ಶೌಚಾಲಯದ ಪೈಪ್‌ಲೈನ್ ದುರಸ್ತಿಗೀಡಾಗಿದ್ದರಿಂದ ಬೀಗ ಜಡಿಯಲಾಗಿದೆ. ಇದುವರೆಗೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಸ್ಟೆಲ್ ಹಿಂದುಗಡೆಯ ಗುಡ್ಡಕ್ಕೆ ಶೌಚಕ್ಕೆ ಹೋಗತ್ತಿದ್ದಾರೆ. ರಾತ್ರಿ ಸಮಯದಲ್ಲಿ ವಿದ್ಯಾರ್ಥಿಗಳು ಶೌಚಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಕೆಲ ಕೋಣೆಯಲ್ಲಿ ವಿದ್ಯುತ್ ದೀಪಗಳಿಲ್ಲ, ಫ್ಯಾನ್‌ಗಳಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಸಿಗದ ವಾರ್ಡನ್ವಸತಿ ನಿಲಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ವಾರ್ಡನ್ ಪ್ರಭುಗೌಡ ಮಾತ್ರ ಹಾಸ್ಟೆಲ್ ಕಡೆ ಸುಳಿಯುತ್ತಿಲ್ಲ. ಅಡುಗೆದಾರರೇ ಇಲ್ಲಿ ಮೇಲ್ವಿಚಾರಕರಾಗಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ವಾರ್ಡನ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ತಿಂಗಳಿಗೊಮ್ಮೆ ಬಂದು ಹಾಜರಿಗೆ ಸಹಿ ಮಾಡಿ ಹೋಗುತ್ತಾರೆ. ಹಾಸ್ಟೆಲ್‌ಗೆ ಬಂದರೂ ಕೈಗೆ ಸಿಗುತ್ತಿಲ್ಲ ಎಂದು ದೂರಿರುವ ವಿದ್ಯಾರ್ಥಿಗಳು, ಮೇಲಾ ಧಿಕಾರಿಗಳು ಹಾಸ್ಟೆಲ್‌ನಲ್ಲಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ಬ್ಯಾಗವಾಟ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಕೂಡಲೇ ಇಲಾಖೆಯ ಮಾನ್ವಿ ವಿಸ್ತರಣಾ ಧಿಕಾರಿ ಜಿ.ಎನ್. ಕ್ಯಾಡಿಯವರಿಗೆ ತಿಳಿಸುತ್ತೇನೆ. ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.
ಎಂ.ಎಸ್.ಗೋನಾಳ,
ಜಿಲ್ಲಾ ಅಧಿಕಾರಿಗಳು,
ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ
ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಸರಿ ಇಲ್ಲ. ಈ ಬಗ್ಗೆ ತಿಳಿಸಲು ವಾರ್ಡನ್ ನಮಗೆ ಸಿಗುತ್ತಿಲ್ಲ. ಸೊಳ್ಳೆಗಳು ಹೆಚ್ಚಾಗಿವೆ. ಶೌಚಕ್ಕೆ ಗುಡ್ಡಕ್ಕೆ ಹೋಗುತ್ತಿದ್ದೇವೆ. ಕುಡಿಯಲು ಶುದ್ಧ ನೀರಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ನಮಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಟ್ಯೂಷನ್ ನಡೆಸಿಲ್ಲ. ವಾರ್ಡನ್‌ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ನಾವು ಶಾಲೆಗೆ ಹೊದ ಸಂದರ್ಭದಲ್ಲಿ ಹಾಸ್ಟೆಲ್ ಬಂದು ನಮಗೆ ಸಿಗದಂತೆ ಹೋಗುತ್ತಾರೆ. ಸಮಸ್ಯೆ ಕೇಳುವುದಿಲ್ಲ.
ವಿದ್ಯಾರ್ಥಿಗಳು
ರವಿ ಶರ್ಮಾ