Advertisement

ಸ್ಕೂಲ್‌ ವ್ಯಾನ್‌ ಫುಟ್‌ಬೋರ್ಡ್‌ ಮೇಲೆ ನಿಂತ ಮಗು

12:07 PM Nov 30, 2019 | Naveen |

ಮಾನ್ವಿ: ಸ್ಕೂಲ್‌ ವ್ಯಾನ್‌ ಫುಟ್‌ಬೋರ್ಡ್‌ ಮೇಲೆ ನಿಂತು ಮಗುವೊಂದು ಮನೆಗೆ ತೆರಳುತಿದ್ದ ವಿಡಿಯೋ ಗುರುವಾರ ವೈರಲ್‌ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಎಚ್‌. ಗೋನಾಳ, ಪಿಎಸ್‌ಐ ರಂಗಪ್ಪ ದೊಡ್ಮನಿ ಪಟ್ಟಣದ ಶ್ರೀ ಉಮಾಪತಿ ಪಾಟೀಲ್‌ ಮೆಮೊರಿಯಲ್‌ ಸ್ಕೂಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಎಚ್‌. ಗೋನಾಳ ಮಾತನಾಡಿ, ಮಕ್ಕಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆಯಿಂದ ಅನೇಕ ನಿಯಮ ಜಾರಿಗೊಳಿಸಲಾಗಿದೆ. ಆದರೆ ಈ ಶಾಲೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೋಟಿಸ್‌ ಜಾರಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಲಾಗಿದೆ. 5ನೇ ತರಗತಿ ಓಂಪವಾರ ಎಂಬ ಮಗುವನ್ನು ವಾಹನದ ಫುಟ್‌ಬೋರ್ಡ್‌ ಮೇಲೆ ನಿಲ್ಲಿಸಿಕೊಂಡು ಮನೆಗೆ ಹೋಗಿರುವುದು ದೃಢಪಟ್ಟಿದ್ದು, ಇಲ್ಲಿ ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಯಾಗಿದೆ. ಶ್ರೀ ಉಮಾಪತಿ ಪಾಟೀಲ್‌ ಮೆಮೊರಿಯಲ್‌ ಸ್ಕೂಲ್‌ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಲಿಖೀತ ಹೇಳಿಕೆ ನೀಡುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಅಲ್ಲದೆ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಪ್ರಕರಣ ದಾಖಲು: ವಿದ್ಯಾರ್ಥಿಯನ್ನು ವಾಹನದ ಫುಟ್‌ಬೋರ್ಡ್‌ ಮೇಲೆ ನಿಲ್ಲಿಸಿ ವಾಹನ ಚಲಾಯಿಸಿದ್ದಕ್ಕೆ ಚಾಲಕ ರಾಮಯ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ
ಇತರೆ ನಿಯಮ ಉಲ್ಲಂಘಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುವಂತೆ ಪೊಲೀಸ್‌ ಇಲಾಖೆಗೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಆಡಳಿತ ಮಂಡಳಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ್‌, ಶಿಕ್ಷಣ ಸಂಯೋಜಕರು ಯೂನೂಸ್‌, ಮಹೇಶ, ಸಿಆರ್‌ಪಿ ಕೃಷ್ಣಮೂರ್ತಿ, ತಾಲೂಕು ಅಕ್ಷರ ದಾಸೋಹ ಅ ಧಿಕಾರಿ ರಮೇಶ ಇದ್ದರು.

Advertisement

ಶಾಲೆಗೆ ಆಗಮಿಸಿ ಶಿಕ್ಷಣಾ ಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮಕ್ಕಳ ಸುರಕ್ಷತಾ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಇದು ಚಾಲಕರ ನಿರ್ಲಕ್ಷ್ಯ ತನದಿಂದಾಗಿರುವ ಘಟನೆ. ಕ್ರಮ ಕೈಗೊಳ್ಳಲು ಅಧಿ ಕಾರಿಗಳಿಗೆ ಸೂಚಿಸಿದ್ದೇನೆ. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಕ್ರಮ ಕೈಗೊಳ್ಳುವಂತೆಯೂ ಬಿಇಒ ಅವರಿಗೆ ಸೂಚಿಸಿದ್ದೇನೆ.
ರಾಜಾ ವೆಂಕಟಪ್ಪ ನಾಯಕ,
 ಶಾಸಕ, ಮಾನಿ

ಸ್ಕೂಲ್‌ ವ್ಯಾನ್‌ ಫುಟ್‌ಬೋರ್ಡ್‌ ಮೇಲೆ ನಿಂತು ಮಗುವೊಂದು ಮನೆಗೆ ತೆರಳುತಿದ್ದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಉಮಾಪತಿ ಪಾಟೀಲ್‌ ಮೆಮೊರಿಯಲ್‌ ಸ್ಕೂಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘಿಸಿರುವುದು ಸಾಬೀತಾಗಿದೆ. ಈಗಾಗಲೇ ಲಿಖೀತ ಹೇಳಿಕೆ ನೀಡುವಂತೆ ಶಾಲೆ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಸಂಸ್ಥೆ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಪೊಲೀಸ್‌ ಇಲಾಖೆ ಅಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ. ಶಾಲಾ ಮಾನ್ಯತೆ ರದ್ದು ಮಾಡಬಹುದಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ವಿ.ಎಚ್‌. ಗೋನಾಳ,
ಉಪ ನಿರ್ದೇಶಕರು, ಶಿಕ್ಷಣ ಇಲಾಖೆ
ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next