Advertisement

ಕಾಡುವ `ಮನರೂಪ’ದ ಮತ್ತೊಂದು ಪೋಸ್ಟರ್!

10:05 AM Oct 24, 2019 | Naveen |

ತಿಂಗಳುಗಳ ಹಿಂದೆ ಮನರೂಪ ಎಂಬ ಚಿತ್ರ ಮೋಷನ್ ಪೋಸ್ಟರ್‌ನೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಕಿರಣ್ ಹೆಗ್ಡೆ ನಿರ್ದೇಶನದ ಚೊಚ್ಚಲ ಚಿತ್ರವಾದ ಮನರೂಪ, ಕಾಡನ್ನು ಸೀಳಿಕೊಂಡು ಹೋಗುತ್ತಿರೋ ಕಾರೊಂದರ ಹೆಡ್‌ಲೈಟಿನ ಬೆಳಕಲ್ಲಿಯೇ ಕರಡಿ ಗುಡ್ಡವೆಂಬ ನಿಗೂಢ ಕಥೆಯೊಂದರ ಹೊಳಹು ನೀಡಿತ್ತು. ಇದರೊಂದಿಗೇ ಜಾಹೀರಾಗಿದ್ದ ಒಂದಷ್ಟು ವಿಚಾರಗಳೇ ಮನರೂಪದ ಬಗ್ಗೆ ಪ್ರೇಕ್ಷಕರೆಲ್ಲರೂ ಆಕರ್ಷಿತರಾಗುವಂತೆ, ಮೋಹಗೊಳ್ಳುವಂತಾಗಿತ್ತು. ಇದೀಗ ಮನರೂಪದ ಮತ್ತೊಂದು ಪೋಸ್ಟರ್ ಲಾಂಚ್ ಆಗಿದೆ.

Advertisement

ಹೆಡ್ ಲೈಟ್ ಕಟ್ಟಿಕೊಂಡು ಗುಹೆಯೊಂದರಲ್ಲಿ ತೆವಳುತ್ತಿರುವಂಥಾ ಚಿತ್ರವಿರೋ ಈ ಪೋಸ್ಟರ್ ಮನೋರೂಪದ ಮತ್ತೊಂದು ಮಗ್ಗುಲನ್ನೂ ಪ್ರೇಕ್ಷಕರೆದುರು ತೆರೆದಿಟ್ಟಿದೆ. ಈ ಹಿಂದೆ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದ ಚಿತ್ರತಂಡ ಕಥೆಯ ಬಗ್ಗೆ ಒಂದಷ್ಟು ರೋಚಕ ವಿಚಾರಗಳನ್ನು ಹಂಚಿಕೊಂಡಿತ್ತು. ಅದರಲ್ಲಿ ಪ್ರೇಕ್ಷಕರನ್ನು ಪ್ರಧಾನವಾಗಿ ಸೆಳೆದುಕೊಂಡಿದ್ದದ್ದು ಕರಡಿ ಗುಹೆ ಎಂಬ ಉಲ್ಲೇಖ. ಕರಡಿ ಗುಹೆ ಅತ್ಯಂತ ಡೇಂಜರಸ್ ಪ್ರದೇಶ. ಇಂಥಾ ಏರಿಯಾಕ್ಕೆ ಚಾರಣ ಹೊರಡೋ ಸ್ನೇಹಿತರ ಕಥೆ ಇಲ್ಲಿದೆ ಎಂಬ ವಿಚಾರವನ್ನು ಚಿತ್ರತಂಡ ಜಾಹೀರು ಮಾಡಿತ್ತು.

ಇದೀಗ ಬಿಡುಗಡೆಗೊಂಡಿರೋ ಪೋಸ್ಟರ್ ಕರಡಿ ಗುಹೆಯ ನಿಗೂಢಕ್ಕೆ ಹೆಡ್‌ಲೈಟ್ ಬಿಡುವ ಪ್ರಯತ್ನ ಮಾಡಿದೆ. ಬಹುಶಃ ಅದು ಆ ವ್ಯಕ್ತಿ ಕರಡಿ ಗುಹೆಯಲ್ಲಿಯೇ ತೆವಳುತ್ತಿರೋ ಚಿತ್ರಣ ಇದ್ದಿರಬಹುದು. ದಿಲೀಪ್ ಕುಮಾರ್, ಅನೂಷಾ ರಾವ್, ಆರ್ಯನ್, ನಿಶಾ ಬಿ. ಆರ್. ಶಿವ ಪ್ರಸಾದ್, ಅಮೋಘ್ ಸಿದ್ಧಾರ್ಥ್, ಪ್ರಜ್ವಲ್ ಗೌಡ, ಗಜಾ ನೀನಾಸಂ, ರಮಾನಂದ ಐನಕೈ, ಯಶೋದಾ ಹೊಸಕಟ್ಟ, ಪವನ್ ಕಲ್ಮನೆ ಮುಂತಾದವರು ಅಭಿನಯಿಸಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸೂರಿ ಮತ್ತು ಲೋಕಿ ಸಂಕಲನ, ಸರ್ವಣ ಅವರ ಸಂಗೀತ, ಹುಲಿವಾನ್ ನಾಗರಾಜ್ ಅವರ ಸೌಂಡ್, ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

ಚಿತ್ರತಂಡ ಇದುವರೆಗೂ ಬಿಚ್ಚಿಟ್ಟಿರುವ ಅಂಶಗಳನ್ನು ಗಮನಿಸುತ್ತಿದ್ದರೆ ಇದೊಂದು ಅಪರೂಪದ ಕಥಾ ಹಂದರ ಹೊಂದಿರೋ ಸಿನಿಮಾ ಎಂಬ ವಿಚಾರ ಯಾರಿಗಾದರೂ ಅರ್ಥವಾಗುತ್ತದೆ. ತುಂಬಾ ವರ್ಷಗಳ ನಂತರ ದೂರವಿದ್ದ ಗೆಳೆಯರು ಒಂದು ಸಲ ಸಂಧಿಸಿ ಕರಡಿಗುಡ್ಡ ಪ್ರದೇಶದತ್ತ ಚಾರಣ ಹೊರಡೋ ಕಥೆ ಇಲ್ಲಿದೆ. ಇಂಥಾ ಕಥೆಗಳು ಹಾರರ್ ಸನ್ನಿವೇಷಗಳತ್ತಲೇ ಹೆಚ್ಚಾಗಿ ಫೋಕಸ್ ಮಾಡುತ್ತವೆ. ಆದರೆ ಇಲ್ಲಿ ಜನರೇಷನ್ನಿನಿಂದ ಜನರೇಷನ್ನಿಗೆ ಆಗಿರುವಂಥಾ ಭಯಾನಕ ಬದಲಾವಣೆಯ ಮನೋಲೋಕವನ್ನು ತೆರೆದಿಡುವಂತಿದೆಯಂತೆ. ಕರಡಿ ಗುಹೆಯಲ್ಲಿ ಎದುರಾಗೋ ರೋಚಕ ಸನ್ನಿವೇಶಗಳಿಗೆ ಈ ಗೆಳೆಯರ ಗುಂಪು ಪ್ರತಿಕ್ರಿಯೆ ನೀಡೋ ರೀತಿಯಲ್ಲಿಯೇ ಒಂದಿಡೀ ಜನರೇಷನ್ನಿನ ಮನೋಲೋಕ ತೆರೆದುಕೊಳ್ಳಲಿದೆ ಅಂದ ಮೇಲೆ ಈ ಸಿನಿಮಾದತ್ತ ಬೆರಗಾಗದಿರಲು ಸಾಧ್ಯವೇ?

Advertisement

Udayavani is now on Telegram. Click here to join our channel and stay updated with the latest news.

Next