Advertisement

ವಿದ್ಯಾರ್ಥಿಗಳಿಂದ ಬೀಜದುಂಡೆ ತಯಾರಿಕೆ

11:19 AM Jun 12, 2019 | Team Udayavani |

ಕುಕನೂರು: ಪಟ್ಟಣದ ನವೋದಯ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಬೀಜದುಂಡೆ ತಯಾರಿಸಿ ವಿಶೇಷವಾಗಿ ಪರಿಸರ ದಿನ ಆಚರಣೆ ಮಾಡಲಾಯಿತು. ವಿದ್ಯಾರ್ಥಿಗಳೆಲ್ಲರು ಸೇರಿ ಸಾವಿರಕ್ಕೂ ಹೆಚ್ಚಾ ಬೀಜದುಂಡೆ ತಯಾರಿಸಿದರು.

Advertisement

ನವೋದಯ ಶಾಲೆಯ ಮುಖ್ಯಶಿಕ್ಷಕ ಜಾನ್‌ ಪಿ ರಾಯ್‌ ಮಾತನಾಡಿ, ಪರಿಸರದ ಕುರಿತು ಮಕ್ಕಳಿಗೆ ಶಾಲಾ ಹಂತದಿಂದಲ್ಲೆ ಅವರಿಗೆ ಅರಿವು ಬೇಕಾಗಿದೆ. ನಗರೀಕರಣದ ನೆಪದಲ್ಲಿ ಇಂದು ಪರಿಸರ ನಾಶವಾಗುತ್ತಿದೆ. ಅಷ್ಟೇ ಅಲ್ಲದೇ ಮಾನವ ತನ್ನ ಐಷಾರಾಮಿ ಜೀವನಕ್ಕಾಗಿ ಸುಂದರವಾದ ಮರಗಿಡಗಳನ್ನು ಕಡಿದು ಹಾಕಿ ಪೀಠೊಪಕರಣಗಳನ್ನು ಮಾಡಿಸಿಕೊಳ್ಳುತ್ತಿರುವುದು ತೀರಾ ನೋವಿನ ಸಂಗತಿ ಎಂದರು.

ಅರಣ್ಯ ಅಧಿಕಾರಿ ಅಂದಪ್ಪ ಕುರಿ ಮಾತನಾಡಿ, ಪರಿಸರದ ಅರಿವಿನ ಬಗ್ಗೆ ಕೇವಲ ಶಿಕ್ಷಕರು ಹೇಳುವುದಲ್ಲದೆ ಪಾಲಕರು ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಮರ-ಗಿಡಗಳಿಂದಾಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಬೇಕು. ಇಂದು ನಾವು ಎದುರಿಸುತ್ತಿರುವ ಭೀಕರವಾದ ತಾಪಮಾನ, ಮಳೆ ಕೊರತೆ ಇದಕ್ಕೆ ಮುಖ್ಯ ಕಾರಣ ಅರಣ್ಯ ನಾಶ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಸಸಿ ನೆಟ್ಟು ಪೋಷಿಸಬೇಕು. ರೈತರು ಹೊಲದ ಬದುವಿನಲ್ಲಿ ಹೆಚ್ಚೆಚ್ಚಾ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.

ಸಾರ್ವಜನಿಕರು ಕಟ್ಟಿಗೆಯ ಆಸೆಗೆ ಇಂದು ತಮ್ಮ ತಾತ್ಕಾಲಿಕ ಸಂತೋಷಕ್ಕಾಗಿ ಕಾಡು ಕಡೆಯದೆ ಹಾಗೆ ಬಿಟ್ಟರೆ ಸಾಕು. ಇಂತಹ ಬರಗಾಲ ಅಲ್ಪ ಪ್ರಮಾಣವಾದರೂ ಕಡಿಮೆಯಾಗಬಹುದು. ಅರಣ್ಯ ನಾಶ ಹೀಗೆ ಮುಂದುವರಿದರೆ ಮುಂದೊಂದು ದಿನ ಜಲಕ್ರಾಂತಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದರು.ಆರ್‌ಎಫ್‌ಒ ಹೊನ್ನುಸಾಬ್‌, ಅರಣ್ಯ ಇಲಾಖೆ ಸಿಬ್ಬಂದಿಗಳಾದ ನಾಗಭೂಷನ್‌, ಶರೀಫ್‌, ಮಂಜುನಾಥ, ರಾಜೇಸಾಬ್‌, ವಿದ್ಯಾಲಯದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next