Advertisement
“ಮಲ ಹೊರುವ ಪದ್ಧತಿ ಮತ್ತು ಒಣ ಶೌಚಾಲಯಗಳ ನಿರ್ಮೂಲನಾ ಕಾಯ್ದೆಯನ್ನು 1972 ರಲ್ಲಿ ಇದೇ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಕರ್ನಾಟಕ ಮೂಲದ ಬೇಜ್ವಾಡ್ ವಿಲ್ಸನ್‌ನಅವರ ಸತತ32ವರ್ಷದಹೋರಾಟದ ಪರಿಣಾಮವಾಗಿ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು 1993ರಲ್ಲಿ ದೇಶದ ಸಂಸತ್ತು ಅಂಗೀಕರಿಸಿತು.
Related Articles
Advertisement
ಸಮೀಕ್ಷೆಯೇ ನಡೆದಿಲ್ಲ: 2011ರ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ ಮಾಹಿತಿ ಪ್ರಕಾರ ರಾಜ್ಯದಲ್ಲಿ 15,375 ಮ್ಯಾನ್ಯುವಲ್ ಸ್ಕ್ಯಾವೆಂಜರ್ ಇದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 300 ಮಂದಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಇದ್ದಾರೆ ಎಂದು ಹೇಳಲಾಗಿದೆ. ಆದರೆ, ಬೆಂಗಳೂರೊಂದರಲ್ಲೇ 20 ಸಾವಿರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿದ್ದಾರೆ ಎಂದು ಹೇಳಲಾಗಿದೆ. ಈವರೆಗೆ ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸಲು ನಿಖರವಾದ ಸಮೀಕ್ಷೆಯೇ ನಡೆದಿಲ್ಲ. 2018ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನಡೆಸಿದೆ ಸಮೀಕ್ಷೆ 1,700 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸ ಲಾಗಿತ್ತು. ಈ ರೀತಿಯ ಗೊಂದಲಗಳಿಂದಾಗಿ ಕಾಯ್ದೆ ಜಾರಿ, ಪರಿಹಾರ ಮತ್ತಿತರರ ವಿಷಯಗಳಿಗೆ ಸ್ಪಷ್ಟ ರೂಪ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
88 ಸಾವು; ರಾಜಧಾನಿಯಲ್ಲೇ ಹೆಚ್ಚು : ಮ್ಯಾನ್‌ಹೋಲ್, ಶೌಚಗುಂಡಿಗಳಿಗೆ ಇಳಿದು ವಿಷಯುಕ್ತ ಅನಿಲ ಸೇವಿಸಿ ಅಮಾಯಕಕಾರ್ಮಿಕರು ಅಮಾನವೀಯವಾಗಿ ಸಾವನ್ನಪ್ಪಿದ ಅನೇಕ ಘಟನೆಗಳು ನಡೆದಿದೆ.1993ರಿಂದ2020ರ ಜೂನ್‌ವರೆಗೆ ರಾಜ್ಯದಲ್ಲಿ ಇಂತಹ50ಕ್ಕೂ ಹೆಚ್ಚು ಘಟನೆಗಳು ನಡೆದು88 ರಿಂದ90 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಬೆಂಗಳೂರಲ್ಲೇ60ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಉಳಿದಂತೆ ಮೈಸೂರು, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಚಿಕ್ಕಬಳ್ಳಾಪುರ, ಉತ್ತರಕನ್ನಡ, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತಿತರರ ಜಿಲ್ಲೆಗಳಲ್ಲಿ ಸಾವುಗಳು ಸಂಭವಿಸಿದೆ.
“ಈಗಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ. ಮಲ ಹೊರುವ ಪದ್ಧತಿ ನಿಷೇಧಿಸಲ್ಪಟ್ಟಿದ್ದರೂ ಬೇರೆ-ಬೇರೆ ರೂಪಗಳಲ್ಲಿ ಅದು ಇನ್ನು ಜಾರಿಯಲ್ಲಿದೆ. ಮಲ ಹೊರುವ ಪದ್ಧತಿ ನಿಷೇಧಕಾಯ್ದೆಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವನಿಟ್ಟಿನಲ್ಲಿ ಎಲ್ಲಾ ರೀತಿಯಕ್ರಮಗಳನ್ನು ಕೈಗೊಳ್ಳಲಾಗುವುದು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ನಡೆಸುವ ಬಗ್ಗೆಯೂ ಮುಂದಿನ ದಿನಗಳಲ್ಲಿಕ್ರಮ ಕೈಗೊಳ್ಳಲಾಗುವುದು”.– ಎಂ. ಶಿವಣ್ಣ, ಅಧ್ಯಕ್ಷರು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ.
-ರಫೀಕ್ ಅಹ್ಮದ್