Advertisement
ಸರಬ್ಜೋತ್ ಸಿಂಗ್ (Sarabjot Singh) ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು ಸೌತ್ ಕೊರಿಯಾದ ಲೀ ವಾನ್ ಹೊ ಮತ್ತು ಯೆ-ಜಿನ್ ವಿರುದ್ಧ ಕಂಚಿಗೆ ಗುರಿಯಿಟ್ಟಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ಬರೆದಿದ್ದಾರೆ.
Related Articles
ಸೋಮವಾರದ (ಜು.29ರಂದು) ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್- ಸರಬ್ಜೋತ್ ಸಿಂಗ್ ಒಟ್ಟು 580 ಅಂಕ ಸಂಪಾದಿಸಿ ಕಂಚಿನ ಸ್ಪರ್ಧೆಗೆ ಅಣಿಯಾಗಿದ್ದರು. ಮನು ಭಾಕರ್ ಮೊದಲೆರಡು ಸುತ್ತಿನಲ್ಲಿ ತಲಾ 98 ಅಂಕ ಗಳಿಸಿ ಭರವಸೆ ಮೂಡಿಸಿದರು. ಆದರೆ 3ನೇ ಸುತ್ತಿನಲ್ಲಿ ಹಿನ್ನಡೆಯಾಯಿತು. ಇಲ್ಲಿ ಲಭಿಸಿದ್ದು 95 ಅಂಕ. ಸರಬ್ಜೊತ್ ಸಿಂಗ್ ಕ್ರಮವಾಗಿ 95, 97 ಹಾಗೂ 97 ಅಂಕ ಗಳಿಸಿದರು. ಇವರು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರಿ ತಪ್ಪಿದ್ದರು.
Advertisement