Advertisement

ಕ್ರೀಡಾ ಸಚಿವರೊಂದಿಗೆ ಮನು ಬಾಕರ್‌ ಜಟಾಪಟಿ

07:43 PM Jan 06, 2019 | |

ರೋಹrಕ್‌: ತನ್ನ ಸಾಧನೆಗಾಗಿ ಸರಕಾರದಿಂದ ಬರಬೇಕಿರುವ ನಗದು ಪುರಸ್ಕಾರದ ಮೊತ್ತವನ್ನು ಇಳಿಸಿರುವ ಬಗ್ಗೆ ಶೂಟರ್‌ ಮನು ಬಾಕರ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದನ್ನು ಹರ್ಯಾಣದ ಕ್ರೀಡಾ ಸಚಿವ ಅನಿಲ್‌ ಖಂಡಿಸಿದ್ದಾರೆ. ಇದಕ್ಕೆ ಮನು ಬಾಕರ್‌ ಕೂಡ ಪ್ರತ್ಯುತ್ತರ ನೀಡಿದ್ದು, ಈ ಘಟನೆ ಇವರಿಬ್ಬರ ಜಟಾಪಟಿಗೆ ಕಾರಣವಾಗಿದೆ.

Advertisement

ಅಕ್ಟೋಬರ್‌ನಲ್ಲಿ ನಡೆದ ಯೂತ್‌ ಒಲಿಂಪಿಕ್ಸ್‌ ಮುಕ್ತಾಯವಾಗಿ 3 ತಿಂಗಳುಗಳೇ ಕಳೆದಿದ್ದರೂ ಬಹುಮಾನ ನೀಡದ ಸರಕಾರದ ವಿರುದ್ಧ ಟ್ವೀಟ್‌ ಮಾಡಿದ್ದ ಮನು, “ಮೊದಲು 2 ಕೋಟಿ ರೂ. ನಗದು ಪುರಸ್ಕಾರ ನೀಡಲಾಗುವುದು ಎಂದಿದ್ದ Óರ‌ಕಾರ ಈಗ ಒಂದು ಕೋಟಿ ರೂ. ನೀಡುತ್ತೇವೆ ಎಂದು ಹೇಳುತ್ತಿದೆಯಂತೆ. ಹಾಗಾದರೆ ಮೊದಲು ನೀಡಿದ್ದ ಆಶ್ವಾಸನೆ ಕೇವಲ ತೋರ್ಪಡಿಕೆಗೆ ಮಾತ್ರವೇ? ಅದು ಕೇವಲ ತಮಾಷೆಯಾಗಿತ್ತೇ?’ ಎಂದು ಮನು ಪ್ರಶ್ನಿಸಿದ್ದರು.

ಇದರಿಂದ ಆಕ್ರೋಶಗೊಂಡಿರುವ ಕ್ರೀಡಾ ಸಚಿವ ಅನಿಲ್‌ ಅವರೂ ಟ್ವೀಟ್‌ ಮಾಡಿ, “ಯಾವುದೇ ಮಾಹಿತಿಯನ್ನು ಖಚಿತಪಡಿಸಿಕೊಳ್ಳದೇ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಏಕಾಏಕಿಯಾಗಿ ಸರಕಾರದ ವಿರುದ್ಧ ಹರಿಹಾಯುವುದು ಸಲ್ಲದು. ಮನು ಅವರಿಗೆ ಸಿಗಬೇಕಾದ 2 ಕೋಟಿ ರೂ. ಸಿಕ್ಕೇ ಸಿಗುತ್ತದೆ’ ಎಂದಿದ್ದಾರೆ. ಆದರೆ, ಪುರಸ್ಕಾರ ನೀಡಿಕೆಯ ಕಾಲಮಿತಿಯನ್ನು ಅವರು ಉಲ್ಲೇಖೀಸಿಲ್ಲ.

ಸಚಿವರ ಈ ಕಿಡಿನುಡಿಗೆ ಉತ್ತರಿಸಿರುವ ಮನು, “ಕ್ರೀಡಾಳುಗಳಿಗೆ ಸಿಗುವ ನಗದು ಪುರಸ್ಕಾರದಿಂದ ಅವರು ಮುಂದಿನ ತರಬೇತಿ ಪಡೆಯಲು ಅನುಕೂಲವಾಗುತ್ತದೆ. ನನ್ನ ವಿಚಾರದಲ್ಲಿ, ಸರಕಾರ ಮೊದಲಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅನಂತರ 2 ಕೋಟಿ ರೂ. ಎಂದು ಹೇಳಿ ಸುಮ್ಮನಾಗಿತ್ತು. ಆದರೆ ಇದನ್ನು ಒಂದು ಕೋಟಿ ರೂ.ಗೆ ಇಳಿಸುತ್ತಾರೆಂಬ ಊಹಾಪೋಹಗಳು ಹರಿದಾಡಿದ್ದವು. ಕ್ರೀಡಾ ಸಚಿವರೇ 2 ಕೋಟಿ ರೂ.  ನೀಡಲಾಗುತ್ತದೆ ಎಂದು ಟ್ವೀಟ್‌ ಮಾಡಿರುವುದರಿಂದ ನನಗೆ ಬಹುಮಾನ ಮೊತ್ತದ ಬಗ್ಗೆ ಖಾತ್ರಿಯಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next