Advertisement

ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ ಶಿಪ್‌ ಪದಕ ವಂಚಿತ ಮನು ಭಾಕರ್‌

06:40 AM Nov 10, 2018 | Team Udayavani |

ಕುವೈಟ್‌: ಯೂತ್‌ ಒಲಿಂಪಿಕ್‌ ಚಾಂಪಿಯನ್‌ ಮನು ಭಾಕರ್‌ “ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ’ ಸೋತು ಪದಕ ವಂಚಿತರಾಗಿದ್ದಾರೆ.

Advertisement

ವನಿತಾ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 196.4 ಅಂಕ ಪಡೆದ ಮನು 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದೇ ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಶೂಟರ್‌ ಅಭಿಧನ್ಯಾ ಪಾಟೀಲ್‌ 7ನೇ ಸ್ಥಾನ ಪಡೆದರು. ಈ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಮನು 579 ಅಂಕ ಪಡೆದು ಅಗ್ರಸ್ಥಾನಿಯಾಗಿದ್ದರು. ಅಭಿಧನ್ಯಾ 563 ಅಂಕಗಳೊಂದಿಗೆ 4ನೇ ಸ್ಥಾನದೊಂದಿಗೆ ಫೈನಲ್‌ ತಲುಪಿದ್ದರು. 

ನೇಹಾ 552 ಅಂಕ ಸಂಪಾದಿಸಿ 12 ನೇ ಸ್ಥಾನಕ್ಕಿಳಿದು ಫೈನಲ್‌ ಪ್ರವೇಶಿಸುವಲ್ಲಿ ವಿಫ‌ಲರಾಗಿದ್ದರು.ಇದಕ್ಕೂ ಮುನ್ನ ನಡೆದ ವನಿತೆಯರ 10 ಮೀ. ಪಿಸ್ತೂಲ್‌ ವಿಭಾಗದ ತಂಡ ಸ್ಪರ್ಧೆಯಲ್ಲಿ ಮನು ಭಾಕರ್‌, ಅಭಿಧನ್ಯಾ ಪಾಟೀಲ್‌ ಹಾಗೂ ನೇಹಾ ಒಟ್ಟು 1,694 ಅಂಕ ಪಡೆದು ಬೆಳ್ಳಿ ಪದಕ ಸಂಪಾದಿಸಿದ್ದರು. ಚೀನ ತಂಡ 1,704 ಅಂಕ ಗಳಿಸಿ ಚಿನ್ನದ ಪದಕ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next