Advertisement
ನಾನಾ ಕ್ರೀಡೆಯಲ್ಲಿ ಮನುಮನು ಅವರ ತಂದೆ ಒಬ್ಬ ಎಂಜಿನಿಯರ್. ಮಗಳನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಾಡಬೇಕು ಎಂದು ಅವರು ಪಣ ತೊಟ್ಟಿದ್ದರು. ಮಗಳಿಗೆ ಇಷ್ಟ ಇರುವ ಎಲ್ಲಾ ಕ್ರೀಡೆಯಲ್ಲೂ ತೊಡಗಲು ಪ್ರೇರೇಪಿಸಿದರು. ಪರಿಣಾಮ ಬಾಕ್ಸಿಂಗ್, ಕರಾಟೆ, ಟೆನಿಸ್, ಸ್ಕೇಟಿಂಗ್… ಹೀಗೆ ನಾನಾ ಕ್ರೀಡೆಯಲ್ಲಿ ಮನು ತೊಡಗಿದ್ದರು. ಸ್ಕೇಟಿಂಗ್, ಬಾಕ್ಸಿಂಗ್, ಕರಾಟೆಯಲ್ಲಿ ಈಕೆ ರಾಷ್ಟ್ರೀಯ ಪದಕ ಗೆದ್ದಿದ್ದಾರೆ.
9ನೇ ತರಗತಿಯಲ್ಲಿದ್ದಾಗ ಶೂಟರ್ ಆಗಬೇಕೆಂದು ಮನು ಕನಸು ಕಂಡರು. ತನ್ನ ಬಯಕೆಯನ್ನು ತಂದೆಯಲ್ಲಿ ಹೇಳಿಕೊಂಡರು. ಶೂಟಿಂಗ್ ಅಕಾಡೆಮಿಗೆ ಸೇರಿ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಇತರೆ ಕ್ರೀಡೆಗಳತ್ತ ದೃಷ್ಟಿ ಹರಿಸುವುದನ್ನು ಕಡಿಮೆ ಮಾಡಿದ್ದರು. ಬಹುಪಾಲು ಸಮಯವನ್ನು ಶೂಟಿಂಗ್ ಅಕಾಡೆಮಿಯಲ್ಲಿಯೇ ಕಳೆಯುತ್ತಿದ್ದರು. ಶೂಟಿಂಗ್ ಮೇಲಿರುವ ಆಕೆಯ ಪ್ರೀತಿಗೆ, ಶ್ರದ್ಧೆಯಿಂದ ನಡೆಸಿದ ಅಭ್ಯಾಸಕ್ಕೆ 2017ರಲ್ಲಿಯೇ ಫಲಸಿಕ್ಕಿತು. ಅಂದರೆ, ಅಭ್ಯಾಸ ಅರಂಭಿಸಿದ ಒಂದೇ ವರ್ಷದಲ್ಲಿ ರಾಷ್ಟ್ರೀಯ ಪದಕ ಲಭಿಸಿತು. 2017ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಮನು ಚಿನ್ನದ ಪದಕ ಗೆದ್ದರು. ಹೀನಾ ಸಿಧು ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಹೀಗೆ, ಅಲ್ಪ ಅವಧಿಯಲ್ಲಿ ಗುರಿ ಸಾಧಿಸುತ್ತಾ ಸಾಗಿದ ಮನು 2017ರಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು.
Related Articles
11ನೇ ತರಗತಿಯ ವಿದ್ಯಾರ್ಥಿಯಾಗಿರುವ 16 ವರ್ಷದ ಮನು, ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಟೂರ್ನಿಯ 10 ಮೀ. ಏರ್ ಪಿಸ್ತೂಲ್‌ನಲ್ಲಿ ನಿಖರ ಗುರಿ ಇಡುವ ಮೂಲಕ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿಯೂ ಚಿನ್ನದ ಬೇಟೆಯಾಡಿ ಇತಿಹಾಸ ನಿರ್ಮಿಸಿದರು.
Advertisement