ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್‌ನ ಮಸಾಜ್ ಪಾರ್ಲರ್‌ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ, ಮೂವರು ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ.
ಪಾರ್ಲರ್‌ನ ವ್ಯವಸ್ಥಾಪಕಿ ಶೋಭಾ (25), ಸಹಾಯಕ ವ್ಯವಸ್ಥಾಪಕಿ ಶೆಹನಾಜ್ ಹಾಗೂ ಕೆಲಸಗಾರ ಶರೀಫ್ಸಾಬ್ ನಾದಾರ್ ಬಂಧಿತರು. ಆರೋಪಿಗಳಿಂದ 50,890 ರೂ. ನಗದು ಹಾಗೂ ಸ್ವೆ„ಪಿಂಗ್ ಉಪಕರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಮಿತ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಅಧಿಕಾರಿ ತಿಳಿಸಿದ್ದಾರೆ.
ಪಾರ್ಲರ್ ಮಾಲೀಕ ಗುಜರಾತ್ ಮೂಲದ ಸಿನ್ಹಾ ಎಂಬುವನು ಎಂದು ಗೊತ್ತಾಗಿದೆ. ಸ್ಯಾಂಡ್ ವಿಚ್ ಎಂಬಾತನೊಂದಿಗೆ ಸೇರಿ ದೇಶಾದ್ಯಂತ ಇಂಥ ಹಲವು ಪಾರ್ಲರ್‌ಗಳನ್ನು ನಡೆಸುತ್ತಿದ್ದಾನೆ. ದಾಳಿ ವೇಳೆ ಆತ ಪಾರ್ಲರ್‌ನಲ್ಲಿರಲಿಲ್ಲ ಎಂದು ಅಧಿಕಾರಿ ತಿಳಿಸಿದರು.
ಮಂತ್ರಿಮಾಲ್‌ನ ಎರಡನೇ ಮಹಡಿಯಲ್ಲಿ ಆರೋಪಿಗಳು “ಸ್ಪಾ ನೇಷನ್’ ಎಂಬ ಹೆಸರಿನಲ್ಲಿ ಪಾರ್ಲರ್ ನಡೆಸಲು ಅನುಮತಿ ಪಡೆದಿದ್ದರು. ಕಾನೂನು ಬಾಹಿರವಾಗಿ “ಬಾಡಿ ಟು ಬಾಡಿ ಮಸಾಜ್’ ಹ್ಯಾಪಿ ಎಂಡಿಂಗ್’ ಮತ್ತು ಹ್ಯಾಂಡ್‌ಜಾಬ್ ಹೆಸರಿನಲ್ಲಿ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿದರು.
ಪಾರ್ಲರ್‌ಗೆ ವಿದ್ಯಾರ್ಥಿಗಳು ಹಾಗೂ ಹಣವಂತ ಸಾಫ್ಟ್ವೇರ್ ಎಂಜಿನಿಯರ್‌ಗಳು ಹೆಚ್ಚಾಗಿ ಬರುತ್ತಿದ್ದರು. ಮಸಾಜ್‌ವೊಂದಕ್ಕೆ ಆರೋಪಿಗಳು 10 ರಿಂದ 20 ಸಾವಿರ ರೂ.ನಿಗದಿ ಮಾಡಿದ್ದರು. ಆರೋಪಿಗಳು ಕೆಲಸ ಹಾಗೂ ಪ್ರವಾಸಿ ವೀಸಾದಡಿ ನಗರಕ್ಕೆ ಬರುತ್ತಿದ್ದ ರಷ್ಯಾ, ಥೈಲ್ಯಾಂಡ್, ಉಕ್ರೇನ್ ಸೇರಿದಂತೆ ಹಲವು ದೇಶಗಳ ಯುವತಿಯರನ್ನು ಸಂಪರ್ಕಿಸುತ್ತಿದ್ದರು.
ಆರೋಪಿಗಳು ಹಣದ ಆಮಿಷವೊಡ್ಡಿ ಅವರನ್ನು ಪಾರ್ಲರ್‌ಗೆ ಕರೆ ತಂದು ವೇಶ್ಯಾವಾ ಟಿಕೆಗೆ ದೂಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ವೇಳೆ ಥೈಲ್ಯಾಂಡ್ ಮೂಲದ 2 ಯುವತಿಯರು ಹಾಗೂ ರಷ್ಯಾದ ದೇಶದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ. ಮಸಾಜ್ ಪಾರ್ಲರ್‌ಗೆ ಕಾಯಂ ಗ್ರಾಹಕರಿದ್ದರು.
ಅವರೆಲ್ಲ ಸದಸ್ಯತ್ವ ಕಾರ್ಡ್ ಸಹ ಮಾಡಿಸಿದ್ದರು. ಜತೆಗೆ ಸ್ವೆ„ಪಿಂಗ್ ಉಪಕರಣದ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು. ದಾಳಿ ವೇಳೆ ಎರಡು ಸದಸ್ಯತ್ವ ಕಾರ್ಡ್ ಹಾಗೂ ಸ್ವೆ„ಪಿಂಗ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿ ತಿಳಿಸಿದ್ದಾರೆ.