ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸ ಪ್ರಯುಕ್ತ ಬುಧವಾರ ಸಂಜೆ ಮಂಚಾಲಮ್ಮ ದೇವಸ್ಥಾನ ಪಕ್ಕದ ನದಿಗೆ ತೆರಳುವ ದಾರಿಯಲ್ಲಿ ಕಾರಿಡಾರ್ (ತುಂಗಾ ಮಾರ್ಗ), ಹರಿಕತಾಮೃತ ಮ್ಯೂಸಿಯಂ ಹಾಗೂ ರಾಯರ ಭಾವಚಿತ್ರದ ಅಂಚೆ ಲಕೋಟೆಯನ್ನು ಶ್ರೀಮಠದ ಸುಬುಧೇಂದ್ರ ತೀರ್ಥರು ಬಿಡುಗಡೆ ಮಾಡಿದರು.
ಶ್ರೀಮಠದ ಯೋಗೀಂದ್ರ ತೀರ್ಥರ ಸಭಾಮಂಟಪದಲ್ಲಿ ಕಾರ್ಯಕ್ರಮ ನಡೆದವು. ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಧಾರ್ಮಿಕವಾಗಿ ನದಿಗಳು ಬಹಳ ಅತ್ಯಂತ ಪವಿತ್ರವಾಗಿದ್ದು, ಅವುಗಳ ಮಹತ್ವ ಸಾರುವ ಕೆಲಸಕ್ಕೆ ಶ್ರೀಮಠ ಮುಂದಾಗಿದೆ. ತುಂಗಾ ಮಾರ್ಗ ಉದ್ಘಾಟಿಸುವ ಮೂಲಕ ನದಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಬಾಕಿ ಇರುವ ಕಾಮಗಾರಿ ಆರಾಧನೆ ನಂತರ ಕೈಗೊಳ್ಳಲಾಗುವುದು. ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪುಣ್ಯ ಸ್ನಾನದ ಮಹತ್ವವನ್ನು ಭಕ್ತರಿಗೆ ಸಾರುವ ಉದ್ದೇಶ ತುಂಗಾ ನದಿ ಕಾರಿಡಾರ್ ಹೊಂದಲಾಗಿದೆ ಎಂದರು.
ದಾಸ ಸಾಹಿತ್ಯದ ಜಗನ್ನಾಥ ದಾಸರು ರಚಿಸಿರುವ ಹರಿಕಥಾಮೃತ ಸಾರ ಬಹಳ ಮಹತ್ವದಾಗಿದ್ದು, ಅವರ ಜೀವನ, ಕೃತಿಗಳ ಪರಿಚಯಿಸುವ ಈ ಸಂಗ್ರಹಾಲಯ ಮಾರ್ಗದರ್ಶಕವಾಗಿದ್ದು, ಇಲ್ಲಿ ಹರಿಕಥಾಮೃತಸಾರದ 32 ಸುಳಾ ಗಳ ಸಂಪೂರ್ಣವಾಗಿ ಚಿತ್ರದೊಂದಿಗೆ ಅದ್ಭುತವಾಗಿ ಮೂಡಿಬಂದಿದೆ. ಇದರ ಜತೆಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಸಾರುವ ಸಂಗ್ರಹಾಲಯ (ಮ್ಯೂಸಿಯಂ) ಕಾರ್ಯ ಪ್ರಗತಿಯಲ್ಲಿದೆ. ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ಕಥಾ ಥಿಮ್ ಪಾರ್ಕ್ ಮುಂದಿನ ಆರು ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದರು.
ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಸಹಯೋಗದಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ನೆಲೆಸಿರುವ ರಾಯರ ಭಕ್ತರಿಗೆ ಅಂಚೆ ಲಕೋಟೆ ಮೂಲಕ ರಾಯರು ಮನೆಗೆ ಬರುವರು ಎಂದರು.
ಕರ್ನಾಟಕ ಅಂಚೆ ಇಲಾಖೆ ಮುಖ್ಯಸ್ಥ ರಾಜೇಂದ್ರ ಕುಮಾರ್, ಮೈಸೂರಿನ ಡಿ.ಪಿ ಮಧುಸೂದನ್, ವೆಂಕಟ ನರಸಿಂಹ ಆಚಾರ್ಯ ರಾಜಪುರೋಹಿತ್, ಆಂಧ್ರ ಪ್ರದೇಶದ ಧಾರ್ಮಿಕ ಪರಿಷತ್ ಸದಸ್ಯ ಎಸ್.ಗೋವಿಂದ ಹರಿ, ಲಕ್ಷಿ$¾à ಮಾಧವಿ, ರಾಜೇಶ, ಶಂಕರ್, ದಾಸಸಾಹಿತ್ಯ ಪ್ರಾಜೆಕ್ಟ್ ನಿರ್ದೇಶಕ ಅಪ್ಪಣ್ಣ ಆಚಾರ್ಯ, ಸೇರಿ ಇತರರು ಪಾಲ್ಗೊಂಡಿದ್ದರು.