Advertisement

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

06:53 PM Sep 28, 2020 | sudhir |

ರಾಯಚೂರು: ಬಾಲಕನೋರ್ವ ತನ್ನ ಬಯಕೆಯನ್ನು ತೋಡಿಕೊಂಡಿದ್ದಕ್ಕೆ ಇಡೀ ವಿದ್ಯಾಪೀಠದ ಮಕ್ಕಳಿಗೆ ಪಾನಿಪೂರಿ ತಿನ್ನುವ ಅವಕಾಶವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾಡಿಕೊಟ್ಟ ಪ್ರಸಂಗ ನಡೆದಿದೆ.

Advertisement

ಶ್ರೀ ಮಠದ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಊಟದ ವೇಳೆ ಬಾಲಕನೋರ್ವ ಶ್ರೀಗಳೆದುರು ನೇರವಾಗಿ ತನ್ನ ಬಯಕೆ ವ್ಯಕ್ತಪಡಿಸಿದ್ದಾನೆ. ಪಾನಿಪೂರಿ ಕೊಡಿಸಿ ಎಂದು ಕೇಳಿಕೊಂಡಿದ್ದಾನೆ. ಅದನ್ನು ಕೇಳಿದ ಗುರುಗಳು ಮುಗುಳ್ನಕ್ಕು ಅಲ್ಲಿದ್ದ ಭಟ್ಟರನ್ನು ಕರೆದು ಮಕ್ಕಳಿಗೆ ಪಾನಿಪೂರಿ ಮಾಡಿಕೊಡಿ ಎಂದು ತಿಳಿಸಿದ್ದಾರೆ. ಇದರಿಂದ ವಿದ್ಯಾಪೀಠದ ಎಲ್ಲ ಮಕ್ಕಳಿಗೂ ಪಾನಿಪೂರಿ ತಿನ್ನುವ ಅವಕಾಶ ಸಿಕ್ಕಂತಾಗಿದೆ.

ವಿದ್ಯಾಪೀಠದ ಭೋಜನಶಾಲೆಯಲ್ಲೇ ಪಾನಿಪೂರಿ ತಯಾರಿಸಿ ಮಕ್ಕಳಿಗೆ ತಿನಿಸಲಾಗಿದೆ. ಬಾಲಕ ಶ್ರೀಗಳಿಗೆ ಪಾನಿಪೂರಿ ಕೇಳುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ :ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೂ ಕೋವಿಡ್ ಸೋಂಕು ದೃಢ!

Advertisement

Udayavani is now on Telegram. Click here to join our channel and stay updated with the latest news.

Next