Advertisement

ಮಂತ್ರಾಲಯ ಶ್ರೀಗಳ ಶೋಭಾಯಾತ್ರೆ

03:05 PM Dec 19, 2017 | Team Udayavani |

ಗಲಗಲಿ: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಮಠಾಧೀಶರಾದ ಸುಬುಧೇಂದ್ರ ಶ್ರೀಪಾದಂಗಳವರು ಗಾಲವಕ್ಷೇತ್ರ
ಗಲಗಲಿಗೆ ಪುರಪ್ರವೇಶ ಮಾಡಿದರು. ಗ್ರಾಮಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಶ್ರೀಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು
ಸ್ಥಳೀಯ ಭಕ್ತ ಸಮೂಹ ಶೋಭಾಯಾತ್ರೆ ನಡೆಸಿತು.

Advertisement

ಸ್ಥಳೀಯ ಸಾವರಕರ್‌ ಸರ್ಕಲ್‌ ದಿಂದ ಪ್ರಸನ್ನ ರಾಘವೇಂದ್ರ ಸ್ವಾಮಿಮಠದವರೆಗೆ ಭವ್ಯ ಶೋಭಾಯತ್ರೆ ನಡೆಯಿತು.
ಶ್ರೀಪಾದಂಗಳವರನ್ನು ಅಲಂಕೃತ ಸಾರೋಟ್‌ದಲ್ಲಿ ಕುಳ್ಳಿರಿಸಿ ಸಕಲವಾದ್ಯ ವೃಂದ, ಕುಂಭಹೊತ್ತ ಸುಮಂಗಲೆಯರು, ಮಹಿಳಾ
ಮಂಡಳಿಗಳ ಭಜನೆ, ಪಂಡಿತರ ಮಂತ್ರ ಘೋಷದೊಂದಿಗೆ, ಕರಡಿಮಜಲು, ಮುಂತಾದ ವಾದ್ಯ ವೃಂದದ ಜೊತೆಗೆ ಸಾವಿರಾರು ಭಕ್ತರು ಸಾವರ್‌ಕರ್‌ ಸರ್ಕಲ್‌ನಿಂದ ಬಸವೇಶ್ವರ ಬ್ಯಾಂಕ್‌, ಹಣಮಂತದೇವರ ದೇವಸ್ಥಾನ, ಅಗಸಿದ್ವಾರ, ಗಾಲವೇಶ್ವರದೇವಸ್ಥಾನ,
ಮೇನ್‌ಬಝಾರ, ತೇರಿನಮನೆ ಮಾರ್ಗವಾಗಿ ರಾಘವೇಂದ್ರಸ್ವಾಮಿಗಳ ಮಠದವರೆಗೆ ವೈಭವದ ಶೋಭಾಯಾತ್ರೆಯ ಮುಖಾಂತರ
ಬರಮಾಡಿಕೊಳ್ಳಲಾಯಿತು.

ಆನಂದತೀರ್ಥ ಕಾಖಂಡಕಿ, ಪಂಡಿತಪ್ಪ ಅಮಲಝರಿ, ವೆಂಕಣ್ಣ ಮಂಟೂರ, ಹಣಮಂತ ಠಾಣೆ, ಡಾ| ಪಿ. ಎಂ. ಜಂಬಗಿ, ರಾಮಾಚಾರ್ಯ ಕಟ್ಟಿ, ಶಿವಾನಂದ ಗಾಣಿಗೇರ, ಮೋಹನನಾಯ್ಕ ಹಬ್ಬು ಅರುಣಕೊಪ್ಪ, ಹಣಮಂತ ದೇಶಪಾಂಡೆ, ಪಾರ್ಥ ಹಬ್ಬು, ಪ್ರವೀಣ ಕುಲಕರ್ಣಿ, ಶ್ರೀನಿವಾಸಾಚಾರ್ಯ ಆಶ್ರಿತ, ಸುರೇಶ ಅಂಬೇಕರ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next