Advertisement

Rajasthan: ರಾಜಸ್ಥಾನದಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ

11:21 PM Jul 06, 2023 | Team Udayavani |

ಹೊಸದಿಲ್ಲಿ: ಸಂಪೂರ್ಣ ಒಗ್ಗಟ್ಟಿನಿಂದ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ಎದುರಿಸಿದರೆ ಗೆಲುವು ಸಾಧ್ಯವಿದೆ ಎಂದು ಕಾಂಗ್ರೆಸ್‌ ಹೇಳಿದೆ. ಇದೇ ವೇಳೆ ಶಿಸ್ತು ಕಾಪಾಡುವಂತೆ ಹಾಗೂ ಪಕ್ಷದ ವೇದಿಕೆ ಬಿಟ್ಟು ಹೊರಗೆ ಪಕ್ಷದ ವಿಚಾರಗಳನ್ನು ಮಾತನಾಡದಂತೆ ನಾಯಕರಿಗೆ ಕಿವಿಮಾತು ಹೇಳಿದೆ.

Advertisement

ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆಯೇ ರಾಜ್ಯದಲ್ಲಿನ ಚುನಾವಣ ಸಿದ್ಧತೆ ಕುರಿತು ಗುರುವಾರ ಸಭೆ ನಡೆದಿದೆ. ಸಭೆ ಬಳಿಕ ಪೈಲಟ್‌ ಅವರೂ ಮಾತನಾಡಿದ್ದು, ಯುವಜನರ ಕ್ಷೇಮಾಭಿವೃದ್ಧಿ, ಭ್ರಷ್ಟಾಚಾರ ಸೇರಿದಂತೆ ನಾನು ಎತ್ತಿರುವ ಅಂಶಗಳಿಗೆ ಸಂಬಂಧಿಸಿ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದಿದ್ದಾರೆ.

ಸಭೆಯ ಅನಂತರ ಪತ್ರಕರ್ತರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, “ಗೆಲುವಿನ ಮಾನದಂಡದ ಆಧಾರದಲ್ಲಿ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ರಾಜಸ್ಥಾನ ಕಾಂಗ್ರೆಸ್‌ ಸರಕಾರದ ಯೋಜನೆಗಳ ಬಗ್ಗೆ ಶುಕ್ರವಾರದಿಂದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ” ಎಂದು ತಿಳಿಸಿದರು.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು. ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ಪ್ರಮುಖ ನಾಯಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next