Advertisement
ಬೆಳಿಗ್ಗೆ ಬೇಗ ಏಳುವುದು, ನಿತ್ಯವೂ ನಿಯಮಿತ ಸಮಯಕ್ಕೆ ಸ್ನಾನ ಮಾಡುವುದು, ಸ್ವಲ್ಪ ಕಾಲ ಧ್ಯಾನ, ಮಾನಸ ಪೂಜೆ ಅಥವಾ ಭಜನೆ ಮಾಡುವುದು ಇದನ್ನು ಮನಸ್ಸಿಗೆ ಹೇಳಿಕೊಡಬೇಕು. ಮನಸ್ಸು ಸಹಜವಾಗಿ ಚಂಚಲ. ಅದು ನಾವು ಹೇಳಿದ್ದನ್ನು ಕೂಡಲೇ ಮಾಡುವುದಿಲ್ಲ, ಏನಾದರೂ ನೆಪ ಹೇಳುತ್ತದೆ.
Related Articles
Advertisement
ಎಲ್ಲಮ್ಮನೂ ಅವಳೇ, ವೇದದ ಅದಿತಿಯೂ ಅವಳೇ. ವೇದಗಳ ಭಾಗವಾದ ಸಂಹಿತೆ, ಅರಣ್ಯಕ, ಬ್ರಾಹ್ಮಣ ಮತ್ತು ಉಪನಿಷತ್ತುಗಳಲ್ಲಿ ದೇವಿಯ ಆರಾಧನೆ, ಚಿಂತನೆಯ ವಿಚಾರಗಳು ಬಂದಿವೆ. ಈ ಬಗೆಯ ವಿದ್ಯೆಯನ್ನು ಅಂದರೆ ಅಧ್ಯಾತ್ಮ ವಿದ್ಯೆಯನ್ನು ಗುಹ್ಯ, ಗೂಢ, ಗುಹ್ಯಾತಿಗುಹ್ಯ ಎಂದು ಹೇಳಲಾಗಿದೆ. ಕೆಲವರು ತಂತ್ರದ ದಾರಿಶಕ್ತಿಯ ಉಪಾಸನೆ ದಾರಿ, ನಂತರದ್ದು ಪುರಾಣ ಕಾಲದ್ದು ಎಂದು ಹೇಳುವುದುಂಟು. ಅದು ಹಾಗಲ್ಲ. ಈ ವಿದ್ಯೆ ವೇದಗಳಷ್ಟೇ ಪ್ರಾಚೀನ. ಭಾರತದಲ್ಲಿ ದೇವಿಯ ಉಪಾಸನೆಯನ್ನು ವೈದಿಕ ಮತ್ತು ತಾಂತ್ರಿಕ ಎರಡೂ ದಾರಿಗಳಲ್ಲೂ ಮಾಡಿ¨ªಾರೆ, ಮಾಡುತ್ತಿದ್ದಾರೆ. ಅದ್ವೆ„ತದ ಮಹಾಪೀಠವಾದ ಶೃಂಗೇರಿಯಲ್ಲಿ ಪ್ರತಿವರ್ಷ ಶರನ್ನವರಾತ್ರಿಯಲ್ಲಿ ಗುರುಗಳೇ ಸ್ವತಃ ಶ್ರೀಚಕ್ರದ ಆರಾಧನೆ ಮಾಡುವುದನ್ನು ಅನೇಕರು ನೇರವಾಗಿ ಅಥವಾ ದೂರದರ್ಶನದ ಮೂಲಕ ನೋಡಿರಬಹುದು. ಅಂದರೆ ಈ ನಾಡಿನಲ್ಲಿ ಅದ್ವೆ„ತ-ಶಾಕ್ತ ಒಟ್ಟೊಟ್ಟಿಗೆ ಚಲಿಸಿವೆ.
ದೇವಿಯ ಉಪಾಸನೆಯನ್ನು ಜೈನ ಬೌದ್ಧ, ಸೌರ, ಗಾಣಪತ್ಯ, ಷಣ್ಮುಖ (ಸ್ಕಂದನ ಉಪಾಸನೆ, ದಕ್ಷಿಣ ಕನ್ನಡದಲ್ಲಿ ಸುಬ್ರಹ್ಮಣ್ಯನ ಉಪಾಸನೆ)ಗಳಲ್ಲಿ ಕಾಣ ಬಹುದು. ಸ್ವತಃ ಶಾಕ್ತದಲ್ಲಿ ಶ್ರೀ ವಿದ್ಯೆಯಲ್ಲಿ ಅನೇಕ ಪಥಗಳಿವೆ. ಉಪಾಸನೆ ಮಾಡುವ ಅಂದರೆ ಸರಳವಾಗಿ ಹೇಳುವುದಾದರೆ ಆ ಮಹಾತಾಯಿಯನ್ನು ಕಾಣಲು, ಸಮೀಪಿಸಲು ಹಳಬರು ಹತ್ತು ಉಪಾಸನೆಯ ದಾರಿಗಳನ್ನು ಹಾಕಿಕೊಟ್ಟಿ¨ªಾರೆ. ಹೀಗಾಗಿ, ಈ ದಾರಿಗಳನ್ನು ಸೇರಿಸಿ ದಶಮಹಾವಿದ್ಯೆ ಎಂದು ಹೆಸರಿಟ್ಟಿ¨ªಾರೆ. ವಿದ್ಯೆ ಎಂದರೆ ಏನು? ಬಿಎ, ಬಿಕಾಂ, ಎಂಎ. ಎಂಎಸ್ಸಿ, ಪಿಎಚ್‌ಡಿ ಇವು ಲೌಕಿಕ ವಿದ್ಯೆಗಳು.
ದೇವರನ್ನು ಕಾಣಲು ಬಳಸದಿದ್ದರೆ ವೇದವೂ ಇದೇ ಪ್ರಾಂಗಣಕ್ಕೆ ಬರಬಹುದು. ಈ ಮಹಾವಿದ್ಯೆಗಳನ್ನು ಹಾಗೆ ಕರೆಯಲು ಕಾರಣ, ಅವು ದೇವಿಯನ್ನು ಕಾಣಲು ಇರುವ ಉಪಾಸನೆಯ ಖಚಿತ ಸ್ಪಷ್ಟ ದಾರಿಗಳಾದ್ದರಿಂದ. ಕಾಲೀ, ತಾರಾ, ತ್ರಿಪುರಸುಂದರೀ, ಭುವನೇಶ್ವರೀ, ಛಿನ್ನಮಸ್ತಾ, ಭೈರವೀ, ಬಹಳಾಮುಖೀ, ಮಾತಂಗೀ, ಕಮಲಾ ಮತ್ತು ಧೂಮವತೀ ಇವೇ ಆ ಹತ್ತು ಮಹಾವಿದ್ಯೆಗಳು. ಇದರಲ್ಲಿ ತಾಂತ್ರಿಕ ಆಚಾರ್ಯರು ಕೆಲವನ್ನು ಮಹಾವಿದ್ಯೆಗಳೆಂದು, ಕೆಲವನ್ನು ಸಿದ್ಧವಿದ್ಯೆಗಳೆಂದು ಮತ್ತು ಕೆಲವನ್ನು ವಿದ್ಯೆಗಳೆಂದು ಕರೆದಿ¨ªಾರೆ.
ಆಧುನಿಕ ಮನಸ್ಸಿಗೆ ಈ ಉಪಾಸನೆ, ಅನುಸಂಧಾನದಂಥ ವಿಷಯವನ್ನು ಅರಿಯಲು ಅನೇಕ ತೊಡಕುಗಳಿವೆ. ಮೊದಲನೆಯದು ನಂಬಿಕೆ ಇಲ್ಲದಿರುವುದು, ಎರಡನೆಯದು ಪರೀಕ್ಷಿಸಿ ನೋಡುವ ಧೈರ್ಯ, ಸಾಮರ್ಥ್ಯ ಇಲ್ಲದಿರುವುದು, ಮೂರನೆಯದು ತತ್ವ , ದರ್ಶನ ಇವುಗಳ ಬಗೆಗೆ ಪ್ರಾಥಮಿಕ ಮಾಹಿತಿಯೂ ಇಲ್ಲದಿರುವುದು. ಮೂರನೆಯದನ್ನು ಮೊದಲು ನೋಡೋಣ. ಇಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಮಾಡಿ ದೇಶ-ವಿದೇಶ ಸುತ್ತಿ ಬಂದಿರುತ್ತಾರೆ, ಆದರೆ ಶಂಕರಾಚಾರ್ಯ, ಅಭಿನವಗುಪ್ತ, ರಾಮಾನುಜಾ ಚಾರ್ಯ, ಮಧ್ವಾಚಾರ್ಯ ಇವರು ಧ್ಯಾನ, ಉಪಾಸನೆಯ ಕ್ಷೇತ್ರಕ್ಕೆ ಏನೇನು ಮತ್ತು ಎಂತೆಂಥ ಕೊಡುಗೆ ನೀಡಿ¨ªಾರೆ ಎಂಬುದರ ಕಿಂಚಿತ್ ಅರಿವೂ ಇರುವುದಿಲ್ಲ. ಮನೆಯಲ್ಲಿ ತಮ್ಮ ತಮ್ಮ ಗುರುಪರಂಪರೆಯ ಕನಿಷ್ಠ ಕೆಲವಾದರೂ ಶಾಸ್ತ್ರಗ್ರಂಥಗಳು ಕೂಡ ಇರುವುದಿಲ್ಲ. ಇದೇ ಮಾನಸಿಕ ದಾಸ್ಯ. 300-400 ವರ್ಷಗಳ ಪಾಶ್ಚಾತ್ಯ ಸಂಪರ್ಕ ಪ್ರಭಾವದಿಂದಾಗಿ “ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ’ ಎಂದು ಹೇಳುವ ಮೆಕಾಲೆ ಮಾನಸಪುತ್ರರು ಹುಟ್ಟಿಕೊಂಡಿ¨ªಾರೆ. ಎರಡನೆಯದು ಧೈರ್ಯ ಸಾಮರ್ಥ್ಯದ ಪ್ರಶ್ನೆ. ಅಂದರೆ, ಮಣಿ ಮಂತ್ರ, ಔಷಧ ಇವು ಪ್ರಯೋಗಿಸಿಯೇ ನೋಡಬೇಕು. ಇಂಗ್ಲಿಷ್ ಓದಲು ಬರುತ್ತದೆ ಎಂದು ಯಾರೂ ತಾವೇ ಔಷಧದ ಅಂಗಡಿಗೆ ಹೋಗಿ ಔಷಧ ತೆಗೆದುಕೊಳ್ಳುವುದಿಲ್ಲ ತಾನೆ? ಹಾಗೆ ಅಧ್ಯಾತ್ಮದ ದಾರಿಯಲ್ಲಿ ಸಾಧನೆ ಮಾಡುವವರು ಸಾವಿರಾರು ರೂಪಾಯಿ ಖರ್ಚುಮಾಡಿ ನೂರಾರು ಪುಸ್ತಕ ಓದಿದರೆ ಬುದ್ಧಿ ಚುರುಕಾಗುತ್ತದೆ ಅಷ್ಟೆ, ಕೆಲವು ಹೆಸರುಗಳು ಹೇಳಲು ಬರುತ್ತದೆ. ಈಜು ಕಲಿಯಲು ತರಬೇತಿ ಪಡೆಯದೆ ದಪ್ಪ ದಪ್ಪ ಪುಸ್ತಕಗಳನ್ನು ಮಗುಚಿ ಹಾಕಿದಂತೆ ಇದು. ಮೊದಲನೆಯದು ದೊಡ್ಡ ಸಮಸ್ಯೆ, ಅದೇ ಅಪನಂಬಿಕೆ, ಹೀಗಾದರೆ ಹೇಗೆ ಎಂಬ ಇಫ್Õ ಮತ್ತು ಬಟ್ಸ್ ದಾರಿ ಅದು. ಉತ್ತರದ ಕಡೆ ಕರೆದುಕೊಂಡು ಹೋಗುವ ಪ್ರಶ್ನೆಗಳೂ ಇವೆ, ಉತ್ತರ ಸಿಗದಂತೆ ಮಾಡುವ ಪ್ರಶ್ನೆಗಳೂ ಇವೆ.
ಮಂತ್ರದ್ರಷ್ಟಾರರು ಮಂತ್ರಗಳನ್ನು ಲೋಕಕ್ಕೆ ನೀಡಿದ್ದು ಮಾವಿನಕಾಯಿ ಉದುರಿಸಿ ಉಪ್ಪಿನಕಾಯಿ ಹಾಕಿ ತಿಂದು ನಾಲಿಗೆ ತೀಟೆ ತೀರಿಸಿಕೊಳ್ಳಲೆಂದೇ? ಅಥವಾ ಮಂತ್ರ ಲೋಕದ ಮಾಂತ್ರಿಕತೆಯ ದಿವ್ಯ ಕ್ಷಣಗಳನ್ನು ನಿತ್ಯ ಅನುಸಂಧಾನದ ಮೂಲಕ ಅನುಭವಿಸಲೆಂದೇ? ನಮ್ಮ ಆಧ್ಯಾತ್ಮಿಕ ಅನುಸಂಧಾನ ಲೋಕಗಳು, ಅವುಗಳ ಮುಖ್ಯರಸ್ತೆ. ಅಡ್ಡ ರಸ್ತೆಗಳನ್ನಾದರೂ ಭಾರತೀಯರಾಗಿ ನಾವು ತಿಳಿದಿರಬೇಕಲ್ಲವೇ? ನೆನಪಿರಲಿ: ಉಪಾಸನೆ ಇರುವುದು ಮನಸ್ಸಿನ ವಿಸ್ತಾರಕ್ಕೆ, ಚಿತ್ತದ ಶುದ್ಧಿಗೆ. – ಜಿ. ಬಿ. ಹರೀಶ