ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಜು.19ಕ್ಕೆ ಶುರುವಾಗಿದ್ದು, ಇದುವರೆಗೆ ಸುಗಮ ಕಲಾಪ ನಡೆದಿಲ್ಲ. ಸೋಮವಾರ ಕೂಡ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪೆಗಾಸಸ್ ಮತ್ತು ಮೂರು ಕೃಷಿ ಕಾಯ್ದೆಗಳ ವಿರುದ್ಧ ವಿಪಕ್ಷಗಳು ಕೋಲಾಹಲ ಎಬ್ಬಿಸಿದ್ದ ರಿಂದ ಪದೇ ಪದೆ ಕಲಾಪ ಮುಂದೂಡಿಕೆ ಯಾ ಯಿತು. ಅಂತಿಮವಾಗಿ ಸಂಜೆ 3.30ರ ವೇಳೆಗೆ ಎರಡೂ ಸದನಗಳ ಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಲೋಕಸಭೆಯಲ್ಲಿ ಗದ್ದಲದ ನಡು ವೆಯೂ ಸಾಮಾನ್ಯ ವಿಮೆ ವಹಿವಾಟು (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕ 2021ನ್ನು ಚರ್ಚೆ ಯಿಲ್ಲದೆ ಅಂಗೀಕರಿಸ ಲಾಯಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಧೇಯಕದ ಬಗ್ಗೆ ಮಾತನಾಡಿ, “ವಿಪಕ್ಷಗಳು ನಿಜವಾದ ಕಾಳಜಿ ಇದ್ದಲ್ಲಿ, ಗದ್ದಲ ನಡೆಸದೆ, ಸದನದಲ್ಲಿ ಆಸೀನರಾಗಬೇಕು. ಚರ್ಚೆ ನಡೆಸಿ, ವಿಧೇಯಕದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು ಎಂದರು’ ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧರಿ ಇದೊಂದು ಜನವಿರೋಧಿ ವಿಧೇಯಕ ಎಂದು ದೂರಿದ್ದಕ್ಕೆ ವಿತ್ತ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾಹಲದ ನಡುವೆ ವಿಧೇಯಕಕ್ಕೆ ಅಂಗೀಕಾರ ಪಡೆ ದುಕೊಳ್ಳಲಾಯಿತು. ಅನಂತರ ಸ್ಪೀಕರ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂಸದೆ ರಮಾ ದೇವಿ ಮಂಗಳವಾರಕ್ಕೆ ಕಲಾಪ ಮುಂದೂಡಿದರು.
ರಾಜ್ಯಸಭೆಯಲ್ಲಿ: ಮೇಲ್ಮನೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಬೆಳಗ್ಗೆ 11 ಗಂಟೆಯಿಂದ ಪದೇ ಪದೆ ಕಲಾಪ ಮುಂದೂಲ್ಪಟ್ಟಿತ್ತು. ಸಂಜೆ 3.35ಕ್ಕೆ ಎರಡು ವಿಧೇಯಕಗಳನ್ನು ಮಂಡಿಸ ಲಾಯಿತು. ಅದಕ್ಕೆ ಪೂರಕವಾಗಿ ಕೋಲಾಹಲದ ನಡುವೆಯೇ, ಸಭಾಪತಿ ಸ್ಥಾನದಲ್ಲಿ ಕುಳಿತು, ಕಲಾಪ ನಿರ್ವಹಿಸುತ್ತಿದ್ದ ಭುವನೇಶ್ವರ್ ಕಾಲಿತಾ ಗದ್ದಲ ನಿಲ್ಲಿಸು ವಂತೆ ಮನವಿ ಮಾಡಿದರೂ, ಪ್ರಯೋ ಜನವಾಗಲಿಲ್ಲ. ಗದ್ದಲದ ನಡುವೆಯೇ ಒಳನಾಡು ಜಲಸಾರಿಗೆ ವಿಧೇಯಕ 2021ಕ್ಕೆ ಅನುಮೋದನೆ ಪಡೆದು ಕೊಂಡಿತು ಕೇಂದ್ರ ಸರಕಾರ.
ಇಂದು ವಿಪಕ್ಷಗಳ ಸಭೆ: ಕಾಂಗ್ರೆಸ್ ನೇತೃತ್ವದಲ್ಲಿ 14 ವಿಪಕ್ಷಗಳು ಹೊಸ ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಂಗಳವಾರ ಬೆಳಗ್ಗೆ ಉಪಾಹಾರ ಸಭೆ ನಡೆಸಲಿವೆ. ಈ ಸಂದರ್ಭದಲ್ಲಿ ಪೆಗಾಸಸ್ ವಿಚಾರದ ಬಗ್ಗೆ ಸರಕಾರದ ವಿರುದ್ಧ ಪ್ರತಿತಂತ್ರ ಮತ್ತು ಅಣಕು ಸಂಸತ್ ನಡೆಸಲೂ ತೀರ್ಮಾನಿಸಲಾಗುತ್ತದೆ.
ಕೇಂದ್ರ ಸರಕಾರದ ಹಠದಿಂದಲೇ ಸಂಸತ್ ಕಲಾಪಗಳಿಗೆ ಅಡ್ಡಿಯಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ವಿಪಕ್ಷಗಳ ಸಭೆ ಮಂಗಳವಾರ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿಪಕ್ಷ ನಾಯಕ