Advertisement
ಸಾಮಾನ್ಯವಾಗಿ ರಾಜ್ಯ ಕರಾವಳಿಗೆ ಮುಂಗಾರು ಅಪ್ಪಳಿಸಿದ ವೇಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಇರುತ್ತದೆ. ದಿನವಿಡೀ ಮುಗಿಲಿನಿಂದ ಕೂಡಿ ಉತ್ತಮ ಮಳೆ ಸುರಿಯುತ್ತದೆ. ಆದರೆ ಕರಾವಳಿಯಲ್ಲಿ ರವಿವಾರ ಸಂಜೆಯವರೆಗೆ ಮಳೆಯ ಪ್ರಮಾಣ ಕಡಿಮೆ ಇತ್ತು.
ದ.ಕ. ಜಿಲ್ಲೆಯಲ್ಲಿ ರವಿವಾರ ಸಂಜೆಯವರೆಗೆ ಮಳೆಯ ಅಬ್ಬರ ತುಸು ಕಡಿಮೆ ಇತ್ತು. ಮಂಗಳೂರಿನಲ್ಲಿ ರವಿವಾರ ತಡರಾತ್ರಿ ಮಳೆಯಾಗಿತ್ತು. ದಿನವಿಡೀ ಬಿಸಿಲು ಮತ್ತು ಮೋಡದ ವಾತಾವರಣ ಇತ್ತು. ಜಿಲ್ಲೆಯ ಕೆಲವು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸೆಕೆಯ ವಾತಾವರಣ ಇದ್ದು, ಗರಿಷ್ಠ ತಾಪಮಾನದಲ್ಲಿಯೂ ಏರಿಕೆ ಕಂಡಿತ್ತು. ಮಂಗಳೂರಿನಲ್ಲಿ 32.6 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 0.6 ಡಿ.ಸೆ. ಮತ್ತು 25.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ತಾಪಮಾನ ಏರಿಕೆ ಕಂಡಿತ್ತು.
Related Articles
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜೂ. 3 ರಿಂದ 6ರವರೆಗೆ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ.
Advertisement