Advertisement
ದ.ಕ., ಉಡುಪಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಖರೀದಿ ಬಹುತೇಕ ಪೂರ್ಣಗೊಂಡಿದ್ದು ಬಿತ್ತನೆ ಆರಂಭವಾಗಿದೆ. ಕಳೆದ ಬಾರಿ ಲಾಕ್‌ಡೌನ್ ಕಾರಣ ಉಭಯ ಜಿಲ್ಲೆಗಳಲ್ಲಿ 700 ಹೆಕ್ಟೇರ್ ಹೆಚ್ಚುವರಿ ಕೃಷಿ ನಡೆದಿತ್ತು. ಈ ಬಾರಿ ಒಟ್ಟು 48,270 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೇಸಾಯ ನಡೆಯುವ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 2,500 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಇದರಲ್ಲಿ 1,700 ಕ್ವಿಂಟಾಲ್ ಎಂಒ4 ಬೀಜವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದ್ದು ಸಂಪೂರ್ಣ ಖಾಲಿಯಾಗಿದೆ. ಇದಕ್ಕೆ ಬದಲಿಯಾಗಿ ಎಂಒ4 ಗುಣಲಕ್ಷಣಗಳನ್ನು ಹೊಂದಿರುವ ಎಂಒ16 ತಳಿಯ ಬಳಕೆಗೆ ಕೃಷಿ ಇಲಾಖೆ ಸಲಹೆ ನೀಡುತ್ತಿದೆ. ಈ ತಳಿಯ 150 ಕ್ವಿಂ. ಬೀಜ ದಾಸ್ತಾನಿದೆ. ಇದರೊಂದಿಗೆ 57 ಕ್ವಿಂ. ಜ್ಯೋತಿ ಬೀಜ ಕೂಡ ಲಭ್ಯವಿದೆ. ದ.ಕ. ಜಿಲ್ಲೆಯಲ್ಲಿ ಎನ್‌ಒ4 ಬೀಜ 204.13 ಕ್ವಿಂ. ಮಾರಾಟವಾಗಿದ್ದು 269.25 ಕ್ವಿಂ. ದಾಸ್ತಾನಿದೆ. ದಾಖಲೆ ನಿರೀಕ್ಷೆ
ಕಳೆದ ವರ್ಷ ಲಾಕ್‌ಡೌನ್ ಸಂದರ್ಭ ಉದ್ಯೋಗ ತೊರೆದು ಊರಿಗೆ ಬಂದವರು ಕೃಷಿಯತ್ತ ಒಲವು ತೋರಿದ್ದರಿಂದ ಉಡುಪಿ ಜಿಲ್ಲೆಯಲ್ಲಿ 500 ಹೆ. ಭತ್ತದ ಬೆಳೆ ಹೆಚ್ಚಳವಾಗಿತ್ತು. ಈ ಬಾರಿ 820 ಹೆಕ್ಟೇರ್ ಹಡಿಲು ಭೂವಿಯಲ್ಲೂ ಬೇಸಾಯದ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಲ್ಲೂ ಕಳೆದ ವರ್ಷ 200 ಹೆಕ್ಟೇರ್ ಹಡಿಲು ಭೂಮಿಯಲ್ಲಿ ಕೃಷಿ ನಡೆದಿದೆ. ಈ ಬಾರಿ ಉಡುಪಿ ಶಾಸಕ ರಘುಪತಿ ಭಟ್ಟರ ನೇತೃತ್ವದಲ್ಲಿ ಮತ್ತು ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುಂದಾಳತ್ವದಲ್ಲಿ ಉಭಯ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 1,028 ಹೆಕ್ಟೇರ್ ಹಡಿಲು ಗದ್ದೆಗಳಿಗೆ ಬೇಸಾಯದ ಯೋಗ ಬಂದಿರುವುದರಿಂದ ಉಭಯ ಜಿಲ್ಲೆಗಳಲ್ಲಿ 2018 ಅನಂತರ ಅತೀ ಹೆಚ್ಚಿನ ಪ್ರಮಾಣದ ಭತ್ತ ಬೆಳೆಯುವ ನಿರೀಕ್ಷೆ ಇದೆ.
Related Articles
ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿ ದ್ದಾರೆ. ಉಭಯ ಜಿಲ್ಲೆಗಳಲ್ಲಿ ಈ ಬಾರಿ 48,270 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತದ ಕೃಷಿ ನಿರೀಕ್ಷಿಸಲಾಗಿದೆ. 820 ಹೆಕ್ಟೇರ್ ಹಡಿಲುಭೂಮಿ ಕೃಷಿ ನಡೆಯುವ ನಿರೀಕ್ಷೆ ಇದೆ.
– ಕೆಂಪೇಗೌಡ, ಸೀತಾ ಜಂಟಿ ಕೃಷಿ ನಿರ್ದೇಶಕರು ಉಡುಪಿ, ದ.ಕ.
Advertisement
– ರಾಜೇಶ್ ಗಾಣಿಗ ಅಚ್ಲಾಡಿ