Advertisement
“ಟೋಕಿಯೊ ಒಲಿಂಪಿಕ್ಸ್‌ಗಾಗಿ ನಾವು ಭರದ ಸಿದ್ಧತೆ ಮಾಡುತ್ತಿದ್ದೇವೆ. ನಮ್ಮ ಗುರಿ ಪೋಡಿಯಂ ಮೇಲೇರಿ ನಿಲ್ಲುವುದು ಹಾಗೂ ಈ ಪದಕವನ್ನು ಕೋವಿಡ್ ವಿರುದ್ಧ ಹೋರಾಡಿದ ನಿಜವಾದ ಹೀರೋಗಳಾದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ಅರ್ಪಿ ಸುವುದು. ದೇಶವನ್ನು ಈ ಮಹಾ ಮಾರಿಯಿಂದ ಬಚಾವ್ ಮಾಡು ವಲ್ಲಿ ಇವರು ವಹಿಸಿದ ಶ್ರಮಕ್ಕೆ ಬೆಲೆ ಕಟ್ಟಲಾಗದು. ಥ್ಯಾಂಕ್ಯೂ, ಜೈ ಹಿಂದ್’ ಎಂದು ಹೇಳಿರುವ ಮನ್‌ಪ್ರೀತ್ ಸಿಂಗ್ ಅವರ ವೀಡಿಯೋವನ್ನು “ಹಾಕಿ ಇಂಡಿಯಾ’ ಬಿಡುಗಡೆ ಮಾಡಿದೆ.
ಹಾಕಿಪಟುಗಳೆಲ್ಲ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ. ಎಲ್ಲರೂ ಗರಿಷ್ಠ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಕಾತರರಾಗಿದ್ದಾರೆ ಎಂದು ಮನ್‌ಪ್ರೀತ್ ಹೇಳಿದರು. ಭಾರತ ಈ ವರೆಗೆ ಒಲಿಂಪಿಕ್ಸ್ ಹಾಕಿಯಲ್ಲಿ 8 ಚಿನ್ನದ ಪದಕ ಗೆದ್ದಿದೆ. ಆದರೆ 1980ರ ಬಳಿಕ ಬಂಗಾರದ ಬರಗಾಲ ಎದುರಿಸುತ್ತಿದೆ.