Advertisement

ಮನೌಸ್‌ ಶವ ಪೆಟ್ಟಿಗೆಗೂ ಸಂಕಷ್ಟ

11:01 AM May 03, 2020 | mahesh |

ಮನೌಸ್‌: ಬ್ರೆಜಿಲ್‌ನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು , ದೇಶದ ಪ್ರಮುಖ ನಗರ ಅಮೆಜಾನ್‌ನ ರಾಜಧಾನಿ ಮನೌಸ್‌ನ ಸ್ಥಿತಿ ಚಿಂತಾಜನಕವಾಗಿದೆ. ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ನಗರದಲ್ಲಿಯೂ ದಿನಕಳೆದಂತೆ ಏರುತ್ತಿದ್ದು, ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಸ್ಥಳದ ಅಭಾವ ಕಾಡುತ್ತಿದೆ. ಜತೆಗೆ ಶವ ಪೆಟ್ಟಿಗೆಯ ಕೊರತೆಯೂ ಕಾಡತೊಡಗಿದೆ.

Advertisement

ಒಮ್ಮೆಲೇ ದುಪ್ಪಟ್ಟು
ಈ ಹಿಂದೆ ದಿನಕ್ಕೆ ಸರಾಸರಿ 20 ರಿಂದ 35 ಸಾವು ಪ್ರಕರಣಗಳನ್ನು ದಾಖಲಿಸುತ್ತಿದ್ದ ನಗರದಲ್ಲಿ ಒಂದು ವಾರದಿಂದ ದಿನಕ್ಕೆ ಕನಿಷ್ಠ 130 ಮರಣ ಪ್ರಕರಣಗಳು ದಾಖಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಬ್ರೆಜಿಲ್‌ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಎಪ್ರಿಲ್‌ 30ರ ಹೊತ್ತಿಗೆ ಅಮೆಜಾನ್‌ ರಾಜ್ಯದ್ಲಲಿ 5,200 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 425 ಮಂದಿ ಅಸುನೀಗಿದ್ದಾರೆ.

ಶವಪೆಟ್ಟಿಗೆ ಆಮದು
ಮನೌಸ್‌ನಲ್ಲಿ ಶವಪೆಟ್ಟಿಗೆಗಳ ಸಂಗ್ರಹ ಇಲ್ಲದ ಕಾರಣ 2,700 ಕಿ.ಮೀ. ದೂರ ಇರುವ ಸಾವೋ ಪೌಲೋನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮನೌಸ್‌ ಹಾಗೂ ಸಾವೋ ಪೌಲೋ ಸಂಪರ್ಕಿಸಲು ರಸ್ತೆಗಳೂ ಸರಿಯಾಗಿಲ್ಲದ ಕಾರಣ ಶವಪೆಟ್ಟಿಗೆಗಳನ್ನು ಏರ್‌ಲಿಫ್ಟ್‌ ಮಾಡಲಾಗುತ್ತಿದೆ.  ಸುಮಾರು 20ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ನಗರ ಅಮೆಜಾನ್‌ ಅರಣ್ಯ ಪ್ರದೇಶದಿಂದ ಸುತ್ತವರೆದಿದೆ. ಅಲ್ಲಿನ ಸಮದಾಯಗಳಿಗೂ ಮನೌಸ್‌ನ ಆರೋಗ್ಯ ವ್ಯವಸ್ಥೆಯೇ ಆಧಾರ. ಪರಿಣಾಮ ಮುಂದಿನ ದಿನಗಳಲ್ಲಿ ಸೋಂಕು ಪ್ರಸರಣ ಮತ್ತಷ್ಟು ಹೆಚ್ಚುವ ಭೀತಿ ಆವರಿಸಿದೆ. ಇದರ ಮಧ್ಯೆಯೇ ಇಲ್ಲಿನ ಜನರು ಲಾಕ್‌ಡೌನ್‌ ನಿಯಮಗಳನ್ನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಐಸೋಲೇಷನ್‌ ಪದ್ಧತಿಯೇ ಬೇಡ ಎಂದೂ ಆಗ್ರಹಿಸುತ್ತಿದ್ದಾರೆ. ಇದು ಸ್ಥಳೀಯ ಆಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next