ಕೊಚ್ಚಿ: ಮಾಲಿವುಡ್ (Mollywood) ಚಿತ್ರರಂಗ ಈ ವರ್ಷದ ಕೆಲವೇ ತಿಂಗಳಿನಲ್ಲಿ ಸಾವಿರ ಕೋಟಿ ಗಳಿಕೆ ಕಂಡಿದೆ. ತೆರೆಕಂಡ ಸಿನಿಮಾಗಳು ಕೋಟಿ ಕೋಟಿ ಗಳಿಕೆ ಕಂಡಿದೆ.
‘ಆಡುಜೀವಿತಂ’, ‘ಮಂಜುಮೇಲ್ ಬಾಯ್ಸ್’, ‘ಅನ್ವೆಶಿಪಿನ್ ಕಂಡೆತುಂ’, ‘ಪ್ರೇಮಲು’, ‘ವರ್ಷಂಗಲ್ಕ್ಕು ಶೇಷಮ್’, ‘ಬ್ರಹ್ಮಯುಗಂ’ ಹಾಗೂ ‘ಆವೇಶಂʼ.. ಮಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಕೆ ಕಂಡು ದಾಖಲೆ ಬರೆದಿದೆ.
ಒಂದೇ ಪ್ರಾಜೆಕ್ಟ್ ಚಿತ್ರರಂಗದ ಸ್ಟಾರ್ ಗಳೆಲ್ಲ ಜೊತೆಯಾಗಿ ಕಾಣಿಸಿಕೊಂಡರೆ ಹೇಗೆ? ಹೀಗೊಂದು ಪ್ರಾಜೆಕ್ಟ್ ಮಾಲಿವುಡ್ ಬರುತ್ತಿದೆ. ಮಾಲಿವುಡ್ ನಲ್ಲಿ ಸಿನಿಮಾಗಳು ಮಾತ್ರವಲ್ಲದೆ, ವೆಬ್ ಸಿರೀಸ್ ಗಳು ವಿಭಿನ್ನ ಕಥಾಹಂದರದಲ್ಲಿ ಬರುತ್ತದೆ.
8 ಜನ ನಿರ್ದೇಶಕರ, 9 ಕಥೆಗಳ್ಳುಳ ‘ಮನೋರಥಂಗಳ್’ (Manorathangal) ಎನ್ನುವ ಆಂಥಾಲಜಿ ವೆಬ್ ಸಿರೀಸ್ (Anthology Web Series) ಮಾಲಿವುಡ್ ನಲ್ಲಿ ಬರುತ್ತಿದೆ. ಈ ಸಿರೀಸ್ ನ ವಿಶೇಷತೆಯೆಂದರೆ ಇದರಲ್ಲಿ ಬಹುತೇಕ ಮಾಲಿವುಡ್ ಎಲ್ಲಾ ಸ್ಟಾರ್‌ಗಳು ನಟಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮತ್ತು ಚಿತ್ರಕಥೆಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರು ಬರೆದ ಕಥೆಗಳನ್ನು ಆಧರಿಸಿ ಈ ಸಿರೀಸ್ ಬರುತ್ತಿದೆ.
ದಕ್ಷಿಣ ಭಾರತದ ದಿಗ್ಗಜರು ಈ ಸಿರೀಸ್ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್, ಮೋಹನ್ ಲಾಲ್,(Mohanlal), ಮಮ್ಮುಟಿ (Mammootty), ಫಾಹದ್ ಫಾಸಿಲ್(Fahadh Faasil) ಮುಂತಾದ ಮಾಲಿವುಡ್ ಸೂಪರ್ ಸ್ಟಾರ್ ಗಳು ನಟಿಸಿದ್ದಾರೆ.
ಇವರಷ್ಟೇ ಅಲ್ಲದೆ ಪಾರ್ವತಿ ತಿರುವೋತು, ಮತ್ತು ಮಧು, ಬಿಜು ಮೆನನ್, ಇಶಿತ್ ಯಾಮಿಮಿ, ಅಪರ್ಣಾ ಬಾಲಮುರಳಿ, ನದಿಯಾ ಮೊಯ್ದು, ಆನ್ ಆಗಸ್ಟಿನ್, ದುರ್ಗಾ ಕೃಷ್ಣ, ಆಸಿಫ್ ಅಲಿ, ಇಂದ್ರಜಿತ್ ಸುಕುಮಾರನ್, ಇಂದ್ರನ್ಸ್ ಮತ್ತು ಸಿದ್ದಿಕ್ ಮೊದಲಾದವರೂ ನಟಿಸಿದ್ದಾರೆ.
ಒಟ್ಟು 9 ಕಥೆಗಳಲ್ಲಿ ಪ್ರಿಯಾದರ್ಶನ್ ಅವರು 2 ಎಪಿಸೋಡ್ ಗಳನ್ನು ನಿರ್ದೇಶನ ಮಾಡಿದ್ದು, ಶ್ಯಾಮ್ ಪ್ರಸಾದ್, ಅಶ್ವತಿ ವಿ ನಾಯರ್, ಮಹೇಶ್ ನಾರಾಯಣನ್, ರಂಜಿತ್, ಸಂತೋಷ್ ಶಿವನ್ ಮತ್ತು ರತೀಶ್ ಅಂಬಟ್, ಜಯರಾಜನ್ ನಾಯರ್ ಇತರೆ ಎಪಿಸೋಡ್ ಗಳನ್ನು ಕಟ್ಟಿಕೊಟ್ಟಿದ್ದಾರೆ.
ಎಂಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದಂದು ‘ಮನೋರಥಂಗಳ್’ ಟ್ರೇಲರ್ ರಿಲೀಸ್ ಆಗಿದೆ. ಕಮಲ್ ಹಾಸನ್ ಅವರು ಕಥೆ ಹೇಳುವ ನಿರೂಪಕನಂತೆ ಕಾಣಿಸಿಕೊಂಡರೆ, ಫಾಹದ್ ಫಾಸಿಲ್, ಮಮ್ಮುಟ್ಟಿ ಹಾಗೂ ಮೋಹನ್ ಲಾಲ್ ಕಥೆಯ ಪ್ರಮುಖ ಪಾತ್ರದದಲ್ಲಿ ಕಾಣಿಸಿಕೊಂಡಿದ್ದಾರೆ.
ಆಗಸ್ಟ್ 15ರಿಂದ ಜೀ5 ನಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಈ ಸಿರೀಸ್ ಸ್ಟ್ರೀಮ್ ಆಗಲಿದೆ.