Advertisement

ದುಃಸ್ಸಾಹಸ ಕೈಗೊಂಡರೆ ತಕ್ಕ ಶಾಸ್ತಿ: ಪಾಕ್‌ಗೆ ಭೂಸೇನೆಯ ಹೊಸ ಮುಖ್ಯಸ್ಥ ಎಚ್ಚರಿಕೆ

09:55 AM Jan 01, 2020 | Team Udayavani |

ನವದೆಹಲಿ: ಪಾಕಿಸ್ತಾನ ಪದೇ ಪದೆ ಜಮ್ಮು ಮತ್ತು ಕಾಶ್ಮೀರದಲ್ಲಿ ದುಃಸ್ಸಾಹಸ ಕೈಗೊಂಡರೆ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಭೂಸೇನೆಯ ನೂತನ ಮುಖ್ಯಸ್ಥ ಜ.ಮನೋಜ್‌ ಮುಕುಂದ್‌ ನರವಾನೆ ಎಚ್ಚರಿಕೆ ನೀಡಿದ್ದಾರೆ.

Advertisement

ಭೂಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೆರೆಯ ರಾಷ್ಟ್ರ ನಡೆಸುವ ಕುಕೃತ್ಯಗಳಿಗೆ ತಕ್ಕ ಶಾಸ್ತಿ ಮಾಡುವ ಅಧಿಕಾರ ಭಾರತಕ್ಕೆ ಇದೆ ಎಂದು ಹೇಳಿದ್ದಾರೆ. ಚೀನಾದ ಜತೆಗೆ ಹೊಂದಿಕೊಂಡಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭದ್ರತೆಯ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

“ದೇಶದ ಉತ್ತರ ಮತ್ತು ಪಶ್ಚಿಮ ಭಾಗದಿಂದ ದೇಶಕ್ಕೆ ಭೀತಿಯ ವಾತಾವರಣ ಮುಂದುವರಿದಿದೆ. ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಭಾಗದಿಂದ ಬರುತ್ತಿರುವ ಬೆದರಿಕೆಗಳನ್ನು ನಿಯಂತ್ರಿಸುವುದರ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಕಣಿವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕಳುಹಿಸಿಕೊಡುತ್ತಿರುವ ಉಗ್ರರನ್ನು ನಿರ್ದಯೆಯಿಂದ ನಿಗ್ರಹಿಸಲಾಗುತ್ತಿದೆ. ಈ ಬೆಳವಣಿಗೆ ಪಾಕಿಸ್ತಾನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next