Advertisement

ಅಂತರ್‌ ಜಾತಿ ಸಂಬಂಧಕ್ಕೆ ಮನೆಯವರ ವಿರೋಧ: ದೂರ ಹೋಗಿ ಮದುವೆಯಾದ ಖ್ಯಾತ ಯೂಟ್ಯೂಬರ್

12:15 PM Mar 18, 2023 | Team Udayavani |

ರಾಂಚಿ: ಮನೆಯವರ ವಿರೋಧದ ನಡುವೆಯೂ ಭಾರತದ ಖ್ಯಾತ ಯೂಟ್ಯೂಬರ್‌ ಗಳಲ್ಲಿ ಒಂದಾಗಿರುವ 27 ವರ್ಷದ ಮನೋಜ್ ದೇ ತಾನು ಪ್ರೀತಿಸಿದ ಯುವತಿಯನ್ನು ವರಿಸಿದ್ದಾರೆ.

Advertisement

ಯಾರು ಈ ಮನೋಜ್‌ ದೇ?: ಮನೋಜ್‌ ದೇ ಜಾರ್ಖಂಡ್‌ ಮೂಲದ ಯೂಟ್ಯೂಬರ್‌. ತನ್ನ ಅನ್‌ ಬಾಕ್ಸಿಂಗ್‌ ಹಾಗೂ ವ್ಲಾಗ್‌ ವಿಡಿಯೋಗಳ ಮೂಲಕ ಖ್ಯಾತಿಗಳಿಸಿರುವ ಅವರು 4.05 ಮಿಲಿಯನ್‌ ಗೂ ಅಧಿಕ ಸಬ್‌ ಸ್ಕ್ರೈಬರ್ಸ್‌ ನ್ನು ಹೊಂದಿದ್ದಾರೆ. ಭಾರತದ ಟಾಪ್‌ ಯೂಟ್ಯೂಬರ್‌ ಗಳಲ್ಲಿ ಮನೋಜ್‌ ದೇ ಅವರು ಕೂಡ ಒಬ್ಬರು. ಕಂಟೆಂಟ್‌ ಕ್ರಿಯೇಟರ್‌ ಆಗಿ ಖ್ಯಾತಿಯಾಗಿರುವ ಮನೋಜ್‌ ದೇ ಜ್ಯೋತಿಶ್ರೀ ಅವರನ್ನು ಯುಟ್ಯೂಬ್‌ ಮೂಲಕವೇ ಪರಿಚಯ ಮಾಡಿಕೊಂಡಿದ್ದಾರೆ.

ಕಂಟೆಂಟ್‌ ಕ್ರಿಯೇಟರ್‌ ಜ್ಯೋತಿಯೂ ಒಂದಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮನೋಜ್‌ ದೇ ಹಾಗೂ ಜ್ಯೋತಿ ಇಬ್ಬರು ಪರಸ್ಪರ ಪ್ರೀತಿಸುವ ವಿಚಾರ ಗೊತ್ತಾಗಿದ್ದರೂ ಅಂತರ್‌ ಜಾತಿ ಆಗಿರುವ ಕಾರಣಕ್ಕೆ ಇಬ್ಬರ ಮನೆಯಲ್ಲೂ ಸಂಬಂಧಕ್ಕೆ ತಕರಾರು ಇದ್ದೇ ಇತ್ತು.

ಇದನ್ನೂ ಓದಿ: ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ; ರಕ್ಷಣೆ ಮಾಡಿದ ಸಂಚಾರ ಪೊಲೀಸರು,ಸ್ಥಳೀಯರು

ಎರಡೂವರೆ ವರ್ಷದ ಬಳಿಕ ಜ್ಯೋತಿ ಹಾಗೂ ಮನೋಜ್‌ ಮದುವೆಯಾಗಿದ್ದಾರೆ. ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮನೋಜ್‌ ದೇ ಅವರ ಮದುವೆಯನ್ನು ದೇವಸ್ಥಾನದಲ್ಲಿ ಸ್ನೇಹಿತರೇ ಸೇರಿಕೊಂಡು ಮಾಡಿದ್ದಾರೆ.

Advertisement

ಈ ಬಗ್ಗೆ ಮನೋಜ್‌ ತಮ್ಮ ವ್ಲಾಗ್‌ ಚಾನೆಲ್‌ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ರಾತ್ರೀ ಇಡೀ ಜರ್ನಿ ಮಾಡಿಕೊಂಡು ಮದುವೆಯ ಜಾಗಕ್ಕೆ ಬಂದಿದ್ದೇನೆ. ನಾನು ಹಾಗೂ ಜ್ಯೋತಿ ಮದುವೆ ಆಗುತ್ತಿದ್ದೇವೆ. ನಾವಿಬ್ಬರೂ ನಮ್ಮ ಮನೆಯವರ ಮನವೊಲಿಸಲು ಪ್ರಯತ್ನ ಮಾಡಿದ್ದೇವೆ. ಕೊನೆ ಕ್ಷಣದವರೆಗೆ ಅವರು ನಮ್ಮ ಮದುವೆ ಒಪ್ಪುತ್ತಾರೆ ಅಂದುಕೊಂಡಿದ್ದೀವಿ ಆದರೆ ಅದು ಆಗಿಲ್ಲ. ಅಂತರ್‌ ಜಾತಿ ವಿವಾಹದಲ್ಲಿ ಅವರಿಗೆ ನಂಬಿಕೆಯಿಲ್ಲ. ನಾವಿಬ್ಬರೂ ಪ್ರಬುದ್ಧ ವಯಸ್ಕಾರಾದ ಕಾರಣ ಮದುವೆ ಆಗುತ್ತಿದ್ದೇವೆ ಎಂದು ಮನೋಜ್‌ ಹೇಳಿದ್ದಾರೆ.

ನಾವಿಬ್ಬರೂ ಎಲ್ಲಿ ಹೋದರು ಮನೆಯಲ್ಲಿ ಪ್ರಶ್ನೆ ಮಾಡುತ್ತಿದ್ದರು. ಈ ಕಾರಣದಿಂದ ಈ ಸಮಸ್ಯೆಯೇ ಬೇಡವೆಂದು ನಾವು ಮದುವೆಯಾಗಿದ್ದೇವೆ ಎಂದು ಮನೋಜ್‌ ಮದುವೆಯ ಬಳಿಕ ಮತ್ತೊಂದು ವಿಡಿಯೋವನ್ನು ಹಂಚಿಕೊಂಡು, ಮದುವೆಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದ್ದಾರೆ. ‌

ಅನ್‌ ಬಾಕ್ಸಿಂಗ್‌, ರಿವ್ಯ್ಸೂ,ಟ್ರೆಂಡಿಂಗ್‌ ಟಾಪಿಕ್‌ ಬಗ್ಗೆ ವಿಡಿಯೋ ಮಾಡುವ ಮನೋಜ್‌ , ಯೂಟ್ಯೂಬ್‌ ಗೆ ಸರಿಯಾದ ರೀತಿ ವಿಡಿಯೋ ಆಪ್ಲೋಡ್‌ ಮಾಡೋದು ಹೇಗೆ ಎನ್ನುವ 4 ನಿಮಿಷ 31 ವಿಡಿಯೋದಿಂದ ಹೆಚ್ಚು ಗಮನ ಸೆಳೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next