Advertisement

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

12:15 PM Jul 01, 2024 | Team Udayavani |

ಗ್ರೇಟರ್ ನೋಯ್ಡಾ: ಆನ್‌ ಲೈನ್‌ ನಲ್ಲಿ ಮಿಂಚಬೇಕೆನ್ನುವ ಕಾರಣದಿಂದ ಯುವಕನೊಬ್ಬ ಟವರ್‌ ಹತ್ತಿ ರಾದ್ಧಾಂತ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

Advertisement

ʼನೀಲೇಶ್ವರ್ 22‌ʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ನೀಲೇಶ್ವರ್  ಯೂಟ್ಯೂಬ್‌ ನಲ್ಲಿ ತನ್ನ ವಿಡಿಯೋಗೆ ಹೆಚ್ಚಿನ ವೀಕ್ಷಣೆ ಬರಬೇಕೆನ್ನುವ ಕಾರಣದಿಂದ ಅಪಾಯಕಾರಿ ಸಾಹಸವನ್ನು ಮಾಡಲು ಮುಂದಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

8.87 ಸಾವಿರ ಚಂದಾದಾರರಿರುವ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚಿನ ವೀಕ್ಷಣೆ ಬರಬೇಕೆನ್ನುವ ನಿಟ್ಟಿನಲ್ಲಿ ನೀಲೇಶ್ವರ್ ಅಪಾಯಕಾರಿ ಸಾಹಸವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.

ತನ್ನ ಸ್ನೇಹಿತನ ಬಳಿ ಲೈವ್‌ ಸ್ಟ್ರೀಮ್‌ ವಿಡಿಯೋ ಮಾಡಲು ಹೇಳಿ, ನೀಲ್ವೇಶ್ವರ್‌ ಎತ್ತರದ ಟವರ್‌ ವೊಂದಕ್ಕೆ ಏರಿದ್ದಾರೆ. ಏರುತ್ತಾ ಹೋದಂತೆ ಆತನ ಸ್ನೇಹಿತ ಕೆಳಗಡೆ ನಿಂತು ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ಯುವಕನ ಅಪಾಯಕಾರಿ ಹಾಗೂ ಹುಚ್ಚ ಸಾಹಸವನ್ನು ನೋಡಲು ಇತ್ತ ಗ್ರಾಮಸ್ಥರು ಒಟ್ಟು ಸೇರಿದಾಗ ಕೆಳಗಡೆ ನಿಂತು ವಿಡಿಯೋ ಮಾಡುತ್ತಿದ್ದ ನೀಲ್ವೇಶ್ವರ್‌ ಸ್ನೇಹಿತ ಗಾಬರಿಗೊಂಡು ಸ್ಥಳದಿಂದ ಪರಾರಿ ಆಗಿದ್ದಾನೆ.

Advertisement

ಇನ್ನೊಂದೆಡೆ ಯುವಕನನ್ನು ಕೆಳಗಿಳಿಸಲು ಪೊಲೀಸರು ಸ್ಥಳಕ್ಕೆ ಬಂದಿತ್ತು. ಪೊಲೀಸರು ಸತತ 5 ಗಂಟೆಗಳ ಯುವಕನ ಮನವೊಲಿಸಿದ ಬಳಿಕ ಆತನನ್ನು ಸುರಕ್ಷಿತವಾಗಿ ಟವರ್‌ ನಿಂದ ಕೆಳಗಿಳಿಸಿದ್ದಾರೆ.

ಆನ್‌ಲೈನ್ ಜನಪ್ರಿಯತೆಗಾಗಿ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಪೊಲೀಸರು ಹೇಳಿದ್ದು, ಈ ಕೃತ್ಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next