Advertisement

ಪಾರೀಕರ್‌ ಪಣಜಿಗೆ ಆಗಮನ

10:37 AM Oct 15, 2018 | |

ಪಣಜಿ:  ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಸಿಎಂ ಮನೋಹರ್‌ ಪಾರೀಕರ್‌ (62) ಡಿಸ್ಚಾರ್ಜ್ ಆಗಿ ಗೋವಾ ತಲುಪಿದ್ದಾರೆ. ರವಿವಾರ ಬೆಳಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದರೂ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಅವರನ್ನು ಮತ್ತೆ ಐಸಿಯುಗೆ ದಾಖಲಿಸಿ ವೈದ್ಯರು ತಪಾಸಣೆ ನಡೆಸಿದರು.  

Advertisement

ಅನಂತರ ಅವರನ್ನು ವಿಶೇಷ ವಿಮಾನದಲ್ಲಿ ಪಣಜಿಗೆ ಕರೆ ತರಲಾಯಿತು. ದೋನಾ ಪಾವ್ಲಾದಲ್ಲಿರುವ ಅವರ ಖಾಸಗಿ ನಿವಾಸಕ್ಕೆ ಪಾರೀಕರ್‌ ಅವರನ್ನು ಕರೆ ತರಲಾಗಿದೆ. ಅಲ್ಲಿ ಗೋವಾ ಮೆಡಿಕಲ್‌ ಕಾಲೇಜಿನ ನುರಿತ ವೈದ್ಯಕೀಯ ತಜ್ಞರು ಆರೋಗ್ಯ ಪರಿಶೀಲನೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಈ ವರ್ಷದ ಫೆಬ್ರವರಿಯಿಂದ ಅವರು ಗೋವಾ, ಮುಂಬಯಿ, ಅಮೆರಿಕ ಮತ್ತು ಹೊಸದಿಲ್ಲಿಯಲ್ಲಿನ ಆಸ್ಪತ್ರೆಯಲ್ಲಿ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗಾಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next