Advertisement

ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಜ.5 ರಿಂದ ವಿಮಾನ ಹಾರಾಟ ಆರಂಭ

05:46 PM Dec 20, 2022 | Team Udayavani |

ಪಣಜಿ: ಗೋವಾದ ಮೋಪಾದಲ್ಲಿ ನೂತನವಾಗಿ ನಿರ್ಮಿಸಲಾಗಿರುವ  ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿಸೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸೇವೆ ಜನವರಿ 5 ರಿಂದ ಪ್ರಾರಂಭವಾಗಲಿದೆ. ಈ ಹಿನ್ನಲೆಯಲ್ಲಿ ಇಂಡಿಗೋ ಮತ್ತು ಗೋ ಫಸ್ಟ್ ಎಂಬ ಎರಡು ವಿಮಾನಯಾನ ಸಂಸ್ಥೆಗಳು ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರಿನಂತಹ ಪ್ರಮುಖ ಸ್ಥಳಗಳಿಂದ  ಮೋಪಾಕ್ಕೆ ತಮ್ಮ ವಿಮಾನ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದವು. ಅಲ್ಲದೆ, ವಿಮಾನ ಹಾರಾಟಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಲು ವಿಮಾನಯಾನ ಸಂಸ್ಥೆಗಳು ನೇಮಕಾತಿ ಆರಂಭಿಸಿವೆ.

Advertisement

ಇಂಡಿಗೋ ಮತ್ತು ಗೋ ಫಸ್ಟ್ ಎಂಬ ಎರಡು ವಿಮಾನಯಾನ ಸಂಸ್ಥೆಗಳ ನಂತರ ಇದೀಗ ಆಕಾಶ ಏರ್‍ಲೈನ್ಸ್ ಕೂಡ ಮೋಪಾ ಮಾರ್ಗವನ್ನು ಆಯ್ಕೆ ಮಾಡಿದೆ. ಆದ್ದರಿಂದ, ಈ ವಿಮಾನಯಾನ ಸಂಸ್ಥೆಗಳ ವಿಮಾನಗಳು ಈಗ ಗೋವಾದ ದಾಬೋಲಿ ವಿಮಾನ ನಿಲ್ದಾಣದ ಬದಲಿಗೆ ಮೋಪಾ ವಿಮಾನ ನಿಲ್ದಾಣದಿಂದ  ಹಾರಾಟ ನಡೆಸಲಿವೆ. ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೊಪಾ ಗೋವಾದಿಂದ ಮುಂಬೈ ಮತ್ತು ಬೆಂಗಳೂರಿಗೆ ವಿಮಾನಗಳು ಜನವರಿ 11 ರಿಂದ ಪ್ರಾರಂಭವಾಗಲಿವೆ. ಹೀಗಾಗಿ ಈಗಾಗಲೇ ವಿಮಾನ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಪರದಾಡುವಂತಾಗಿದೆ.

ಅಕಾಶ ಏರ್‍ಲೈನ್ಸ್ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಮುಂಬೈ ಮತ್ತು ಬೆಂಗಳೂರಿಗೆ ವಿಮಾನಗಳನ್ನು ಪ್ರಾರಂಭಿಸುತ್ತದೆ. ಈಗಾಗಲೇ, ಗೋ ಫಸ್ಟ್ ಮತ್ತು ಇಂಡಿಗೋ ಏರ್‍ಲೈನ್ಸ್ ತಮ್ಮ ವಿಮಾನಗಳನ್ನು ಗೋವಾದ ದಾಬೋಲಿ ವಿಮಾನ ನಿಲ್ದಾಣದಿಂದ ಮೋಪಾ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಿವೆ. ಅಕಾಶ ಏರ್‍ಲೈನ್ಸ್ ವಿಮಾನ ಹಾರಾಟಕ್ಕೆ ಅಗತ್ಯ ಸಿಬ್ಬಂದಿಯ  ನೇಮಕಾತಿಯನ್ನು ಪ್ರಾರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮೋಪಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರು: ಸಿ.ಟಿ. ರವಿ

Advertisement

Udayavani is now on Telegram. Click here to join our channel and stay updated with the latest news.

Next