Advertisement

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

04:37 PM Jun 27, 2022 | Team Udayavani |

ದೋಟಿಹಾಳ: ಮಣ್ಣೆತ್ತಿನ ಅಮವಾಸ್ಯೆಗೆ ವಿಶೇಷತೆ ಇದೆ. ವರ್ಷದ 12 ಅಮವಾಸ್ಯೆಗಳಲ್ಲಿ ಬರುವ ಪ್ರಮುಖ ಅಮವಾಸ್ಯೆಗಳಲ್ಲಿ ಇದು ಒಂದು. ಇಲ್ಲಿಂದ ನೈಜ ಮಳೆಗಾಲ ಶುರುವಾಗುತ್ತದೆ ಎನ್ನವ ನಂಬಿಕೆ ರೈತರದು. ಉತ್ತರ ಕರ್ನಾಟಕದ ರೈತ ವರ್ಗಕ್ಕೆ ಮಣ್ಣೆತ್ತಿನ ಅಮವಾಸ್ಯೆ ಎಂದರೆ ಸಂಭ್ರಮವೋ ಸಂಭ್ರಮ.

Advertisement

ಹೌದು, ರೈತ ಬಿತ್ತನೆಗೆ ಕೈ ಹಾಕುವ ಮುನ್ನ ಕೃಷಿಗೆ ಆಧಾರ ಸ್ತಂಭವಾಗಿರವ, ತನ್ನ ಶ್ರಮದ ಬದುಕಿಗೆ ಹೆಗಲು ನೀಡಿದ ಎತ್ತುಗಳನ್ನು ಪೂಜಿಸುವ, ಆರಾಧಿಸುವ ವಿಶೇಷತೆ ಹೊಂದಿರುವ ಈ ಅಮವಾಸ್ಯೆವನ್ನು ಇಲ್ಲಿ ಸಂಭ್ರಮದೊಂದಿಗೆ ಹಬ್ಬದಂತೆ ಆಚರುಸುತ್ತಾರೆ. ರೈತರು ಹೆಗಲಿಗೆ ಹೆಗಲಕೊಟ್ಟು ಕೃಷಿ ಕಾಯಕದಲ್ಲಿ ಭಾಗಿಯಾಗುವ ರೈತನ ಮಿತ್ರ ಎನಿಸಿಕೊಂಡಿರುವ ಎತ್ತುಗಳಿಗೆ ಈ ಭಾಗದಲ್ಲಿ ವಿಶಿಷ್ಟ ಸ್ಥಾನ ಮಾನ ನೀಡಲಾಗಿದೆ. ಕಷ್ಟದಲ್ಲಿರುವ ಮನಷ್ಯನನ್ನು ಮೇಲೆತ್ತಿದ್ದು ಎತ್ತುಗಳು. ಭೂದೇವಿ ಹಾಗೂ ಎತ್ತು ಇರದೆ ಜೀವನವೇ ಇಲ್ಲ. ಮಣ್ಣಿಗೂ, ಎತ್ತಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿತ್ತಿನ ಅಮವಾಸ್ಯೆಯಂದು ಮಣ್ಣಿನ ಬಸವ ಮೂರ್ತಿಗಳನ್ನು ಪೂಜೆಗೈದಲ್ಲಿ ಸಕಾಲದಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಈ ಭಾಗದ ರೈತಾಪಿ ವರ್ಗದ್ದು. ಹೀಗಾಗಿ ಇದೇ ಜೂ:28-29ರಂದು ರೈತರು ಹಾಗೂ ಸಾರ್ವಜನಿಕರು ಮಣ್ಣಿನ ಎತ್ತುಗಳನ್ನು ತಂದು ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸುವುದು ಪ್ರತಿ ವರ್ಷದ ವಾಡಿಕೆ.

ಮಣ್ಣಿತ್ತಿನ ಅಮವಾಸ್ಯೆ ನಿಮಿತ್ತ ಗ್ರಾಮದ ಕುಂಬಾರರು ಬಸವ ಮೂರ್ತಿಗಳ ತಯಾರಿಸಿದ್ದಾರೆ. ಗ್ರಾಮ ಸುತ್ತಮುತ್ತಲ ಗ್ರಾಮಗಳಿಗೆ ಹಿಂದೆ ಹೋಗಿ ಮಾರಟ ಮಾಡಿ ಬರುತ್ತಾರೆ. ಕಳೆದ ಎರಡು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲ್ಲ ಗ್ರಾಮಗಳಿಲ್ಲಿ ಮಾರಟ ಮಾಡುತ್ತಾರೆ. ಜನರು ತಮಗೊಪ್ಪವ ಮಣ್ಣಿನ ಎತ್ತುಗಳನ್ನು ಮತ್ತು ಮಣ್ಣಿನಿಂದ ಮಾಡಿದ ಮೇವು ಹಾಕುವ ಗ್ವಾದಲಿಯನ್ನು ಕರಿದಿಸಿ ಮನೆಗೆ ತಂದು ದೇವರ ಜಗಿಲಿಯ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಹೋಳಿಗೆ, ಬೆಲ್ಲದ ಬೇಳೆ, ಕರಿ ಕಡುಬು ಮಾಡಿ ನೈವೇದ ಮಾಡುವರು. ಮಣ್ಣೆತ್ತಿಗೆ ನಮಸ್ಕರಿಸಿ ಭಕ್ತಿ-ಭಾವ ಮೆರೆಯುತ್ತಾರೆ.

ಇದನ್ನೂ ಓದಿ: ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ

ನಮ್ಮ ಸಂಸ್ಕೃತಿಯಲ್ಲಿ ಭೂಮಿಗೆ ಮಹತ್ವದ ಸ್ಥಾನವಿದೆ. ಅಷ್ಟೇ ಮಹತ್ವವನ್ನು ಎತ್ತುಗಳಿಗೂ ನೀಡಲಾಗಿದೆ. ಮೊದಲು ಮನುಷ್ಯನ ಕೈಹಿಡಿದಿದ್ದು ಭೂ ತಾಯಿ. ನಂತರದಲ್ಲಿ ಎತ್ತುಗಳು, ಹೀಗಾಗಿ ಮಣ್ಣೆತ್ತನ್ನು ಪೂಜೆ ಮಾಡಲಾಗುತ್ತದೆ. ಇದರಿಂದ ಎತ್ತುಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎನ್ನುವುದಕ್ಕೆ ಈ ಹಬ್ಬದ ಆಚರಿಸಲಾಗುತ್ತದೆ ಎನ್ನುತ್ತಾರೆ ಹಿರಿಯರು.

Advertisement

ಈ ಅಮಾವಾಸೆ ಆಚರಣೆಯಿಂದ ರೈತರ ಬದುಕು ಹಸನವಾಗಲಿದೆ ಎಂಬ ಪ್ರತೀತಿವಿದೆ. ಹಾಗಾಗಿ ಮಣ್ಣಿನಲ್ಲಿ ಎತ್ತನ್ನು ಮಾಡಿ ಪೂಜಿಸಿ ಧನ್ಯತೆ ಮೆರೆಯಲಾಗುತ್ತದೆ ಎಂಬುದು ಅನುಭವಿಗಳ ಮಾತು. ಇಲ್ಲಿ ಹಬ್ಬಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ, ರೈತರು ಮಾತ್ರವಲ್ಲದೆ ಸಾರ್ವಜನಿಕರು ಈ ಹಬ್ಬವನ್ನು ಭಕ್ತಿಯಿಂದ ಪೂಜಿಸಿ ಪುನೀತರಾಗುತ್ತಾರೆ.

ಒಟ್ಟಾರೆ ಜಗತ್ತು ಎಷ್ಟೆ ಆಧುನಿಕರಣಗೊಂಡರೂ, ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದರೂ, ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆ, ಸಂಸ್ಕೃತಿ, ಪರಂಪರೆಗೆ ಯಾವತ್ತೂ ಧಕ್ಕೆಯಾಗಿಲ್ಲ. ಆದರೆ, ಯಾಂತ್ರಿಕ ಯುವದ ಜಂಜಾಟದ ಬದುಕಿನಲ್ಲಿ ಕೆಲ ಹಬ್ಬಗಳುಕೊಂಚ ಮಂಕಾಗಿದರೂ ಅವು ಇಂದಿಗೂ ತನ್ನ ವಿಶಿಷ್ಟತೆ ಉಳಿಸಿಕೊಂಡು ಹೊಸ ಪೀಳಿಗೆಗೆ ಮುಂದುವರೆಸಿವೆ.

ಹಿರಿಯರು ಕಾಲದಂದಿಲೂ ನಮ್ಮ ಮನೆಯಲ್ಲಿ ಈ ಎತ್ತಿನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುವುದು ವಾಡಿಕೆಯಾಗಿದೆ. ಈಗ ಸಂಪ್ರದಾಯಗಳು ಕಡಿಮೆಯಾಗುತ್ತಿವೆ. ಎತ್ತಿನ ಮೂರ್ತಿಗಳ ಮಾರಾಟವು ಕಡಿಮೆಯಾಗಿದೆ. ಆದರೂ ಮೊದಲಿನಿಂದ ಬಂದ ರೂಢಿ ತಪ್ಪಿಸಲು ಆಗುತ್ತಿಲ್ಲ  ಶರಣಪ್ಪ ಕುಂಬಾರ ಗ್ರಾಮಸ್ಥ

ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆ, ಸಂಸ್ಕೃತಿ, ಪರಂಪರೆಗಳನ್ನು ಇಂದಿಗೂ ಆಚರಣೆ ಮಾಡಿಕೊಂಡು ಬಂದ್ದಿದೇವೆ.  ಪರಸಪ್ಪ ಗೌಡ್ರ,ಮಾಟೂರು ಗ್ರಾಮದ ರೈತ

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next