Advertisement
ಬ್ರಿಟಿಷರ ಕಾಲದಲ್ಲಿ ಸ್ವತ್ಛತಾ ಕಾರ್ಮಿಕರ ಓಡಾಟಕ್ಕೆಂದು ನಿರ್ಮಾಣಗೊಂಡಿದ್ದ ಈ ಕಾಲು ಹಾದಿ ಮಾದರಿಯ ರಸ್ತೆ ಪಾಳು ಬಿದ್ದಿತ್ತು. ತ್ಯಾಜ್ಯರಾಶಿ ಕೂಡ ಇಲ್ಲಿತ್ತು. ಕೆಲವು ವರ್ಷಗಳ ಹಿಂದೆ ಸ್ವತ್ಛಗೊಳಿಸಿ ಇಂಟರ್‌ಲಾಕ್ ಹಾಕಲಾಗಿತ್ತು. ಇದರಿಂದಾಗಿ ಸ್ಥಳೀಯ ಪಾದಚಾರಿಗಳು ಈ ರಸ್ತೆಯನ್ನು ಬಳಸುತ್ತಿದ್ದರು. ವಾಹನಗಳ ಸಂಚಾರಕ್ಕೂ ಬಳಕೆಯಾಗುತ್ತಿತ್ತು. ಜನರು, ವಾಹನಗಳ ಓಡಾಟ ಕಡಿಮೆ ಯಾಗಿದ್ದರೂ ತುರ್ತು ಸಂದರ್ಭಗಳಲ್ಲಿ ತುಂಬಾ ಪ್ರಯೋಜನಕಾರಿಯಾಗಿತ್ತು. ಆದರೆ ಕೆಲವು ತಿಂಗಳುಗಳಿಂದ ಈ ರಸ್ತೆಯಲ್ಲಿ ದಟ್ಟ ಹುಲ್ಲು ಬೆಳೆದು ನಿಂತಿದೆ. ಕೆಲವು ಗಿಡಗಳು ಕೂಡ ಬೆಳೆದು ಇಂಟರ್‌ಲಾಕ್ ಕಿತ್ತು ಹೋಗುವಂತಿದೆ. ಇದೇ ರಸ್ತೆಯ ಇನ್ನೊಂದು ಬದಿಯಲ್ಲಿ ಇರುವ ಕಾರ್ ವಾಷ್ ಸೆಂಟರ್‌ಗೆ ಬಂದಿರುವ ಕಾರುಗಳನ್ನು ಇಲ್ಲಿಯೇ ನಿಲ್ಲಿಸಿಡಲಾಗುತ್ತಿದ್ದು ಪಾದಚಾರಿಗಳು ನಡೆದಾಡುವುದಕ್ಕೂ ಸ್ಥಳವಿಲ್ಲದಂತಾ ಗಿದೆ. ಪಾಲಿಕೆಯಿಂದ ಹಣ ವ್ಯಯಿಸಿ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿದ್ದ ಈ ಒಳರಸ್ತೆ ಈಗ ನಿರ್ಲಕ್ಷ್ಯಕ್ಕೊಳಪಟ್ಟು ದುಸ್ಥಿತಿಗೆ ತಲುಪಿದೆ. ಸಾರ್ವಜನಿಕರ ಉಪಯೋಗಕ್ಕೆ ಸಿಗದಂತಾಗಿದೆ. Advertisement
Mannagudda: ಹುಲ್ಲು ಬೆಳೆದು ಮುಚ್ಚಿದ ದಾರಿ; ಉದ್ದಕ್ಕೂ ವಾಹನ ಪಾರ್ಕಿಂಗ್
02:07 PM Sep 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.