Advertisement

ಮನ್ನಾಎಖೇಳ್ಳಿ ತಾಲೂಕು ಕೇಂದ್ರವಾಗಲಿ

11:45 AM Jan 12, 2018 | |

ಹುಮನಾಬಾದ: ಚಿಟಗುಪ್ಪ ಪಟ್ಟಣ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಇದೀಗ ಎಲ್ಲಾ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ ಎಂದು ಎದುರು ನೋಡುತ್ತಿರುವ ಸಂದರ್ಭದಲ್ಲೇ ಮನ್ನಾಎಖೇಳ್ಳಿ ತಾಲೂಕು ಹೋರಾಟ ಸಮಿತಿ ಆಕ್ಷೇಪಣೆ ಸಲ್ಲಿಸಿದೆ.

Advertisement

ಎರಡು ದಶಕಕ್ಕೂ ಅಧಿಕ ಅವಧಿಯಿಂದ ಮನ್ನಾಎಖೇಳ್ಳಿ ಹಾಗೂ ಚಿಟಗುಪ್ಪ ನಿವಾಸಿಗಳು ತಾಲೂಕು ಕೇಂದ್ರಕ್ಕಾಗಿ ಹೋರಾಟ ನಡೆಸಿದ್ದರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಟಗುಪ್ಪ ತಾಲೂಕು ಕೇಂದ್ರವೆಂದು ಘೋಷಣೆಯಾಗಿತ್ತು. ನಂತರ ಸಿದ್ದರಾಮಯ್ಯ ಸರ್ಕಾರ ಕೂಡ ತಾಲೂಕು ಕೇಂದ್ರವೆಂದು ಗುರುತಿಸಿ, ತಾಲೂಕು ಕೇಂದ್ರಕ್ಕೆ ಬೇಕಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಲು ಸಿದ್ಧತೆ ನಡೆಸುತ್ತಿರುವಾಗ ಇದೀಗ ಮನ್ನಾಎಖೇಳ್ಳಿ ಹೊರಾಟ ಸಮಿತಿಯವರು ಚಿಟಗುಪ್ಪ ತಾಲೂಕು ಕೇಂದ್ರಕ್ಕೆ ಮನ್ನಾಎಖೇಳ್ಳಿಯನ್ನು ಸೇರಿಸದಂತೆ ಒತ್ತಾಯಿಸಿ ಜಿಲ್ಲಾ ಧಿಕಾರಿಗಳಿಗೆ ಹಾಗೂ ಶಾಸಕ ಅಶೋಕ ಖೇಣಿ ಅವರಿಗೆ ಆಕ್ಷೆಪಣಾ ಅರ್ಜಿ ಸಲ್ಲಿಸಿದ್ದಾರೆ.

ಮನ್ನಾಎಖೇಳ್ಳಿ ಗ್ರಾಮವು ಹುಮನಾಬಾದ ತಾಲೂಕು ಕೇಂದ್ರದಿಂದ 30 ಕಿ.ಮೀ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಿಂದ 30 ಕಿ.ಮೀ. ತೆಲಂಗಾಣ ಗಡಿಯಿಂದ 30 ಕಿ.ಮೀ., ಬೀದರದಿಂದ 30 ಕಿ.ಮೀ. ಅತಂರದಲ್ಲಿದೆ. ಹುಮನಾಬಾದ ತಾಲೂಕು ಕೇಂದ್ರದಿಂದ ಕೇವಲ 15 ಕಿ.ಮೀ. ದೂರದಲ್ಲಿನ ಚಿಟಗುಪ್ಪ ಪಟ್ಟಣಕ್ಕೆ ಮನ್ನಾಎಖೇಳ್ಳಿ ಸುತ್ತಲ್ಲಿನ ಗ್ರಾಮಗಳನ್ನು ಸೇರಿಸಿದರೆ ಈ ಭಾಗದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಚಿಟಗುಪ್ಪ ಹುಮನಾಬಾದ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಬಹುತೇಕ ಗ್ರಾಮಗಳು ಬೀದರ ದಕ್ಷಿಣ ಕ್ಷೇತ್ರದಾಗಿದ್ದು, ಮನ್ನಾಎಖೇಳ್ಳಿ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಸ್ಥಾಪಿಸಬೇಕು ಎಂದು ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದ್ದು, ಸದ್ಯ ಮನ್ನಾಎಖೇಳ್ಳಿ ಹಾಗೂ ಸುತ್ತಲಿನ ಗ್ರಾಮಗಳು ಹುಮನಾಬಾದ ತಾಲೂಕಿನಲ್ಲಿಯೆ ಇರಲ್ಲಿ. ಇಲ್ಲವೇ ಬೀದರ್‌ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಶಾಸಕ ಅಶೋಕ ಖೇಣಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 

ಹೋರಾಟ ಸಮಿತಿಯವರು ಈಗಾಗಲೇ ಮನ್ನಾಎಖೇಳ್ಳಿ ತಾಲೂಕು ಸ್ವಯಂ ಘೋಷಿತ ತಾಲೂಕು ಎಂದು ಗುರುತಿಸಿಕೊಂಡು ನೀಲ ನಕ್ಷೆ ಕೂಡ ತಯಾರಿಸಿಕೊಂಡು ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. 

ಬಹುತೇಕ ಜನರು ಆ ನಿಲ ನಕ್ಷೆ ನೋಡಿ, ಮನ್ನಾಎಖೇಳ್ಳಿ ತಾಲೂಕು ಕೇಂದ್ರ ಆಗಬೇಕು ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಕಳೆದ ಎರಡು ದಶಕಕ್ಕೂ ಅಧಿಕ ಅವಧಿಯಿಂದ ಚಿಟಗುಪ್ಪ ನಿವಾಸಗಿಗಳು ಹೋರಾಟ ನಡೆಸಿದ
ಪರಿಣಾ ತಾಲೂಕು ಕೇಂದ್ರವಾಗಿದ್ದು, ಇದೀಗ ಮುಂದಿನ ನಡೆಗಳು ಹೇಗಿರುತ್ತವೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Advertisement

1994ರಿಂದ ಮನ್ನಾಎಖೇಳಿ ತಾಲೂಕು ಕೇಂದ್ರ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಈ ಭಾಗದ ಜನರು ಎರಡು ದಿಕ್ಕಿನಲ್ಲಿ ಹಂಚಿಹೊಗಿದ್ದಾರೆ. ಮನ್ನಾಎಖೇಳಿ ಸುತ್ತಲ್ಲಿನ ಗ್ರಾಮಗಳು ಹುಮನಾಬಾದ ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಉಳಿದವರು ಬೀದರ ತಾಲೂಕಿಗೆ ಒಳಪಡುತ್ತಿದ್ದರು. ಇದೀಗ ಚಿಟಗುಪ್ಪ ತಾಲೂಕು ಕೇಂದ್ರಕ್ಕೆ ಸೇರ್ಪಡೆ ಮಾಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಈ ಕುರಿತು ಜ.4ರಂದು ಜಿಲ್ಲಾ ಧಿಕಾರಿಗಳಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗಿದೆ.
ಸಂಬಣ್ಣಾ ದಂಡಿನ್‌, ಮನ್ನಾಎಖೇಳ್ಳಿ ಹೋರಾಟ ಸಮಿತಿ ಮುಖಂಡ

60 ವರ್ಷಗಳಿಂದ ಚಿಟಗುಪ್ಪ ತಾಲೂಕು ಕೇಂದ್ರಕ್ಕಾಗಿ ಸತತ ಹೋರಾಟ ಮಾಡಲಾಗಿದೆ. ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಈಗಾಗಲೇ ಎಲ್ಲಾ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಮನ್ನಾಎಖೇಳ್ಳಿ ಭಾಗದ ಬೇಮಳಖೇಡಾ ಕೂಡ ಚಿಟಗುಪ್ಪಕ್ಕೆ ಸಮೀಪವೇ ಇದೆ. ಮನ್ನಾಎಖೇಳ್ಳಿ ತಾಲೂಕು ಕೇಂದ್ರಕ್ಕೆ ನಮ್ಮದು ಸಮ್ಮತಿ ಇದೆ. ಆದರೆ ಇದಕ್ಕೆ ವಿವಾದ ಬೇಡ. 
 ಅಶೋಕ ಗುತ್ತೆದಾರ, ಚಿಟಗುಪ್ಪ ತಾಲೂಕು ಹೋರಾಟ ಸಮಿತಿ ಮುಖಂಡ

ಮನ್ನಾಎಖೇಳ್ಳಿ ತಾಲೂಕು ಕೇಂದ್ರ ಕುರಿತು ಸ್ಥಳೀಯ ಹೋರಾಟ ಸಮಿತಿ ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ಮುಂದಿನ ಕೆಲ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಶೋಖ ಖೇಣಿ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರು 

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next