ಬಹು ಹಿಂದೆಯೇ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದರೂ ಇಂಧನ ಇಲಾಖೆ ಮಾತ್ರ ಇನ್ನೂ ಗ್ರಾಮ ಪಂಚಾಯತ್‌ಗಳ ವಿದ್ಯುತ್ ಬಿಲ್‌ನ ಬಾಕಿಗೆ ಬಡ್ಡಿ ಸೇರಿಸುತ್ತಲೇ ಇದೆ. ಇದರಿಂದಾಗಿ ಪಂಚಾಯತ್‌ಗಳ ವಿದ್ಯುತ್ ಬಿಲ್ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ..
Advertisement
ಈಗಾಗಲೇ ಸರಕಾರ ಬಿಲ್‌ನ ಬಾಕಿ ಮೊತ್ತವನ್ನು ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹಣ ಕಟ್ಟಲ್ಲ ಎಂದು ಪಂಚಾಯತ್ ರಾಜ್ ಇಲಾಖೆ ಹಠ ಹಿಡಿದಿದೆ. 2015ರ ಮಾರ್ಚ್ ಅಂತ್ಯದವರೆಗಿನ ಬಿಲ್ ಮನ್ನಾ ಆಗಿರುವುದರಿಂದ ಹೊಸ ಬಿಲ್ ಜತೆ ಹಳೆಯ ಬಾಕಿಯನ್ನು ಸೇರಿಸಬೇಡಿ. 2015ರ ಎಪ್ರಿಲ್‌ನಿಂದ ಹಿಂದಿನ ಬಾಕಿ ತೆಗೆದು ಝೀರೋ ಬಿಲ್ ಕೊಡುವಂತೆ ಪಂಚಾಯತ್ ರಾಜ್ ಸಚಿವಾಲ¿ ಇಂಧನ ಇಲಾಖೆಗೆ ಆಗ್ರಹಿಸುತ್ತಿದೆ. ಆದರೆ, ಇದಕ್ಕೆ ಒಪ್ಪದ ಇಂಧನ ಇಲಾಖೆ ಹಳೆ ಯದು ಮತ್ತು ಹೊಸ ಬಿಲ್ ಅನ್ನು ಸೇರಿಸುತ್ತಿದೆ.
(ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್) ನಿಂದ ಪಡೆದ ವಿದ್ಯುತ್ ಬಾಕಿ ಬಿಲ್ಲನ್ನು ಪಿಸಿಕೆಎಲ್ ಬ್ಯಾಂಕ್‌ಗಳಿಂದ ಸಾಲ ಪಡೆದು ತುಂಬಬೇಕು ಎಂದು ಸೂಚನೆ ನೀಡಿತ್ತು. 2015ರ ಮಾರ್ಚ್‌ವರೆಗೆ ಬೆಸ್ಕಾಂ 1,797 ಕೋ. ರೂ., ಮೆಸ್ಕಾಂ-219 ಕೋಟಿ, ಹೆಸ್ಕಾಂ-485 ಕೋಟಿ, ಜೆಸ್ಕಾಂ-748 ಕೋಟಿ ಹಾಗೂ ಚೆಸ್ಕ್-516 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿವೆ. ಎಸ್ಕಾಂಗಳು ಪಂಚಾಯತ್‌ಗಳ ಬಾಕಿ ಹೊರತಾಗಿಯೂ ಕೆಪಿಸಿಎಲ್‌ಗೆ 15,252 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಪಂಚಾಯತ್‌ಗಳ ಬಾಕಿ ಹಣಕ್ಕೆ ಮಾತ್ರ ಸರಕಾರ ಭದ್ರತೆ ಒದಗಿಸಲಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Related Articles
Advertisement