Advertisement

ವಿದೇಶಿ ವಸ್ತುಗಳ ನಿರಾಕರಣೆ; ಮೇಡ್ ಇನ್ ಇಂಡಿಯಾ ಉತ್ಪನ್ನಗಳತ್ತ ದೇಶದ ಜನರ ಚಿತ್ತ: ಪಿಎಂ ಮೋದಿ

01:27 PM Dec 27, 2020 | Adarsha |

ನವದೆಹಲಿ: ದೇಶದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಕುರಿತಾಗಿ ಜನರು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಬಹುಪಾಲು ವಿದೇಶಿ ವಸ್ತುಗಳ ಬಳಕೆಯನ್ನು ನಿಲ್ಲಿಸುವ ಮೂಲಕ ಸ್ವದೇಶಿಯವಾಗಿ ರೂಪಿಸಲಾದ ವಸ್ತುಗಳನ್ನೇ ಜನರು ಖರೀಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

2020ರ ಸಾಲಿನ ಕೊನೆಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಝೀರೋ ಎಫೆಕ್ಟ್- ಝೀರೋ ಡಿಫೆಕ್ಟ್’ ಎಂಬ ಆಲೋಚನೆಯ ಮೂಲಕ ಕೆಲಸ ಮಾಡಬೇಕಾದ ಸಮಯ ಇದಾಗಿದ್ದು, ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವ ಸಂಕಲ್ಪವನ್ನು ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದರು.

ಕೋವಿಡ್ ಮಹಾಮಾರಿಯಂತಹ ಸಮಸ್ಯೆಯ ನಡುವೆಯೂ ಜನರು ಸ್ವದೇಶಿ ವಸ್ತುಗಳನ್ನು ಬಳಸೋಣ ಎಂಬ ನಿಲುವನ್ನು ಅನುಸರಿಸುತ್ತಿದ್ದಾರೆ. ದೇಶದಲ್ಲಿ ಜನರಿಗೆ ಅಗತ್ಯವಿರುವ ಎಲ್ಲಾ ವಿಧವಾದ  ಅಗತ್ಯ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಈ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ವಿಧವಾಗಿ ರಾಜಿಯಾಗುವುದು ಬೇಡ ಎಂದು ನುಡಿದರು.

ಇದನ್ನೂ ಓದಿ:ಅಜಿಂಕ್ಯ ರಹಾನೆ ಶತಕದ ಆಟ: ಟೀಂ ಇಂಡಿಯಾದಿಂದ ದೂರಾದ ಸಂಕಟ

ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದ ಉತ್ಪನ್ನಗಳನ್ನು ದೇಶದಲ್ಲಿ ತಯಾರಿಸುವಂತೆ ಎಲ್ಲಾ ಕೈಗಾರಿಕೆಗಳಿಗೆ ಮನವಿ ಮಾಡಿದ ಪ್ರಧಾನಿ ಮೋದಿ ದೇಶದಲ್ಲಿ ‘ಆತ್ಮ ನಿರ್ಭರತೆ’ ಎಂಬ ಹೊಸ ಶಕ್ತಿಯೊಂದು ಜನ್ಮತಾಳಿದೆ. ಆ ಮೂಲಕ ದೇಶದಲ್ಲಿ ತಯಾರಿಸಲಾಗುತ್ತಿರುವ ಉತ್ಪನ್ನಗಳು ಹಾಗೂ ಆಟಿಕೆಗಳಿಗೆ ಜಾಗತಿಕವಾದ ಬೇಡಿಕೆ ಹೆಚ್ಚುತ್ತಿದೆ ಎಂದರು.

Advertisement

ಮನ್ ಕೀ ಬಾತ್ ನಲ್ಲಿ ಕರ್ನಾಟಕವನ್ನು ನೆನಪಿಸಿಕೊಂಡ ಮೋದಿ

‘ಮನ್ ಕೀ ಬಾತ್’ ನಲ್ಲಿ ಕರ್ನಾಟಕವನ್ನು ನೆನಪಿಸಿಕೊಂಡ ಮೋದಿ, ರಾಜ್ಯದ ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆ.ಜಿ ಗೂ ಅಧಿಕ ಕಸವನ್ನು ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ದಂಪತಿಗಳನ್ನು ಶ್ಲಾಘಿಸಿದರು. ಅಲ್ಲದೆ ಸ್ವಚ್ಛ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಒಂದೇ  ಒಂದು ಕಸ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಇದನ್ನೂ ಓದಿ:ಕೋವಿಡ್ ಸಾಂಕ್ರಮಿಕವೇ ಕೊನೆಯಲ್ಲ, ಪ್ರಸ್ತುತ ಜಗತ್ತು ನಿರ್ಲಕ್ಷ್ಯದಿಂದ ಕೂಡಿದೆ:WHO ಮುಖ್ಯಸ್ಥ

ದೇಶದಲ್ಲಿರುವ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.  ಅದರಲ್ಲೂ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿದೆ ಎಂದರು. ಈ ನಡುವೆ ಕರ್ನಾಟಕದಿಂದ ಬಂದ ಪತ್ರವೊಂದನ್ನು ಓದಿದ ಮೋದಿ, ಶ್ರೀರಂಗಪಟ್ಟಣ ಸಮೀಪದ ಮಂದಿರವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛಗೊಳಿಸಿದ ಕಾರ್ಯವನ್ನು ಅಭಿನಂದಿಸುವ ಮೂಲಕ ಯುವ ಸಮೂಹದ ಇಂತಹ ಕಾರ್ಯಗಳು ದೇಶದ ಜನರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next