ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಭಾನುವಾರ ತಮ್ಮ ಮನದಾಳದ ಮಾತುಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡರು. ವಿವೇಷವಾಗಿ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದರು.
ನಾನು ಪೋಕರಲ್ಲಿ ಮನವಿ ಮಾಡುವುದೆಂದರೆ ಮಕ್ಕಳಿಂದ ನೀವು ನಿರೀಕ್ಷಿಸುವ ಬದಲು ಸ್ವೀಕರಿಸಬೇಕು.ನಮ್ಮ ಮಕ್ಕಳಿಂದ ನಮ್ಮ ನಿರೀಕ್ಷೆಗಳು ಭಾರವಾಗಿರಬಾರದು ಎಂದರು.
ಪರೀಕ್ಷೆಗೂ ಜೀವನದ ಸಫಲತೆಗೂ ಇಲ್ಲ ವಿಫಲತೆಗೆ ಸಂಬಂಧ ಇರುವುದಿಲ್ಲ. ವಿದ್ಯಾರ್ಥಿಗಳು ಅನ್ನು ಆಗಿ ಪರಿವರ್ತಿಸಬೇಕು.ಸಮಸ್ಯೆಗಳ ಮಾರ್ಗಗಳನ್ನು ಸ್ವೀಕರಿಸಿದಾಗ ಮಾತ್ರ ವಿಷಯಗಳು ಸುಲಭವಾಗುತ್ತದೆ ಎಂದರು.
ಎಲ್ಲರೂ ಹೇಳುತ್ತಾರೆ ನಾನು ಅದನ್ನೇ ಮತ್ತೆ ಹೇಳುತ್ತಿದ್ದೇನೆ ವಿದ್ಯಾರ್ಥಿಗಳೆ ಪರೀಕ್ಷೆಯಲ್ಲಿ ವಂಚಿಸಬೇಡಿ.ಯಾರು ನಿಮ್ಮನ್ನು ಹಿಡಿಯದಿದ್ದರೂ ವಂಚಿಸಿರುವುದು ನಿಮಗೆ ಗೊತ್ತಿರುತ್ತದೆ ಅಲ್ಲವೆ. ನೀವೆ ವಂಚಿಸಿದರೆ ನಾಳೆ ನಿಮ್ಮ ಮಕ್ಕಳಿಗೆ ಏನು ಹೇಳುತ್ತೀರಿ ಎಂದರು.
ಹೆಚ್ಚು ನಗಿ ಹೆಚ್ಚು ಅಂಕ ಪಡೆಯಿರಿ.P ಎಂದರೆ ಪ್ರಿಪೇರ್ ಮತ್ತು P ಅಂದರೆ ಪ್ಲೇ ಎಂದು.ಪರೀಕ್ಷೆಗಳ ವೇಳೆ ಹೆಚ್ಚು ಓದುವುದು ಅತ್ಯವಾಗಿದ್ದು, ನಡುವೆ ಸಣ್ಣ ವಿರಾಮ ಪಡೆಯಿರಿ , ಧೀರ್ಘ ಶ್ವಾಸ ಧಾರಣೆ ಮಾಡಿಕೊಳ್ಳಿ ಇದು ನಿಮ್ಮನ್ನು ರಿಲಾಕ್ಸ್ ಮಾಡುತ್ತದೆ. ವಿದ್ಯಾರ್ಥಿಗಳು ಒತ್ತಡವನ್ನು(pressure)ಸಂತೋಷ (pleasure)ಆಗಿ ಪರಿವರ್ತಿಸಿಕೊಳ್ಳಿ ಎಂದು ಸಲಹೆ ನೀಡಿದರು.