Advertisement

50 ಕಂತು ಪೂರೈಸಿದ ಪ್ರಧಾನಿ ಮೋದಿ ಮನ್‌ಕಿ ಬಾತ್‌

06:00 AM Nov 25, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ ಇಂದಿಗೆ (ಭಾನುವಾರ) 50 ಕಂತುಗಳನ್ನು ಪೂರೈಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಪರೀಕ್ಷೆಯನ್ನು ಎದುರಿಸುವುದು, ತಾಪಮಾನ ವೈಪ ರೀತ್ಯ ಹಾಗೂ ಮಾದಕದ್ರವ್ಯ ವ್ಯಸನ ಸೇರಿದಂತೆ ಹಲವು ವಿಷಯ ಗಳ ಬಗ್ಗೆ ಈ 50 ಕಂತುಗಳಲ್ಲಿ ಪ್ರಧಾನಿ ಮೋದಿ ಮಾñ ‌ನಾಡಿದ್ದಾರೆ. 2014 ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ಮನ್‌ ಕಿ ಬಾತ್‌ನಲ್ಲಿ, ಖಾದಿ ಉತ್ಪನ್ನವನ್ನು ಬಳಸುವಂತೆ ಜನರಿಗೆ ಕರೆ ನೀಡಿದ್ದರು. ಈ ಕಂತು ಪ್ರಸಾರವಾದ ನಂತರದಲ್ಲಿ ಖಾದಿ ಉತ್ಪನ್ನದ ಮಾರಾಟ ಶೇ. 120ರಷ್ಟು ವೃದ್ಧಿಯಾಗಿದೆ ಎಂದು ಪ್ರಧಾನಿ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರದಂದು ಆಲ್‌ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದಲ್ಲಿ ಮನ್‌ ಕಿ ಬಾತ್‌ ಕಾರ್ಯಕ್ರಮ ಪ್ರಸಾರವಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next