Advertisement

ಕ್ರೀಡೆಯಿಂದ ಮನುಕುಲದ ಸೌಹಾರ್ದ ಶಕ್ತಿ ಉತ್ಪನ್ನ

12:38 PM Sep 06, 2017 | |

ಪಿರಿಯಾಪಟ್ಟಣ: ಕ್ರೀಡೆ ಜಗತ್ತಿನ ಮನುಕುಲದ ಸೌಹಾರ್ದ ಕೊಂಡಿಯಾಗಿ ಕೆಲಸ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್‌ ತಿಳಿಸಿದರು. ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ನಿರೀಕ್ಷಿಸಿದಷ್ಟು ಫ‌ಲಿತಾಂಶವನ್ನು ಕಾಣದಿರುವುದಕ್ಕೆ ಸರ್ಕಾರಗಳ ಏಕರೀತಿಯ ಕ್ರೀಡಾ ನೀತಿಯನ್ನು ಜಾರಿಗೊಳಿಸದಿರುವುದೇ ಕಾರಣ ಎಂದರು. ವಿದೇಶದಲ್ಲಿರುವ ಎನ್‌ಆರ್‌ಐಗಳು ಹಾಗೂ ಸಂಘ ಸಂಸ್ಥೆಗಳ ರೀತಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೋ›ತ್ಸಾಹ ನೀಡಿದಲ್ಲಿ ಪ್ರತಿಭೆಗಳನ್ನು ಹೊರತರಬಹುದು ಎಂದರು.

ಡಿಡಿಪಿಒ ಶ್ಯಾಮಲಾ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಾಗಮ್ಮ ಮಾತನಾಡಿದರು. ಬಾಲಕರ ಸಮಗ್ರ ಪ್ರಶಸ್ತಿಯನ್ನು ರಾವಂದೂರಿನ ಪದವಿ ಪೂರ್ವ ಕಾಲೇಜು ಪಡೆದರೆ, ಬಾಲಕಿಯರ ವಿಭಾಗದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪಿರಿಯಾಪಟ್ಟಣ ಪ್ರಶಸ್ತಿ ಪಡೆಯಿತು.

ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್‌ ಆಗಿ ರಾವಂದೂರು ಕಾಲೇಜಿನ ಕೆ.ವೈ.ಮನೋಜ್‌ಆಯ್ಕೆಯಾದರೆ, ಬಾಲಕಿಯರ ವಿಭಾಗದಲ್ಲಿ ಆವರ್ತಿ ರಾಜರಾಜೇಶ್ವರಿ ಕಾಲೇಜಿನ ಎ.ಎಸ್‌. ಕಾವ್ಯಆಯ್ಕೆಯಾದರು. ಇತ್ತೀಚೆಗೆ ನಿವೃತ್ತರಾದ ಡಿಪಿಬಿಎಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಟಿ.ರಮೇಶ್‌ರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಿಡಿಸಿ ಅಧ್ಯಕ್ಷ ಸತೀಶ್‌, ಪ್ರಾಂಶುಪಾಲರಾದ ರಾಜು, ಪಾರ್ಥಸಾರಥಿ, ಎನ್‌ಎಸ್‌ಎಸ್‌ ಅಧಿಕಾರಿ ಬೇಬಿ, ಪ್ರಾಧ್ಯಾಪಕರಾದ ರಾಜೇಶ್‌, ಯುವ ಮುಖಂಡ ಶ್ರೀನಿವಾಸ್‌ ಆರ್‌.ತುಂಗಾ, ಬಿರ್ಲಾ ಹರೀಶ್‌, ಶಿವರಾವ್‌, ದೇವೇಂದ್ರ, ಕೆ.ಎನ್‌.ಮಂಜು, ಮಣಿ ಉಪ್ಪಾರ್‌ ಇತರರು ಇದ್ದರು.

Advertisement

ಕ್ರೀಡೆಯಿಂದ ದೈಹಿಕ ಶಕ್ತಿ, ಪ್ರತಿಭೆ ಅನಾವರಣ
ಪಿರಿಯಾಪಟ್ಟಣ:
ವಿದ್ಯೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಸ್ತನ್ನು ರೂಡಿಸುತ್ತದೆ ಆದರೆ ಕ್ರೀಡೆ ದೈಹಿಕ ಶಕ್ತಿಯನ್ನು ನೀಡುತ್ತದೆ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಆಟ ಆಡುವುದರ ಮೂಲಕ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದಾಗುತ್ತದೆ ಎಂದು ಶ್ರೀ.ಚನ್ನಬಸವ ದೇಶಿಕೇಂದ್ರ ಶ್ರೀ ತಿಳಿಸಿದರು.

ಅವರು ತಾಲೂಕಿನ ಬೆಟ್ಟದಪುರದ ಎಸ್‌ಸಿವಿಡಿಎಸ್‌ ಪೌಢಶಾಲೆಯ ಪ್ರಾಯೋಜಕತ್ವ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಪಾರಿವಾಳವನ್ನು ಗಗನಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿದರು.

ವಿಧ್ಯಾರ್ಥಿಗಳು ತಮಗೆ ಆಸಕ್ತಿ ಹೊಂದಿರುವ ಆಟದಲ್ಲಿ ತೊಡಗಿಸಿಕೊಂಡಿದ್ದರೆ ಅದು ನಿಮ್ಮ  ಮುಂದಿನ ಜೀವನದಲ್ಲಿ ಸ್ಪೂರ್ತಿದಾಯಕವಾಗಿ ನೌಕರಿ ಪಡೆಯಲು ಸಹಾಯವಾಗುತ್ತದೆ ಎಂದು ಶ್ರೀಚನ್ನಬಸವ ಶ್ರೀಗಳು ಹೇಳಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಾಶೆಟ್ಟಿ ಮಾತಾನಾಡಿದರು. 

ವಿದ್ಯಾರ್ಥಿಗಳ ಶಕ್ತಿ ತುಂಬಲು ಹಾಗೂ ಅವರಲ್ಲಿರುವ ಪ್ರತಿಭೆ ಕಾಣಲು ಕ್ರೀಡೆ ಸಹಕಾರಿ ಎಂದರು. ತಾಲೂಕು ದೈಹಿಕ ಪರಿವೀಕ್ಷಕ ಮಹಾದೇವಪ್ಪ, ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷೆ ಗೀತಾ, ಎಸ್‌ಸಿವಿಡಿಎಸ್‌ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಲೇಶ್‌, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಂಚಾಕ್ಷರಿ, ಜೆಡಿಎಸ್‌ ಮುಖಂಡ ರಾಜೇಂದ್ರ ನಿವೃತ ಶಿಕ್ಷಕ ನಾಗರಾಜೇಗೌಡ ಇತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next